ಮೊಬೈಲ್ ಚಾರ್ಜರ್ ಸ್ವಿಚ್ ಆಫ್ ಮಾಡದೆ ಹಾಗೆ ಬಿಟ್ಟು ಬಿಡ್ತೀರಾ? – ಯಾವತ್ತು ಹಾಗೇ ಮಾಡಬೇಡಿ

ನಮ್ಮಲ್ಲಿ ಬಹುತೇಕರು ರಾತ್ರಿ ಸಮಯದಲ್ಲಿ ಮೊಬೈಲ್ ಚಾರ್ಜ್ ಹಾಕಿ ಮಲಗುವ ಅಭ್ಯಾಸ ಇದೆ. ಬೆಳಗ್ಗೆ ಎದ್ದ ತಕ್ಷಣ ನಿಮಗೆ ಮೊಬೈಲ್ ಬ್ಯಾಟರಿ ಫುಲ್ ಆಗಿರಬೇಕು ಅಂತ ಅನ್ಸುತ್ತೆ. ಹಾಗೆ ಮೊಬೈಲ್ ಚಾರ್ಜ್ ಹಾಕಿದ ಬಳಿಕ ನೀವು ಜಾರ್ಜರ್ ಅನ್ನು ಅಲ್ಲಿಯೇ ಬಿಟ್ಟು ಸ್ವಿಚ್ ಕೂಡ ಆಫ್ ಮಾಡದೆ ಇರುವುದು ನೋಡಬಹುದು. ಸ್ವಿಚ್ ಆಫ್ ಮಾಡಿಲ್ಲ ಎಂದಾದರೆ ಯಾವುದೇ ಸಮಸ್ಯೆಗಳು ಕಾಡುವುದಿಲ್ಲ ಎಂದು ನೀವು ಭಾವಿಸಿರುತ್ತೀರಿ. ಆದ್ರೆ ಇದರಿಂದ ಎಷ್ಟೆಲ್ಲಾ ಹಾನಿ ಇದೆ ಎಂಬುದು ಇಲ್ಲೊಂದು ವಿಡಿಯೋದಲ್ಲಿ ಸೆರೆಯಾಗಿದೆ. ಮೊಬೈಲ್ ಚಾರ್ಜರ್ ಹಾಕಿದ್ದ ಸ್ವಿಚ್ ಆಫ್ ಮಾಡ್ರ ರಾತ್ರಿಯಲ್ಲ ಹಾಗೆ ಬಿಟ್ಟಾಗ ಅಲ್ಲಿ ಬೆಂಕಿ ಹೊತ್ತಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸುವ ಹಲವು ಪ್ರಕರಣಗಳ ನೀವು ಕೇಳಿರಬಹುದು. ಈ ಪ್ರಕರಣಗಳಲ್ಲಿ ನಿಮಗೆ ಹಲವು ಮೊಬೈಲ್ ಬ್ಲಾಸ್ಟ್ ಆಗುವುದು, ಚಾರ್ಜ್ರ್ನಿಂದ ಬೆಂಕಿ ಹೊತ್ತಿಕೊಳ್ಳುವುದು ಸಹ ನೋಡಿರಬಹುದು. ನೀವು ಸಹ ಮನೆಯಲ್ಲಿ ಮೊಬೈಲ್ ಚಾರ್ಜ್ಗೆ ಹಾಕಿ ಬಳಿಕ ಮೊಬೈಲ್ ತೆಗೆದುಕೊಂಡು ಚಾರ್ಜರ್ ಅನ್ನು ಸ್ವಿಚ್ ಆನ್ ಮಾಡಿ ಹಾಗೆ ಬಿಡುವ ಅಭ್ಯಾಸ ಇಟ್ಟುಕೊಂಡಿರಬಹುದು. ಆದ್ರೆ ಈ ರೀತಿ ಮಾಡಿದ್ರೆ ಚಾರ್ಜರ್ ಹೀಟ್ ಆಗಿ ಬೆಂಕಿ ಹೊತ್ತಿಕೊಳ್ಳುವ ಅಪಾಯ ಹೆಚ್ಚಾಗಿರಲಿದೆ. ಇಲ್ಲೊಂದು ವಿಡಿಯೋದಲ್ಲು ಕೂಡ ಚಾರ್ಜರ್ಗೆ ಕಿಡಿ ಹೊತ್ತಿಕೊಳ್ಳುತ್ತಿರುವುದು ನೋಡಬಹುದು. ಮಲಗಿರುವ ಮಗುವಿನ ಮಕ್ಕದಲ್ಲಿಯೇ ಇಂದು ಸಾಕೆಟ್ ಇದ್ದು ಅದರಲ್ಲಿ ಮೊಬೈಲ್ ಚಾರ್ಜರ್ ಅನ್ನು ಇಡಲಾಗಿದೆ. ಇದರ ಸ್ವಿಚ್ ಆಫ್ ಮಾಡದ ಕಾರಣ ಅದರಲ್ಲಿ ಬೆಂಕಿ ಕಾಣಿಸುತ್ತಿದೆ. ಒಂದು ವೇಳೆ ಚಾರ್ಜರ್ ಈ ಶಾರ್ಟ್ ಸರ್ಕ್ಯೂಟ್ ತಡೆಯಲು ವಿಫಲವಾದರೆ ಬೆಂಕಿ ಹೊತ್ತಿ ಉರಿಯುವ ಅಪಾಯ ಇರಲಿದೆ. ಅದ್ರಲ್ಲೂ ರಾತ್ರಿ ವೇಳೆ ಎಲ್ಲರು ಮಲಗಿದ್ದ ಸಮಯದಲ್ಲಿ ಅದರ ಕಡೆಗೆ ಯಾರು ಗಮನ ಇಡುವುದಿಲ್ಲ. ಈ ವೇಳೆ ಬೆಂಕಿ ಹೊತ್ತಿಕೊಂಡರೆ ಅದನ್ನು ಗಮನಿಸುವಷ್ಟರಲ್ಲಿ ಮತ್ತಷ್ಟು ವಸ್ತುಗಳಿಗೆ ಬೆಂಕಿ ತಗುಲಬಹುದು.
ಇದರಿಂದ ಇಡೀ ಮನೆ ಬೆಂಕಿಗಾಹುತಿಯಾಗುವ ಅಪಾಯವನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ರಾತ್ರಿ ಮಲಗುವ ಸಮಯದಲ್ಲಿ ಹಾಗೆ ಉಳಿದ ಸಮಯದಲ್ಲಿ ಮೊಬೈಲ್ ಚಾರ್ಜರ್ಗಳು, ಬಳಸದೆ ಇರುವ ಎಲೆಕ್ಟ್ರಾನಿಕ್ ವಸ್ತುಗಳ ಸ್ವಿಚ್ ಅನ್ನು ಬಂದ್ ಮಾಡಿ ಇಡುವುದು ಸುರಕ್ಷತೆಯ ದೃಷ್ಟಿಯಿಂದ ಬಹಳ ಉತ್ತಮವಾಗಿದೆ.

ನೋಡಿರಿ

