ಪಾಕಿಸ್ತಾನ ಮತ್ತು ಅಫ್ಘಾನ್ ಯುದ್ಧ ನಿಲ್ಲಿಸುತ್ತೇನೆ ಅಮೆರಿಕ ಅಧ್ಯಕ್ಷ ಟ್ರಂಪ್

ಈಗಾಗಲೇ 8 ಯುದ್ದಗಳನ್ನು ನಿಲ್ಲಿಸಿರುವುದಾಗಿ ಹೇಳಿಕೊಳ್ಳುತ್ತಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಮತ್ತೊಂದು ಯುದ್ದ ನಿಲ್ಲಿಸೋಕೆ ಮುಂದಾಗಿದ್ದಾರೆ. ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ನಡುವೆ ನಡೆಯುತ್ತಿರುವ ಸಂಘರ್ಷದ ಕುರಿತು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಈ ಸಂಘರ್ಷವನ್ನು ಬಗೆಹರಿಸುವುದು ನನಗೆ ಬಹಳ ಸುಲಭ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬ್ರಹ್ಮೋಸ್ ಕ್ಷಿಪಣಿಗಳ ಮೊದಲ ಬ್ಯಾಚ್ ರೆಡಿ – ಹಸಿರು ನಿಶಾನೆ ತೋರಿಸಿದ ರಾಜನಾಥ್ ಸಿಂಗ್, ಯೋಗಿ
ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆಯ ನಂತರ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಗಡಿ ಉದ್ವಿಗ್ನತೆ ಹೆಚ್ಚುತ್ತಿರುವಾಗಲೇ ಈ ಕುರಿತು ಮಾತನಾಡಿ ಟ್ರಂಪ್” ಪಾಕಿಸ್ತಾನ ಅಫ್ಘಾನಿಸ್ತಾನದ ಮೇಲೆ ಯುದ್ದ ನಡೆಸಿದೆ ಅಥವಾ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಯುತ್ತಿದೆ ಎಂದು ನನಗೆ ಅರ್ಥವಾಗುತ್ತದೆ. ಆದರೆ ಇದನ್ನು ಪರಿಹರಿಸುವುದು ನನಗೆ ಬಹಳ ಸುಲಭ” ಎಂದು ಹೇಳಿದ್ದಾರೆ.
ಇನ್ನೂ ಈ ವೇಳೆ ಅವರು “ನಾನು ಹಲವು ಯುದ್ದಗಳನ್ನು ನಿಲ್ಲಿಸಿದ್ದರು ನನಗೆ ನೊಬೆಲ್ ಪ್ರಶಸ್ತಿ ಸಿಕ್ಕಿಲ್ಲ, ನಾನು ಈಗಾಗಲೇ 8 ಯುದ್ದಗಳನ್ನು ನಿಲ್ಲಿಸಿದ್ದೇನೆ ಆದರೆ ಎಲ್ಲರು ನೀವು ಇನ್ನೊಂದು ಯುದ್ದವನ್ನು ನಿಲ್ಲಿಸಿದರೆ ನನಗೆ ನೊಬೆಲ್ ನೀಡುವುದಾಗಿ ಪ್ರತಿಬಾರಿ ಹೇಳುತ್ತಾರೆ ಎಂದು ವಿಷಾದ ವ್ಯಕ್ತ ಪಡಿಸಿದರು. ಅಲ್ಲದೇ ಈ ಬಾರಿಯ ನೊಬೆಲ್ ವಿಜೇತೆ ಮಾರಿಯಾ ಕೊರಿನಾ ಮಚಾಡೊ ಕುರಿತು ಮಾತನಾಡಿ ಆಕೆ ಯಾರೆಂದು ನನಗೆ ತಿಳಿದಿಲ್ಲ, ಆದರೆ ಆಕೆ ತುಂಬಾ ಉದಾರಿ ಎಂದು ಹೇಳುತ್ತಾ , ಆದರೆ ನನಗೆ ಈ ಎಲ್ಲ ವಿಷಯಗಳ ಬಗ್ಗೆ ಕಾಳಜಿಯಿಲ್ಲ ನನಗೆ ಕೇವಲ ಜನರ ಜೀವ ಉಳಿಸುವ ಬಗ್ಗೆ ಮಾತ್ರ ಕಾಳಜಿ ಇದೆ. ಅಮೆರಿಕಾ ಯಾವ ನಾಯಕನೂ ಈವರೆಗೆ ಯುದ್ದಗಳನ್ನು ನಿಲ್ಲಿಸಿಲ್ಲ, ಅದನ್ನು ನಾನು ಮಾಡುತ್ತಿದ್ದೇನೆ” ಎಂದು ಹೇಳಿದ್ದಾರೆ.
ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ನಡುವೆ ಈಗಾಗಲೇ 48ಗಂಟೆಗಳ ಕದನ ವಿರಾಮ ಘೋಷಿಸಿದ್ದರು, ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ್ದು, ಪಾಕಿಸ್ತಾನ ವಾಯುಪಡೆ, ಅಪ್ಘಾನಿಸ್ತಾನದ ಗಡಿ ಪ್ರದೇಶದಲ್ಲಿ ಶೆಲ್ ದಾಳಿ ನಡೆಸಿದೆ. ಪಾಕಿಸ್ತಾನ ನಡೆಸಿದ ಈ ದಾಳಿಯಲ್ಲಿ ಮೂವರು ಸ್ಥಳೀಯ ಅಫ್ಘಾನಿಸ್ತಾನ ಕ್ರಿಕೆಟಿಗರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರ ತಾಲಿಬಾನ್ ಸಚಿವ ಅಮೀರ್ ಖಾನ್ ಮುತ್ತಾಕಿ ಭಾರತಕ್ಕೆ ಭೇಟಿ ನೀಡಿದ್ದಾಗ ಕಾಬೂಲ್ನ ಅಬ್ದುಲ್ ಹಕ್ ಚೌಕದಲ್ಲಿ ಪಾಕಿಸ್ತಾನ ನಡೆಸಿದ ಸ್ಫೋಟದಿಂದ ಈ ಉದ್ವಿಗ್ನತೆ ಉಂಟಾಗಿತ್ತು. ಅಫ್ಘಾನ್ ಅಧಿಕಾರಿಗಳು ಹಿಂಸಾಚಾರಕ್ಕೆ ಪಾಕಿಸ್ತಾನವನ್ನು ಆರೋಪಿಸಿದ್ದರು ಆದರೆ ಪಾಕಿಸ್ತಾನ ಆ ಘಟನೆಗಳಲ್ಲಿ ಯಾವುದೇ ಪಾತ್ರವನ್ನು ಒಪ್ಪಿಕೊಂಡಿರಲಿಲ್ಲ. ಆದರೆ ಬಳಿಕ ಹೆಚ್ಚಾದ ಉದ್ವಿಗ್ನತೆಯಿಂದ ನಡೆದ ಮಾತುಕತೆಯ ಬಳಿಕ ಎರಡು ದೇಶಗಳವರು 48 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದರು, ಇದು ಮುಗಿಯಲು ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಮತ್ತೆ ಪಾಕ್ ಸೇನೆ ಅಫ್ಘಾನ್ ಗಡಿಭಾಗದಲ್ಲಿ ವಾಯುದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘಿಸಿದ್ದು ಮತ್ತೆ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆಗಳು ದಟ್ಟವಾಗಿದೆ.

ನೋಡಿರಿ

