ತಪ್ಪಾಗಿ ಆಡಿದ ಮಾತಿಗೆ ಬುದ್ಧಿ ಕಲಿಸದೇ ಬಿಡಲ್ಲ! – ರಕ್ಷಿತಾ ಪರ ನಿಂತ ಕಿಚ್ಚ ಸುದೀಪ್!

ಬಿಗ್ ಬಾಸ್ ಮನೆಯಲ್ಲಿ ಈ ವಾರ ಬರೀ ಜಗಳವೇ ಸದ್ದು ಮಾಡಿತ್ತು. ಅಶ್ವಿನಿ ಗೌಡ ಹಾಗೂ ಜಾಹ್ನವಿ ರಕ್ಷಿತಾ ಶೆಟ್ಟಿ ಅವಮಾನ ಮಾಡಿದ್ರು. ಬಟ್ಟೆ ನೋಡಿ ನೀನು ಎಲ್ಲಿಂದ ಬಂದಿದ್ದೀಯಾ ಅಂತಾ ಗೊತ್ತು ಅಂತಾ ಕೀಳಾಗಿ ಮಾತನಾಡಿದ್ರು. ಈ ಬೆನ್ನಲ್ಲೇ ವೀಕ್ಷಕರು ಅಶ್ವಿನಿ ಗೌಡ ಹಾಗೂ ಜಾಹ್ನವಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕಿಚ್ಚ ಸುದೀಪ್ ಇಬ್ಬರಿಗೂ ಸರಿಯಾಗಿ ಪಾಠ ಕಲಿಸ್ಬೇಕು ಅಂತಾ ವೀಕ್ಷಕರು ಒತ್ತಾಯಿಸಿದ್ದಾರೆ. ಇದೀಗ ಸುದೀಪ್ ರಕ್ಷಿತಾ ಪರವಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ: ಕಾಶಿ ವಿಶ್ವನಾಥನ ದರ್ಶನ ಪಡೆದ ಕಾಂತಾರ ಶಿವ – ಕಾಶಿ ಯಾತ್ರೆ ಕೈಗೊಂಡ ರಿಷಬ್ ಶೆಟ್ಟಿ!
ಈ ವಾರ ಬಿಗ್‌ಬಾಸ್ ಮನೆಯಲ್ಲಿ ಗೆಜ್ಜೆ ಸದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ವಿಷಯವಾಗಿ ಅಶ್ವಿನಿ ಗೌಡ ಮತ್ತು ಜಾನ್ವಿ ಜೊತೆಯಾಗಿ ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡಿದ್ದಾರೆ. ಮಿಡ್‌ನೈಟ್ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯದ ಬಳಿಕ ಇದೇ ವಿಷಯವಾಗಿ ಮೂವರ ನಡುವೆ ದೊಡ್ಡ ಜಗಳವೇ ನಡೆದಿತ್ತು. ಈ ವೇಳೆ ಮಧ್ಯೆ ಪ್ರವೇಶಿಸಿದ್ದ ಕಾವ್ಯಾ ಅವರನ್ನು ಅಶ್ವಿನಿ ಗೌಡ ಮತ್ತು ಜಾನ್ವಿ ಟಾರ್ಗೆಟ್ ಮಾಡಿದ್ದರು. ರಕ್ಷಿತಾಗೆ ಮನಬಂದಂತೆ ಬೈದಿದ್ದಲ್ಲದೇ ರಕ್ಷಿತಾ ಬಟ್ಟೆ ನೋಡಿ ಕೀಳಾಗಿ ಮಾತನಾಡಿದ್ರು. ಇದೀಗ ಕಿಚ್ಚ ಸುದೀಪ್ ತಪ್ಪಾಗಿ ಆಡಿದ ಮಾತಿಗೆ ಬುದ್ಧಿ ಕಲಿಸದೇ ಬಿಡಲ್ಲ ಎಂದು ಹೇಳಿದ್ದಾರೆ.
ಇಂದಿನ ಮೊದಲ ಪ್ರೋಮೋ ಬಿಡುಗಡೆಯಾಗಿದೆ. ನಾವು ಕೊಟ್ಟಿರೋ ಮಾತನ್ನು ತಪ್ಪಲ್ಲ, ತಪ್ಪಾಗಿ ಆಡಿರೋ ಮಾತಿಗೆ ಬುದ್ಧಿ ಕಲಿಸದೇ ಬಿಡಲ್ಲ. ಒಳ್ಳೆಯ ಕೆಲಸ ಮಾಡಿದಾಗ ನಾವು ಕೈ ತಟ್ಟಿ ಚಪ್ಪಾಳೆಯನ್ನು ಸಹ ಕೊಡ್ತೀವಿ. ಎಲ್ಲಿದ್ದೀವಿ ಅನ್ನೋದನ್ನು ಮರೆತು ಬಾಯಿಗೆ ಬಂದ ಹಾಗೆ ಮಾತಾಡಿದವರಿಗೆ ಚೂರು ತಲೆ ಮೇಲೆ ತಟ್ಟಿ ಬುದ್ದಿ ಹೇಳಬೇಕಾಗುತ್ತದೆ ಎಂದು ಸುದೀಪ್ ಆರಂಭದಲ್ಲಿಯೇ ಹೇಳಿದ್ದಾರೆ. ಇದೀಗ ಈ ಪ್ರೋಮೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಸರ್ ದಯವಿಟ್ಟು ಕ್ಲಾಸ್ ತೆಗೆದುಕೊಳ್ಳಿ.. ಪಂಚಾಯಿತಿ ಕರೆಕ್ಟಾಗಿರಲಿ ಸ್ವಾಮಿ. ಖತರ್ನಾಕ್ ಆಂಟಿಗಳ ಅಹಂಕಾರ ಇಳಿಬೇಕು ಅಷ್ಟೆ. ಚೈತ್ರಾ ಕುಂದಾಪುರಗೆ ಹೇಗೆ ರುಬ್ಬಿದ್ರೋ ಅದೇ ರೀತಿ ರುಬ್ಬಬೇಕು. ಆ ಎರಡು ಕೊಳ್ಳಿ ದೆವ್ವಗಳದ್ದು ಖಡಕ್ ಆಗಿ ಮಾತಾಡಿ ಗ್ರಹಚಾರ ಬಿಡಿಸಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೋಡಿರಿ

