ಶ್ರೇಷ್ಠಾ ಕುತಂತ್ರ.. ಆದಿ, ಭಾಗ್ಯ ಬ್ರೇಕ್‌ಅಪ್.. ಸೊಸೆ ಜೀವನ ಸರಿ ಮಾಡಲ್ವಾ ಕುಸುಮಾ?

ಭಾಗ್ಯ ಜೀವನ ಇನ್ನೇನು ಸರಿ ಆಗುತ್ತೆ.. ಇನ್ಮುಂದೆ ನೆಮ್ಮದಿಯಾಗಿ ಜೀವನ ಮಾಡ್ಬೇಕು ಅನ್ನುವಷ್ಟರಲ್ಲಿ ಈ ಶ್ರೇಷ್ಠಾ ತಾಂಡವ್ ಏನಾದ್ರೂ ಒಂದು ಕುತಂತ್ರ ಮಾಡ್ತಾ ಇರ್ತಾರೆ. ಇದೀಗ ಭಾಗ್ಯ ಬಾಳಿಗೆ ಆದೀಶ್ವರ್ ಎಂಟ್ರಿಯಾಗಿದ್ದು, ಆಕೆ ಜೀವನದಲ್ಲಿ ಎಲ್ಲವೂ ಒಳ್ಳೆಯದ್ದೇ ಆಗ್ತಿದೆ. ಆದ್ರೀಗ ಶ್ರೇಷ್ಠಾ ಮತ್ತೆ ತನ್ನ ನರಿಬುದ್ದಿ ತೋರ್ಸಿದ್ದಾಳೆ. ಭಾಗ್ಯ ಆಫೀಸ್ ಗೆ ಮ್ಯಾನೇಜರ್ ಆಗಿ ಸೇರ್ಕೊಂಡಿದ್ದಲ್ಲದೇ, ಭಾಗ್ಯ ಜೀವನದಲ್ಲೇ ಆಟ ಆಡಲು ಶುರುಮಾಡಿದ್ದಾಳೆ. ಇದೀಗ ಶ್ರೇಷ್ಠಾ ಆದಿ ಭಾಗ್ಯಳನ್ನ ದೂರ ಮಾಡೋದು ಫಿಕ್ಸ್ ಆಗಿದೆ.
ಭಾಗ್ಯಲಕ್ಷ್ಮೀ ಸೀರಿಯಲ್ ಸ್ಟೋರಿ ಮುಂದಕ್ಕೆ ಹೋಗೋತರ ಕಾಣಿಸ್ತಾ ಇಲ್ಲ.. ರಬ್ಬರ್ ತರ ಎಳೆಯಲಾಗ್ತಿದೆ. ತಾಂಡವ್‌ಗೆ ಡಿವೋರ್ಸ್ ಕೊಟ್ಟಾದ್ಮೇಲೆ ಭಾಗ್ಯ ಒಂಟಿಯಾಗಿ ಜೀವನ ನಡೆಸ್ತಿದ್ದಾಳೆ. ಗಂಡನನ್ನ ಬಿಟ್ರೂ ಮನೆಯ ಜವಾಬ್ದಾರಿಯನ್ನ ಚೆನ್ನಾಗಿ ನಿಭಾಯಿಸ್ತಿದ್ದಾಳೆ. ಆದ್ರೀಗ ಭಾಗ್ಯ ಜೀವನಕ್ಕೆ ಆದಿ ಆಗಮನವಾಗಿದೆ. ಆದೀ ದಯೆಯಿಂದಾಗಿ ಭಾಗ್ಯ ಒಂದು ಕಂಪನಿಯ ಎಂಡಿ ಕೂಡ ಆಗಿದ್ದಾಳೆ. ಆದ್ರೆ ಈ ಪೋಸ್ಟ್ ಗೆ ವಕ್ರ ದೃಷ್ಠಿ ಬಿದ್ದಾಗಿದೆ. ಯಾಕಂದ್ರೆ ಅದೇ ಕಂಪನಿಗೆ ಶ್ರೇಷ್ಠಾ ಮ್ಯಾನೇಜರ್ ಆಗಿ ಸೇರ್ಕೊಂಡಿದ್ದಾಳೆ. ಅಷ್ಟೇ ಅಲ್ಲ ಕೆಲಸಕ್ಕೆ ಸೇರ್ಕೊಳ್ತಿದ್ದಂತೆ ಶ್ರೇಷ್ಠಾ ಭಾಗ್ಯ ವಿರುದ್ಧ ಸಂಚು ರೂಪಿಸ್ತಿದ್ದಾಳೆ. ಇದೀಗ ಶ್ರೇಷ್ಠಾ ಷಡ್ಯಂತರದಿಂದಾಗಿ ಆದಿ ಭಾಗ್ಯ ದೂರ ಆಗುವಂತೆ ಮಾಡಿದ್ದಾಳೆ.
ಶ್ರೇಷ್ಠಾ ಮೊದಲು ತನ್ವಿಗೆ ಬಲೆ ಬೀಸಿದ್ಲು.. ತನ್ವಿ ಶ್ರೇಷ್ಠಾ ಡ್ರಾಮಾ ನಂಬಿ ಈಗ ಆಕೆ ಮನೆಯಲ್ಲೇ ಇದ್ದಾಳೆ. ತನ್ವಿ ಶ್ರೇಷ್ಠಾ ಜೊತೆ ಕ್ಲೋಸ್ ಆಗಿದ್ದನ್ನ ನೋಡಿ ಭಾಗ್ಯ ಕುಸಿದು ಬಿದ್ದಿದ್ಲು. ಈ ವೇಳೆ ಆದಿ ಭಾಗ್ಯಳನ್ನ ತನ್ನ ಕಾರಲ್ಲಿ ಕೂರಿಸಿಕೊಂಡು ಹಾಸ್ಪಿಟಲ್‌ಗೆ ಹೋಗಿದ್ದ. ಇದು ಶ್ರೇಷ್ಠಾ ಕಣ್ಣಿಗೆ ಬಿದ್ದಿದೆ, ಕೂಡ್ಲೇ ಆಕೆ ಇವರಿಬ್ರ ಫೋಟೋ ತೆಗೆದಿದ್ಲು. ಬಳಿಕ ಆಕೆ ಆಫೀಸ್ ಗೆ ಹೋಗಿ ಹೊಸ ಕತೆ ಕಟ್ಟಿದ್ದಾಳೆ. ಭಾಗ್ಯ ಆದೀಶ್ವರ್ ನಡುವೆ ಬೇರೇನೋ ನಡಿತಾ ಇದೆ. ಭಾಗ್ಯ ನಾವು ನೋಡೋತರ ಇಲ್ಲ ಅಂತಾ ಎಲ್ಲರ ಬಳಿ ಹೇಳಿ ಆ ಫೋಟೋನ ತೋರಿಸಿದ್ದಾಳೆ. ಬಳಿಕ ಆದೀಶ್ವರ್ ಬಳಿ ಹೋಗಿ ನೀವು ಆದಿ ಭಾಗ್ಯ ತುಂಬಾ ಕ್ಲೋಸ್ ಆಗಿರೋದು ಸರಿಯಲ್ಲ.. ಆಫೀಸ್ ನಲ್ಲಿ ಎಲ್ಲರೂ ನಿಮ್ಮ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡ್ತಿದ್ದಾರೆ. ಇದ್ರಿಂದಾಗಿ ಭಾಗ್ಯಗೆ ಕೆಟ್ಟ ಹೆಸರು ಬರುತ್ತೆ ಅಂತ ಹೇಳಿದ್ದಾಳೆ. ಶ್ರೇಷ್ಠಾ ಮಾತು ಕೇಳಿದ ಆದೀಶ್ವರ್ ಶಾಕ್ ಆಗಿದ್ದಾನೆ. ಅಷ್ಟೇ ಅಲ್ಲ ಭಾಗ್ಯಳಿಂದ ಆದಷ್ಟು ದೂರ ಹೋಗ್ತಿದ್ದಾನೆ.
ಇದೀಗ ಭಾಗ್ಯ ಆದೀಶ್ವರ್ ಬಳಿ ಮಾತನಾಡಲು ಬಂದ್ರೂ ಆತ ದೂರ ಹೋಗ್ತಿದ್ದಾನೆ. ಭಾಗ್ಯ ಬಳಿ ಮಾತನಾಡೋ ಅವಶ್ಯಕತೆ ಇದ್ರೂ ಶ್ರೇಷ್ಠಾ ಆತನನ್ನ ತಡಿತಾ ಇದ್ದಾಳೆ. ಆದಿ ವರ್ತನೆ ನೋಡಿ ಈಗ ಭಾಗ್ಯ ಬೇಜಾರು ಮಾಡ್ಕೊಂಡಿದ್ದಾಳೆ. ಅಷ್ಟೇ ಅಲ್ಲ ಇದನ್ನ ಕುಸುಮಾ ಬಳಿ ಹೇಳಿಕೊಂಡಿದ್ದಾಳೆ. ಕೂಡ್ಲೇ ಕುಸುಮಾ ಆದಿ ಬಳಿ ಹೋಗಿ ಆತನನ್ನ ಪ್ರಶ್ನೆ ಮಾಡಿದ್ದಾಳೆ. ಆಗ ಆದೀಶ್ವರ್ ಏನೋ ಟೆನ್ಷನ್‌ನಲ್ಲಿ ಇದ್ದೆ. ಅದ್ರಿಂದಾಗಿ ನಾನು ಸರಿಯಾಗಿ ಮಾತನಾಡಿಲ್ಲ ಎಂದು ಹೇಳಿದ್ದಾನೆ. ಇದೀಗ ಆದೀಶ್ವರ್ ಭಾಗ್ಯ ಜೊತೆ ಮಾತನಾಡುತ್ತಾನಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.

ನೋಡಿರಿ

