ಹಿಡಿದ ದೆವ್ವ ಬಿಡಿಸ್ತಾರಾ ಕಿಚ್ಚ ಸುದೀಪ್? – ಅಶ್ವಿನಿ ಗೌಡ, ಜಾಹ್ನವಿಗೆ ಕಿಚ್ಚನ ಕ್ಲಾಸ್ ಫಿಕ್ಸ್?

ಬಿಗ್ ಬಾಸ್ ಈ ವಾರ ಬರೀ ಜಗಳವೇ ಸದ್ದು ಮಾಡಿದೆ. ಜಾಹ್ನವಿ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿಯನ್ನ ಟಾರ್ಗೆಟ್ ಮಾಡಿದ್ದು, ಆಕೆ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಆಕೆ ಮೇಲೆ ದೆವ್ವ ಬರುತ್ತೆ ಎಂದು ಕತೆ ಕಟ್ಟಿದ್ದಾರೆ. ಇದೀಗ ಎಲ್ಲರ ಕಣ್ಣು ಇಂದು ನಡೆಯುವ ಕಿಚ್ಚನ ಪಂಚಾಯಿತಿ ಮೇಲಿದೆ. ಇಂದು ಕಿಚ್ಚನ ಕ್ಲಾಸ್ ಯಾರಿಗೆ? ದೆವ್ವದ ಕತೆ ಕಟ್ಟಿದವರ ದೆವ್ವ ಬಿಡಿಸುತ್ತಾರಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.
ಇದನ್ನೂ ಓದಿ: ಕಾಂತಾರ ಚಿತ್ರದ ಬಗ್ಗೆ ದೈವ ಅಭಯ ನುಡಿ ನೀಡಿಲ್ವಾ? – ವಿವಾದದ ಬೆನ್ನಲ್ಲೇ ಬಲವಾಂಡಿ-ಪಿಲಿಚಂಡಿ ದೈವಸ್ಥಾನ ಆಡಳಿತ ಮಂಡಳಿ ಹೇಳಿದ್ದೇನು?
ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿ 3 ವಾರ ಆಗಿದೆ. ಇಂದು ಮತ್ತು ನಾಳೆ ವಾರದ ಪಂಚಾಯಿತಿ ಜೊತೆಗೆ ಈ ಸೀಸನ್ನ ಮೊದಲ ಫಿನಾಲೆ ನಡೆಯಲಿದೆ. ಆದ್ರೀಗ ಮೊದಲ ಫಿನಾಲೆಯಲ್ಲಿ ಯಾರು ವಿನ್ ಆಗ್ತಾರೆ ಅನ್ನೋದಕ್ಕಿಂತ, ಈ ವಾರ ಕಿಚ್ಚನ ಕ್ಲಾಸ್ ಯಾರಿಗೆ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಯಾಕಂದ್ರೆ ಈ ವಾರ ರಕ್ಷಿತಾ ಶೆಟ್ಟಿ ಮೇಲೆ ಅಶ್ವಿನಿ ಗೌಡ ಹಾಗೂ ಜಾನ್ವಿ ಮಾಡುತ್ತಿರುವ ಸುಳ್ಳು ಆರೋಪ. ಅಶ್ವಿನಿ ಹಾಗೂ ಜಾನ್ವಿ ಅವರು ಬಿಗ್ ಬಾಸ್ ಮನೆಯಲ್ಲಿ ಗೆಜ್ಜೆ ಶಬ್ದ ಮಾಡಿ, ಅದನ್ನು ರಕ್ಷಿತಾ ಮೇಲೆ ಹಾಕಿದ್ದರು. ರಕ್ಷಿತಾ ನಾಗವಲ್ಲಿ ರೀತಿ ಆಡ್ತಾರೆ ಎಂದೆಲ್ಲ ಸುಳ್ಳು ಆರೋಪ ಮಾಡಿದ್ದರು. ಇದೇ ವಿಚಾರ ಇಟ್ಟುಕೊಂಡ ವಾರ ಪೂರ್ತಿ ಎಳೆದಾಡಿದ್ದರು. ರಕ್ಷಿತಾಗೆ ಪದೇ ಪದೇ ಕಿರುಕುಳ ಕೊಡುವ ಪ್ರಯತ್ನ ಮಾಡಿದ್ದರು. ಇದೀಗ ಕಲರ್ಸ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಪ್ರೋಮೋ ಬಿಟ್ಟಿದೆ. ಬಿಗ್ ಬಾಸ್ ಮನೆಯಲ್ಲಿ ದೆವ್ವ ಯಾರು?, ದೆವ್ವ ಹಿಡಿಸಿದ್ದು ಯಾರು?, ಹಿಡಿದಿರುವ ದೆವ್ವನ ಬಿಡಿಸೋಕೆ ಬರ್ತಿದ್ದಾರೆ ಕಿಚ್ಚ ಸುದೀಪ ಎಂದು ಪ್ರೋಮೋದಲ್ಲಿ ಹೇಳಲಾಗಿದೆ.
ಕಳೆದ ವಾರ ಕಿಚ್ಚನ ಪಂಚಾಯಿತಿಯಲ್ಲಿ ಅಶ್ವಿನಿ ಗೌಡ ಬಗ್ಗೆ ಕಾಕ್ರೋಚ್ ಸುಧಿ ಮಾತನಾಡುತ್ತ ಈಯಮ್ಮ ಎಂದಿದ್ದರು. ಅದನ್ನು ಮಧ್ಯದಲ್ಲೇ ತಡೆದ ಅಶ್ವಿನಿ ಗೌಡ, ನನಗೆ ಹೆಸರಿದೆ, ಈಯಮ್ಮ ಎಂದೆಲ್ಲಾ ಕರೆಯೋದು ನನಗೆ ಇಷ್ಟ ಇಲ್ಲ ಎಂದು ಹೇಳಿದ್ದರು. ಆ ಸಂದರ್ಭ ಕಿಚ್ಚ ಸುದೀಪ್ ಮುಂದೆ ಒಳ್ಳೆಯವಳಂತೆ ಪೋಸ್ ಕೊಟ್ಟ ಅಶ್ವಿನಿ ಗೌಡ, ಉಳಿದ ಸ್ಪರ್ಧಿಗಳನ್ನು ಅಡ್ಡ ಹೆಸರಲ್ಲಿ ಕರೆಯೋದು ಸರೀನಾ? ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಸುದೀಪ್ ಪ್ರಶ್ನೆ ಮಾಡಬೇಕು ಎನ್ನುತ್ತಿದ್ದಾರೆ.
ಈ ಹಿಂದೆ ಒಂಟಿಯಾಗಿದ್ದ ರಕ್ಷಿತಾ, ಜಂಟಿಗಳ ಜೊತೆ ಹೋದಾಗ, ಆ ಕಾರ್ಟೂನ್ ಅಲ್ಲಿ ಏನ್ ಮಾಡ್ತಿದೆ ಎಂದು ಹೇಳಿದ್ದರು. ಅಷ್ಟೇ ಅಲ್ಲ ಇತ್ತೀಚೆಗೆ ಕಾವ್ಯಾ ಶೈವಾಗೆ ಆಕೆ ಫ್ರೀ ಪ್ರಾಡಕ್ಟ್, ಗಿಲ್ಲಿಯಿಂದಾಗಿಯೇ ಆಕೆ ಗುರುತಿಸಿಕೊಂಡಿದ್ದಾಳೆ ಎಂದು ಹೇಳಿದ್ದರು. ಇನ್ನೊಂದು ಸಲ ಮಾತಿನ ಬರದಲ್ಲಿ ಮಂಜು ಭಾಷಿಣಿಗೆ ಡುಮ್ಮಿ ಎಂದು ಕರೆದಿದ್ದರು. ಆದರೆ, ಇದನ್ನೆಲ್ಲಾ ಮರೆತು, ತಮ್ಮನ್ನು ಇನ್ಯಾರೋ ಈಯಮ್ಮ ಎಂದಿದ್ದಕ್ಕೆ ಮಾತ್ರ ಕೋಪ ಮಾಡಿಕೊಂಡು, ಸುದೀಪ್ ಎದುರು ನನ್ನನ್ನು ಹಾಗೆ ಕರೆಯಬಾರದು ಎಂದು ಹೇಳೀರ್ದಕ್ಕೆ ವೀಕ್ಷಕರು ಕಿಡಿ ಕಾರಿದ್ದಾರೆ. ಇದೀಗ ಕಿಚ್ಚ ಸುದೀಪ್ ಅಶ್ವಿನಿ ಗೌಡ, ಹಾಗೂ ಜಾಹ್ನವಿಗೆ ಕ್ಲಾಸ್ ತೆಗೆದುಕೊಳ್ತಾರಾ ಅನ್ನೋ ಕ್ಯೂರಿಯಾಸಿಟಿ ಮೂಡಿಸಿದೆ.

ನೋಡಿರಿ

