ಕೆಎಲ್ ಕನ್ಸಿಸ್ಟೆನ್ಸಿ.. ಶ್ರೇಯಸ್ ಶಕ್ತಿ.. ಮಿಡಲ್ ಆರ್ಡರ್ ಪವರ್ ಹೌಸ್! – ಆಸೀಸ್ ಗೆ ಇವರೇ ಟಾರ್ಗೆಟ್?

ಕೆಎಲ್ ಕನ್ಸಿಸ್ಟೆನ್ಸಿ.. ಶ್ರೇಯಸ್ ಶಕ್ತಿ.. ಮಿಡಲ್ ಆರ್ಡರ್ ಪವರ್ ಹೌಸ್! – ಆಸೀಸ್ ಗೆ ಇವರೇ ಟಾರ್ಗೆಟ್?

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ರೆಡಿಯಾಗಿರೋ ಭಾರತದ ಪರ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಮೇಲೆ ಎಲ್ಲರ ಕಣ್ಣಿದೆ. ಮಿಡಲ್ ಆರ್ಡರ್​ನಲ್ಲಿ ಟೀಂ ಇಂಡಿಯಾದ ಸ್ಟ್ರೆಂಥೇ ಇವ್ರು. 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ ಅದ್ಭುತ ಪ್ರದರ್ಶನ ನೀಡಿ ಟ್ರೋಫಿ ಗೆಲುವಿನ ರೂವಾರಿಗಳಾಗಿದ್ರು. ಅಲ್ದೇ ಈಗ ಆಸೀಸ್ ಸರಣಿಯಲ್ಲೂ ಬಿಗ್ ಇನ್ನಿಂಗ್ಸ್ ನಿರೀಕ್ಷೆ ಇದ್ದೇ ಇರುತ್ತೆ. ಜೊತೆಗೆ 2027ರ ವಿಶ್ವಕಪ್ ದೃಷ್ಟಿಯಿಂದ ಈ ಇಬ್ಬರ ಪರ್ಫಾಮೆನ್ಸ್ ತುಂಬಾನೇ ಇಂಪಾರ್ಟೆಂಟ್ ಆಗುತ್ತೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಭಾರತೀಯ ಸೇನೆಗೆ ಮತ್ತಷ್ಟು ಬಲ – ತೇಜಸ್ MK1M  ಲಘು ಯುದ್ಧ ವಿಮಾನ ಹಾರಾಟ ಯಶಸ್ವಿ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿ ಅಕ್ಟೋಬರ್ 19ರಿಂದ ಸ್ಟಾರ್ಟ್ ಆಗಲಿದ್ದು, ಎರಡೂ ಟೀಮ್​ಗಳ ಪ್ಲೇಯಿಂಗ್ 11 ಲೆಕ್ಕಾಚಾರ ನಡೀತಿದೆ. ಭಾರತದ ಪರ ಮಿಡಲ್ ಆರ್ಡರ್ ನಲ್ಲಿ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಸ್ಥಾನ ಪಡೆಯೋದು ಗ್ಯಾರಂಟಿ. ಟೀಂ ಇಂಡಿಯಾದಲ್ಲಿ ಇಬ್ಬರು ವಿಕೆಟ್ ಕೀಪರ್ ಕೋಟಾದಲ್ಲಿ ಸೆಲೆಕ್ಟ್ ಆಗಿದ್ರೂ ಧ್ರುವ್ ಜುರೆಲ್​ರನ್ನ ಬೀಟ್ ಮಾಡಿ ರಾಹುಲ್ ಚಾನ್ಸ್ ಗಿಟ್ಟಿಸಿಕೊಳ್ತಾರೆ. ರಾಹುಲ್​ಗೆ ಫಸ್ಟ್ ಪ್ರಿಯಾರಿಟಿ ಕೊಡೋಕೆ ಕಾರಣಗಳೂ ಇವೆ. ಇತ್ತ ಶ್ರೇಯಸ್ ಕೂಡ ಮಿಡಲ್ ಆರ್ಡರ್​ನಲ್ಲಿ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ನೀಡೋ ಕೇಪೆಬಲ್ ಪ್ಲೇಯರ್.

ಸಾಲಿಡ್ ಫಾರ್ಮ್ ನಲ್ಲಿದ್ದಾರೆ ಕೆಎಲ್ ರಾಹುಲ್!

ಬಲಗೈ ಬ್ಯಾಟ್ಸ್​ಮನ್ ಆಗಿರುವ ಕೆಎಲ್ ರಾಹುಲ್ ಸದ್ಯ ಟೀಂ ಇಂಡಿಯಾದ ಒನ್ ಆಫ್ ದಿ ಬೆಸ್ಟ್ ಬ್ಯಾಟ್ಸ್​​ಮನ್. ಟಿ-20 ಫಾರ್ಮೆಟ್​ನಿಂದ ಹೊರ ಬಿದ್ದಿದ್ರೂ ಕೂಡ ಏಕದಿನ ಹಾಗೇ ಟೆಸ್​ಟ ತಂಡಗಳಿಗೆ ಕಂಟಿನ್ಯೂಯಸ್ ಸೆಲೆಕ್ಟ್ ಆಗ್ತಿದ್ದಾರೆ. ಎರಡೂ ಮಾದರಿಯಲ್ಲಿ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದಾರೆ. ಅದೂ ಅಲ್ದೇ  ಟೀಂ ಇಂಡಿಯಾ ಪರ ಆಲ್ಮೋಸ್ಟ್ ಎಲ್ಲಾ ಸ್ಲಾಟ್​ಗಳಲ್ಲೂ ಬ್ಯಾಟ್ ಬೀಸಿದ್ದಾರೆ. ವಿಕೆಟ್ ಕೀಪರ್, ಓಪನರ್, ಫಿನಿಶರ್ ಹೀಗೆ ಯಾವ ಜವಾಬ್ದಾರಿ ಕೊಟ್ರೂ ಅಚ್ಚುಕಟ್ಟಾಗಿ ನಿಭಾಯಿಸೋ ಕೆಪಾಸಿಟಿ ಇದೆ. ಕಳೆದ ಚಾಂಪಿಯನ್ಸ್ ಟ್ರೋಫಿಯಲ್ಲಿ 4 ಇನ್ನಿಂಗ್ಸ್​ಗಳಿಂದ 140 ರನ್ಸ್ ಕಲೆ ಹಾಕಿದ್ರು. ಌಂಡ್ 3 ಸಲ ಅಜೇಯರಾಗಿ ಉಳಿದಿದ್ರು. ಅಂದ್ರೆ ಲಾಸ್ಟ್ ಮೂಮೆಂಟ್​ನಲ್ಲಿ ಬ್ಯಾಟಿಂಗ್ ಅವಕಾಶ ಸಿಗ್ತಿತ್ತು. ಸಿಕ್ಕಿರೋ ಅವಕಾಶ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಕೊಟ್ಟಿದ್ರು. ಆಲ್ಮೋಸ್ಟ್ 8 ತಿಂಗಳ ಬಳಿಕ ರಾಹುಲ್ ಅಂತಾರಾಷ್ಟ್ರೀಯ ವೈಟ್ ಬಾಲ್ ಫಾರ್ಮೆಟ್​ಗೆ ಕಮ್ ಬ್ಯಾಕ್ ಮಾಡ್ತಿದ್ದಾರೆ. ಮ್ಯಾಚ್ ಸಿಚುಯೇಷನ್ ಗೆ ತಕ್ಕಂತೆ ಬ್ಯಾಟ್ ಬೀಸೋ ಸಾಮರ್ಥ್ಯ ಇರೋದ್ರಿಂದ ಆಸೀಸ್ ಸರಣಿಗೆ ಬಿಗ್ ಭಾರತಕ್ಕೆ ಬಿಗ್ ಸ್ಟ್ರೆಂಥ್ ಆಗ್ತಾರೆ.

ಆಸೀಸ್ ವಿರುದ್ಧ ರಾಹುಲ್ ರೆಕಾರ್ಡ್ಸ್ ಸೂಪರ್!

ಆಸ್ಟ್ರೇಲಿಯಾ ವಿರುದ್ಧ ಸಕ್ರಿಯ ಬ್ಯಾಟರ್​​ಗಳಲ್ಲಿ ಟಾಪ್ ಪರ್ಫಾಮೆನ್ಸ್ ಕೊಟ್ಟಿರೋ ಪ್ಲೇಯರ್ ಗಳ ಪೈಕಿ ರಾಹುಲ್ ಕೂಡ ಇದ್ದಾರೆ. ಈ ಲಿಸ್​ಟ್​ನಲ್ಲಿ ವಿರಾಟ್ ಕೊಹ್ಲಿ ನಂಬರ್ 1 ಪ್ಲೇಸ್​ನಲ್ಲಿದ್ದಾರೆ. ಇಲ್ಲಿ ನಾವು ಹೇಳ್ತಿರೋರು ಸಕ್ರಿಯ ಆಟಗಾರರ ಬಗ್ಗೆ. ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ಎಂಟು ಶತಕಗಳು ಮತ್ತು 15 ಅರ್ಧಶತಕಗಳು ಸೇರಿದಂತೆ 2,451 ರನ್ ಗಳಿಸಿರುವ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಆಸ್ಟ್ರೇಲಿಯಾದಲ್ಲಿ ಎಂಟು ಶತಕಗಳು ಮತ್ತು ಒಂಬತ್ತು ಅರ್ಧಶತಕಗಳನ್ನು ಬಾರಿಸಿದ್ದು, 2,407 ರನ್ ಗಳಿಸಿದ್ದಾರೆ. ಈ ಲಿಸ್ಟಲ್ಲಿ ಕೆಎಲ್ ರಾಹುಲ್ 3ನೇ ಸ್ಥಾನದಲ್ಲಿದ್ದಾರೆ. ಕೆಎಲ್ ರಾಹುಲ್ ಆಸ್ಟ್ರೇಲಿಯಾದಲ್ಲಿ ಏಳು ಅರ್ಧಶತಕಗಳೊಂದಿಗೆ 733 ರನ್ ಗಳಿಸಿದ್ದಾರೆ. ಅಲ್ಲಿ ಇನ್ನೂ ಶತಕ ಗಳಿಸದೇ ಇದ್ರೂ ಕೂಡ ಆಪತ್ಬಾಂಧವನಾಗಿ ಪರ್ಫಾಮ್ ಮಾಡ್ತಾರೆ. ಆಸ್ಟ್ರೇಲಿಯಾ ವಿರುದ್ಧ ಈವರೆಗೆ 17 ಇನ್ನಿಂಗ್ಸ್ ಗಳಲ್ಲಿ ಬ್ಯಾಟ್ ಬೀಸಿದ್ದು 61.1ರ ಆವರೇಜ್​ನಲ್ಲಿ ಬ್ಯಾಟ್ ಬೀಸಿದ್ದಾರೆ. 97 ರನ್ ಗಳಿಸಿ ನಾಟೌಟ್ ಆಗಿ ಉಳಿದಿರೋದೇ ಹೈಯೆಸ್ಟ್ ಸ್ಕೋರ್. ಇನ್ನು 7 ಪಂದ್ಯಗಳಲ್ಲಿ ಅರ್ಧಶತಕ ದಾಖಲಿಸಿದ್ದಾರೆ. ಸೋ ಸದ್ಯಕ್ಕೆ ಭಾರತ ತಂಡದಲ್ಲಿ ರೋಹಿತ್-ಕೊಹ್ಲಿಯನ್ನ ಬಿಟ್ರೆ ಹೆಚ್ಚು ಎಕ್ಸ್​ಪೀರಿಯನ್ಸ್ ಇರೋ ಆಟಗಾರ ಅಂದ್ರೆ ಕೊಹ್ಲಿನೇ ಆಗಿದ್ದಾರೆ. 2016ರ ಜಿಂಬಾಬ್ವೆ ಪ್ರವಾಸದಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಕೆಎಲ್ ರಾಹುಲ್ ಇತಿಹಾಸ ನಿರ್ಮಿಸಿದ್ರು. ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಮೊದಲ ಭಾರತೀಯ ಅನ್ನೋ ದಾಖಲೆ ಬರೆದಿದ್ರು. ಆ ನಂತ್ರ ಟೀಂ ಇಂಡಿಯಾ ಪರ ಖಾಯಂ ಸದಸ್ಯರಾಗಿದ್ದಾರೆ.

ಶ್ರೇಯಸ್ ಅಯ್ಯರ್ ಮೇಲೆಯೂ ಹೆಚ್ಚಿನ ನಿರೀಕ್ಷೆ!

ಇನ್ನು ಟೀಂ ಇಂಡಿಯಾದಲ್ಲಿ ಟಿ-20ಐ ಹಾಗೇ ಟೆಸ್ಟ್​ ತಂಡಗಳಿಗೆ ಶ್ರೇಯಸ್ ಸೆಲೆಕ್ಟ್ ಆಗದೇ ಇದ್ರೂ ಏಕದಿನ ಮಾದರಿಯಲ್ಲಿ ಇಂಪ್ರೆಸ್ಸಿವ್ ಇನ್ನಿಂಗ್ಸ್ ಆಡಿದ್ದಾರೆ. ಕಳೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಭಾರತದ ಪರ ಕನ್ಸಿಸ್ಟೆನ್ಸಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಐದು ಪಂದ್ಯಗಳಿಂದ 48ರ ಸರಾಸರಿಯಲ್ಲಿ 243 ರನ್ಸ್ ಕಲೆ ಹಾಕಿದ್ರು. ಹಾಗೇ ಇಡೀ ಟೂರ್ನಿಯಲ್ಲಿ ಸೆಕೆಂಡ್ ಹೈಯೆಸ್ಟ್ ರನ್ ಸ್ಕೋರರ್ ಆಗಿದ್ರು. ಇನ್ನು ಶ್ರೇಯಸ್ ಅಯ್ಯರ್ ಇದುವರೆಗೆ ಟೀಮ್ ಇಂಡಿಯಾ ಪರ 70 ಏಕದಿನ ಪಂದ್ಯಗಳಲ್ಲಿ 2,845 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕಗಳು ಮತ್ತು 22 ಅರ್ಧಶತಕಗಳು ಸೇರಿವೆ. 128* ಈ ಸ್ವರೂಪದಲ್ಲಿ ಅವರ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ. ಇನ್ನು ಭಾರತದ ಪರ 14 ಟೆಸ್ಟ್ ಪಂದ್ಯಗಳಲ್ಲಿ 811 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 5 ಅರ್ಧಶತಕಗಳು ಸೇರಿವೆ. ಹಾಗೇ 51 ಟಿ20ಐಗಳಲ್ಲಿ 8 ಅರ್ಧಶತಕಗಳು ಸೇರಿದಂತೆ 1,104 ರನ್ ಗಳಿಸಿದ್ದಾರೆ. ಈ ಸ್ವರೂಪದಲ್ಲಿ ಅವರ ಅತ್ಯಧಿಕ ವೈಯಕ್ತಿಕ ಸ್ಕೋರ್ 74* ಆಗಿದೆ.

Shwetha M