ಉಡುಪಿಗೆ ₹3000, ಧಾರವಾಡಕ್ಕೆ ₹2500!- ಬಸ್ ರೇಟ್ ದಿಢೀರ್ ಜಾಸ್ತಿ..!
ಬಸ್ ಟಿಕೆಟ್ ರೇಟ್ ಹೆಚ್ಚಾಗಿದ್ದು ನೋಡಿ ಜನ ಶಾಕ್..!

ಶನಿವಾರ ರಜೆ. ಭಾನುವಾರ ಹೇಗೂ ರಜೆ. ಸೋಮವಾರದಿಂದ ಬುಧವಾರದವರೆಗೆ ದೀಪಾವಳಿ ಹಬ್ಬಕ್ಕೆ ರಜೆ. ಊರಿಗೆ ಹೋಗಲು ಬಸ್ ಬುಕ್ ಮಾಡಲು ಹೋದರೆ.. ಅಬ್ಬಬ್ಬಾ.. ಬಸ್ಸಿಗೆ ಏನ್ ರೇಟ್ ಗುರೂ.. ಒಬ್ಬರಿಗೆ ಟಿಕೆಟ್ ಬೆಲೆ 3 ಸಾವಿರ ಆದರೆ, ಸಂಸಾರ ಸಮೇತ ಹೋಗುವವರು ಹೋಗಲು ಬರಲು ತಿಂಗಳ ಸಂಬಳ ಪೂರ್ತಿ ಬಸ್‌ಗೆ ಕೊಡಬೇಕು.
ಇದನ್ನೂ ಓದಿ:ಭಾರತೀಯ ಸೇನೆಗೆ ಮತ್ತಷ್ಟು ಬಲ – ತೇಜಸ್ MK1M ಲಘು ಯುದ್ಧ ವಿಮಾನ ಹಾರಾಟ ಯಶಸ್ವಿ
ಬೆಂಗಳೂರಿನಿಂದ ಊರಿಗೆ ದೀಪಾವಳಿ ಹಬ್ಬಕ್ಕೆ ಹೊರಡುವ ಸಂಭ್ರಮದಲ್ಲಿದ್ದ ಜನರಿಗೆ ಖಾಸಗಿ ಬಸ್ ಮಾಲೀಕರು ಭರ್ಜರಿಯಾಗಿಯೇ ಶಾಕ್ ನೀಡಿದ್ದಾರೆ. ಎಲ್ಲಾ ಕಡೆ ದೀಪಾವಳಿ ಗಿಫ್ಟ್ ಕೊಟ್ಟರೆ, ಖಾಸಗಿ ಬಸ್ ಮಾಲೀಕರು ಜನರ ಜೇಬು ಬರಿದಾಗಿಸುವ ‘ದಿವಾಳಿ’ ಉಡುಗೊರೆ ಕೊಟ್ಟಿದ್ದಾರೆ!. ಹಬ್ಬಕ್ಕೆ ಬೇಕಾಬಿಟ್ಟಿ ಟಿಕೆಟ್ ದರ ಏರಿಕೆ ಮಾಡಿದ್ದಾರೆ. ರೆಡ್ ಬಸ್ ಸೇರಿದಂತೆ ಎಲ್ಲಾ ಆ್ಯಪ್‌ಗಳಲ್ಲಿ ಸೀಟ್ ಬುಕ್ ಮಾಡೋಕೆ ನೋಡಿದರೆ, ತಿಂಗಳ ಸಂಬಳ ಪೂರ್ತಿ ಬಸ್ ಟಿಕೆಟ್ ಗೆ ಇಡಬೇಕು. ಗಂಡ ಹೆಂಡತಿ ಇಬ್ಬರು ಮಕ್ಕಳು ಅಂದರೆ, ಹೋಗಲು ಬರಲು ಟಿಕೆಟ್ ಬುಕ್ ಮಾಡಿದರೆ, ಹೇಗಪ್ಪಾ ಗತಿ. ಇನ್ನು ಪಟಾಕಿ, ಹಬ್ಬ ಅಂದರೆ, ದೀಪಾವಳಿ ಹಬ್ಬವೋ ಇದು ದೀವಾಳಿಯಾಗುವುದೋ ಎಂಬ ಭಯ ಆಗುತ್ತಿದೆ ಎಂದು ಜನ ಹೇಳುತ್ತಿದ್ದಾರೆ.
ಹಬ್ಬ ನೋಡಿ ಪ್ರೈವೇಟ್ ಬಸ್ ಮಾಲೀಕರು, ಒನ್ ಟು ತ್ರಿಬಲ್ ದರ ಏರಿಕೆ ಮಾಡಿದ್ದಾರೆ. ಇನ್ನು ಬೆಂಗಳೂರಿನಿಂದ ಧಾರವಾಡ, ಬೆಳಗಾವಿ, ದಾವಣಗೆರೆ ಸೇರಿದಂತೆ ಹಲವು ಊರುಗಳಿಗೆ ತೆರಳುವ ಖಾಸಗಿ ಬಸ್‌ಗಳಲ್ಲೂ ಟಿಕೆಟ್ ದರ ದುಬಾರಿಯಾಗಿದೆ. ಬೆಂಗಳೂರು ಟು ಧಾರವಾಡ ಕ್ಕೆ ಹೋಗಲು ₹ 1700 ರಿಂದ ₹ 3000 ರೂಪಾಯಿ ಟಿಕೆಟ್ ದರವಿದೆ. ಬೆಂಗಳೂರು ಟು ಬೆಳಗಾವಿಗೆ ₹ 2000 ರಿಂದ ₹ 3999 ರೂಪಾಯಿವರೆಗೂ ಏರಿಕೆ ಕಂಡಿದೆ. ಬೆಂಗಳೂರು ಟು ಉಡುಪಿಗೆ ಟಿಕೆಟ್ ದರ₹ 2500 ರಿಂದ ₹ 3700ರಷ್ಟು ಏರಿಕೆಯಾಗಿದೆ.
ಇತ್ತ ಕೆಎಸ್‌ಆರ್‌ಟಿಸಿ ಬಸ್‌ಗಳು ದೀಪಾವಳಿ ಹಬ್ಬದ ಪ್ರಯುಕ್ತ NWKRTC 310 ಹೆಚ್ಚುವರಿ ಬಸ್ಸುಗಳನ್ನು ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಿಂದ ಅ.17-19 ರವರೆಗೆ ಕಾರ್ಯಾಚರಣೆ ಮಾಡಲಿವೆ. ಬೆಂಗಳೂರಿನಿಂದ ರಾಜ್ಯ, ಅಂತರರಾಜ್ಯ ವಿವಿಧ ಸ್ಥಳಗಳಿಗೆ ತೆರಳಲು ಅಕ್ಟೋಬರ್ 17 ರಿಂದ 19 ರಂದು ಹೆಚ್ಚುವರಿ ವಿಶೇಷ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ.

ನೋಡಿರಿ

