ರಶ್ಮಿಕಾ ಜೊತೆ ಮಲೈಕಾ ಡ್ಯಾನ್ಸ್ – ಪಾಯ್ಸನ್ ಬೇಬಿ ಸಾಂಗ್‌ನಲ್ಲಿ ಕಿರಿಕ್ ಬ್ಯೂಟಿ ಜೊತೆ ಬಾಲಿವುಡ್ ಬ್ಯೂಟಿ

ರಶ್ಮಿಕಾ ಜೊತೆ ಮಲೈಕಾ ಡ್ಯಾನ್ಸ್ – ಪಾಯ್ಸನ್ ಬೇಬಿ ಸಾಂಗ್‌ನಲ್ಲಿ ಕಿರಿಕ್ ಬ್ಯೂಟಿ ಜೊತೆ ಬಾಲಿವುಡ್ ಬ್ಯೂಟಿ

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಜೊತೆ ಬಾಲಿವುಡ್ ಕ್ರಷ್ ಮಲೈಕಾ ಅರೋರ ಸ್ಟೆಪ್ ಹಾಕಿದರೆ ಹೇಗಿರುತ್ತೆ. ಈ ಬಾರಿ ಹುಡುಗರ ನಿದ್ದೆ ಕದಿಯಲು ಇಬ್ಬರೂ ಸೇರಿದ್ದಾರೆ. ಪಾಯ್ಸನ್ ಬೇಬಿ ಹಾಡಿನಲ್ಲಿ ಎವರ್‌ಗ್ರೀನ್ ಬ್ಯೂಟಿ ಮಲೈಕಾ ಜೊತೆ ರಶ್ಮಿಕಾ ಸೊಂಟ ಬಳುಕಿಸಿದ್ದಾರೆ.

ಇದನ್ನೂ ಓದಿ:ಆಲಿಯಾ ಭಟ್ ಮನೆಯಲ್ಲಿ ಮೈಸೂರಿನ ಗಣಪ – ಮೂರ್ತಿ ರೆಡಿಮಾಡಿ ಮುಂಬೈಗೆ ಕಳಿಸಿದ ಅರುಣ್ ಯೋಗಿರಾಜ್

ಬಾಲಿವುಡ್ ಬ್ಯೂಟಿ ಮಲೈಕಾ ಅರೋರ ವಯಸ್ಸು 50 ದಾಟಿದೆ. ಆದರೆ, ಕುಣಿತ ಅಂತಾ ಬಂದರೆ, ಅದೇನೋ ಮೈಮಾಟ, ಅದೇನು ಬಳುಕಾಟ, ಅದೇನು ಸೊಂಟದ ಕುಲುಕಾಟ. ಹೌದು. ಈ ಬಾರಿ ಮಲೈಕಾ ಸೊಂಟ ಬಳುಕಿಸಿದ್ದು ರಶ್ಮಿಕಾ ಮಂದಣ್ಣ ಜೊತೆಗೆ. ತನ್ನ ಮೋಹಕ ಮೈಮಾಟದಿಂದ ರಸಿಕರ ಮನಸು ಸೆಳೆದಿರೋ ಮಲೈಕಾ ಈ ಬಾರಿ ಮತ್ತೊಂದು ಡ್ಯಾನ್ಸ್ ಮೂಲಕ ರಶ್ಮಿಕಾ ಅವ್ರಿಗೆ ಪೈಪೋಟಿ ಕೊಟ್ಟಿದ್ದಾರೆ. ಥಾಮ ಸಿನಿಮಾದ ಪಾಯಿಸನ್ ಬೇಬಿ ಎಂಬ ಹಾಡಿಗೆ ಮಲೈಕಾ ಸೊಂಟ ಬಳುಕಿಸಿದ್ದಾರೆ.. ಆ ಹಾಡಿನಲ್ಲಿ ಅವ್ರ ಎನರ್ಜಿ, ಗ್ರೇಸ್ ಕಂಡು ಚಿತ್ರರಸಿಕರು ಹುಬ್ಬೇರಿಸಿದ್ದಾರೆ. ಈ ಹಾಡಿನಲ್ಲಿ ರಶ್ಮಿಕಾ ಸಹ ಹೆಜ್ಜೆ ಹಾಕಿದ್ದಾರೆ. ಆದರೆ ಮಲೈಕಾ ಮುಂದೆ ರಶ್ಮಿಕಾನೇ ಕೊಂಚ ಡಲ್ ಕಾಣುತ್ತಿದ್ದಾರೆ ಅಂತಾ ಅನಿಸದೇ ಇರಲ್ಲ.

ಈ ಹಾಡಿನ ಪ್ರಮೋಷನ್ ಈವೆಂಟ್ ನಲ್ಲೂ ಸಹ ರಶ್ಮಿಕಾ, ಮಲೈಕಾ ಒಟ್ಟೊಟ್ಟಿಗೆ ಕುಣಿದಿದ್ದಾರೆ. ಬ್ಲ್ಯಾಕ್ ಡ್ರೆಸ್ ನಲ್ಲಿ ರಶ್ಮಿಕಾ ಕಾಣಿಸಿಕೊಂಡರೆ, ಮಲೈಕಾ ವೈಟ್ ಡ್ರೆಸ್ ನಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಮಲೈಕಾ ಇಡೀ ಸ್ಟೇಜ್ ನ ತಾವೇ ಆವರಿಸಿಕೊಂಡಿದ್ದು, ರಶ್ಮಿಕಾ ಅವ್ರಿಗಿಂತ 20 ವರ್ಷ ದೊಡ್ಡವರಾದ್ರೂ ಸಹ ನ್ಯಾಷನಲ್ ಕ್ರಶ್ ಅಂತ ಕರೆಸಿಕೊಳ್ಳೋ ಚೆಲುವೆಯನ್ನೇ ಸೈಡು ಹೊಡೆದು ಬಿಟ್ಟಿದ್ದಾರೆ.

ಥಾಮಾ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣಗೆ ಹೀರೋ ಆಗಿ ಆಯುಶ್ಮಾನ್ ಖುರಾನ ಜೊತೆಯಾಗಿದ್ದಾರೆ.. ಈ ಸಿನಿಮಾ ಬಗ್ಗೆ ಈಗಿನಿಂದಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿದೆ. ಹಾರರ್ ಥ್ರಿಲ್ಲರ್ ಸ್ಟೋರಿಯನ್ನ ಒಳಗೊಂಡಿರೋ ಥಾಮಾ ಸಿನಿಮಾ ರಶ್ಮಿಕಾಗೆ ಸಕ್ಸಸ್ ನೀಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ. ಥಾಮಾ ಚಿತ್ರ ಅಕ್ಟೋಬರ್ 21 ರಂದು ರಿಲೀಸ್ ಆಗಲಿದೆ.

Sulekha