ರಕ್ಷಿತಾ ಶೆಟ್ಟಿ Idiot.. ಜಾಹ್ನವಿ, ಅಶ್ವಿನಿಗೆ ಮಾತ್ರ ಮರ್ಯಾದೆನಾ? – ಕುಡ್ಲದ ಹುಡುಗಿಗೆ ಬೈಯೋದು Easyನಾ? 

ರಕ್ಷಿತಾ ಶೆಟ್ಟಿ Idiot.. ಜಾಹ್ನವಿ, ಅಶ್ವಿನಿಗೆ ಮಾತ್ರ ಮರ್ಯಾದೆನಾ? – ಕುಡ್ಲದ ಹುಡುಗಿಗೆ ಬೈಯೋದು Easyನಾ? 

ಬಿಗ್‌ ಬಾಸ್‌ ಮನೆಯಲ್ಲಿ ಅಶ್ವಿನಿ ಗೌಡ.. ಜಾಹ್ನವಿ ಏನ್‌ ಮಾಡಿದ್ರೂ ಸರಿನಾ? ಇದೊಂದು ಪ್ರಶ್ನೆ ಈಗ ಬಿಗ್‌ ಬಾಸ್‌ ವೀಕ್ಷಕರನ್ನ ಕಾಡ್ತಿದೆ. ಇಷ್ಟು ದಿನ ಅಶ್ವಿನಿ ಎಲ್ಲರಿಗೂ ಬೈತಾ ಇದ್ರೆ, ಜಾಹ್ನವಿ ಅದಕ್ಕೆ ಸಪೋರ್ಟ್‌ ಮಾಡ್ಕೊಂಡು ಬರ್ತಿದ್ರು. ಆದ್ರೀಗ ಇವರಿಬ್ರು ಹೊಸ ಆಟ ಬಿಗ್‌ ಬಾಸ್‌ ಮನೆಯಲ್ಲಿ ಹೊಸ ಆಟ ಶುರುಮಾಡ್ಕೊಂಡಿದ್ದಾರೆ.. ಅದಕ್ಕೆ ಟಾರ್ಗೆಟ್‌ ಮಾಡಿರೋದು ಪಾಪದ ಹುಡುಗಿ ರಕ್ಷಿತಾಳನ್ನ. ಜಾಹ್ನವಿ, ಅಶ್ವಿನಿ ಗೌಡ ರಕ್ಷಿತಾಗೆ ಅವಮಾನ ಮಾಡಿದ್ದಾರೆ.. Idiot.. ಚೈಲ್ಡ್..‌ ರಕ್ಷಿತಾಗೆ ಹೇಳಿದ್ದಾರೆ.

ಇದನ್ನೂ ಓದಿ:   ಬಿಗ್‌ ಬಾಸ್‌ ಮನೆಯಲ್ಲಿ ಬಿಗ್‌ ಟ್ವಿಸ್ಟ್!‌ – ವೈಲ್ಡ್-ಕಾರ್ಡ್ ಮೂಲಕ ಎಂಟ್ರಿ ಕೊಡಲು ಸ್ಪರ್ಧಿಗಳು ರೆಡಿ!

ಬಿಗ್ ಬಾಸ್ ಕನ್ನಡ 12ಕ್ಕೆ ಅಶ್ವಿನಿ ಗೌಡ ಬರೀ ಜಗಳ ಆಡೋದಿಕ್ಕೆ ಬಂದಿದ್ದಾರೆ ಅನ್ನೋ ತರ ಕಾಣ್ತಿದೆ. ಯಾಕಂದ್ರೆ ಮೊದಲ ದಿನದಿಂದಲೇ ಹೈಲೈಟ್‌ ಆಗಿದ್ದು ಬರೀ ಕಿತ್ತಾಟ ಮಾಡೋದ್ರಿಂದ. ಆರಂಭದಲ್ಲಿ ಗಿಲ್ಲಿಯನ್ನ ಟಾರ್ಗೆಟ್‌ ಮಾಡಲು ಹೋಗಿ ರೋಸ್ಟ್‌ ಆಗಿದ್ದ, ಅಶ್ವಿನಿ ಈಗ ಕುಡ್ಲದ ಹುಡುಗಿ ರಕ್ಷಿತಾಳನ್ನ ಟಾರ್ಗೆಟ್‌ ಮಾಡಿದ್ದಾರೆ.. ತಾನು ದೊಡ್ಮನೆಯಲ್ಲಿ ಹೆಚ್ಚು ದಿನ ಉಳಿಬೇಕು ಅನ್ನೋ ಕಾರಣಕ್ಕೆ ರಕ್ಷಿತಾ ಮೇಲೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಮಾಡ್ತಿದ್ದಾರೆ. ಇದೀಗ ರಕ್ಷಿತಾ ಸೂಟ್‌ ಕೇಸ್‌ ತೋರ್ಸಿ ನೀನು ಎಲ್ಲಿಂದ ಬಂದಿದ್ದೀಯಾ ಗೊತ್ತು ಅಂತಾ ಚೀಪ್‌ ಆಗಿ ಮಾತನಾಡಿದ್ದಾರೆ.

ಕಲರ್ಸ್ ಕನ್ನಡ ಇಂದಿನ ಎಪಿಸೋಡ್​ನ ಪ್ರೋಮೋ ಬಿಟ್ಟಿದ್ದು, ಇದರಲ್ಲಿ ರಕ್ಷಿತಾ, ಅಶ್ವಿನಿ ಗೌಡ ಹಾಗೂ ಜಾನ್ವಿ ನಡುವೆ ದೊಡ್ಡ ಜಗಳ ನಡೆದಿದೆ. ನಿನ್ನೆ ಎಲಿಮಿನೇಷನ್‌ ಪ್ರಕ್ರಿಯೆ ವೇಳೆ ರಕ್ಷಿತಾ ಜಾಹ್ನವಿ ಎಲಿಮಿನೇಟ್‌ ಆಗ್ಬೇಕು.. ಆಕೆ  ನನ್ನ ಮೇಲೆ ದೆವ್ವ ಬಂದಿದೆ ಅನ್ನೋತರ ಎಲ್ಲರ ಮುಂದೆ ಬಿಂಬಿಸ್ತಿದ್ದಾರೆ. ಆಕೆ ಆ ಕೆಲಸ ಮಾಡಿ, ನನ್ನ ಮೇಲೆ ಹಾಕಿದ್ದಾರೆ ಎಂದು ಹೇಳಿದ್ರು. ಇದು ಜಾಹ್ನವಿ, ಅಶ್ವಿನಿಗೆ ಸಿಟ್ಟು ಬರೋತರ ಆಗಿದೆ. ಬಳಿಕ ಧ್ರುವ್ ಜೊತೆ ಜಾನ್ವಿ ಮಾತನಾಡುತ್ತ, ರಕ್ಷಿತಾ ಬರ್ಲಿ ನಾನು ಮಾತನಾಡಬೇಕು ಅವಳ ಹತ್ರ ಎಂದು ಹೇಳಿದ್ದಾರೆ, ಆಗ ಅಶ್ವಿನಿ ಗೌಡ ಬಂದು ಸಿಕ್ಕಾಪಟ್ಟೆ ಮಾಡ್ತಾ ಇದ್ದಾಳೆ ಅವಳು ಎಂದು ಹೇಳಿದ್ದಾರೆ. ರಕ್ಷಿತಾ ಮಲಗಲು ಎಂದು ರೂಮ್​ಗೆ ಬಂದಾಗ ಕಾದು ಕುಳಿತಿದ್ದ ಅಶ್ವಿನಿ-ಜಾನ್ವಿ ಜೋರು ಜೋರು ಮಾತನಾಡಿದ್ದಾರೆ. ಇತ್ತ ರಕ್ಷಿತಾ ಕೂಡ ಸುಮ್ಮನೆ ಕೂರದೆ ಧ್ವನಿ ಏರಿಸಿ ಮಾತನಾಡಿದ್ದಾರೆ. ನನ್ನ ಏನು ಚೈಲ್ಡ್ ಅಂತ ಅಂದುಕೊಂಡಿದ್ಯಾ.. ನನ್ಗೆ ಮೆಚ್ಯುರಿಟಿ ಇಲ್ವಾ? ಎಂದು ಜಾನ್ವಿ ಕೇಳಿದ್ದಕ್ಕೆ ಹೌದು ನೀವು ಚೈಲ್ಡ್ ಎಂದು ರಕ್ಷಿತಾ ಹೇಳಿದ್ದಾರೆ. ಅಷ್ಟೇ ಅಲ್ಲದೆ ದೊಡ್ಡ ನಾಗವಲ್ಲಿ ನೀವು.. ಗೆಜ್ಜೆ ತೆಗೆದುಕೊಂಡು ಆರೀತಿ ಸೌಂಡ್ ಯಾಕೆ ಮಾಡಬೇಕಿತ್ತು ಎಂದು ಕೇಳಿದ್ದಾರೆ. ಆಗ ಜಾನ್ವಿ ಏಯ್ ಎಷ್ಟು ಮಾತಾಡ್ತೀಯಾ ನೀನು ಎಂದು ಕೇಳಿದ್ದಾರೆ. ಅತ್ತ ರೊಚ್ಚಿಗೆದ್ದ ಅಶ್ವಿನಿ ಗೌಡ, ಏಯ್.. ಜಾಸ್ತಿ ಮಾತಾಡ್ಬೇಡ ಮುಚ್ಕೊಂಡು ಮಲ್ಕೊ.. ಹೋಗಿ ನಿನ್ನ ಡ್ರಾಮ ಎಲ್ಲ ಬಾತ್​​ರೂಮ್​ನಲ್ಲಿ ಮಾಡು ಈಡಿಯೆಟ್.. ನೀನು ಎಲ್ಲಿಂದ ಬಂದಿದ್ದು ಅಂತ ಗೊತ್ತು ಎಂದು ಬೈದಿದ್ದಾರೆ. ನಾನು ಬಾತ್ ರೂಮ್​ಗೆ ನೂರು ಸಲ ಹೋಗ್ತೇನೆ ನಿಮ್ಗೆ ಏನು.. ಅದೇನು ನಿಮ್ಮ ಮನೆಯ ಬಾತ್ ರೂಮ್ ಹಾ? ಎಂದು ಪ್ರಶ್ನಿಸಿದ್ದಾರೆ.

ಒಟ್ಟಾರೆ ಇಂದಿನ ಎಪಿಸೋಡ್ ರೋಚಕತೆ ಸೃಷ್ಟಿಸಿದೆ. ಪ್ರೋಮೋ ನೋಡಿದ ಅಭಿಮಾನಿಗಳು ಈಗ ಅಶ್ವಿನಿ ಗೌಡ, ಹಾಗೂ ಜಾಹ್ನವಿ ಮೇಲೆ ಸಿಟ್ಟಾಗಿದ್ದಾರೆ. ರಕ್ಷಿತಾ ಸಣ್ಣವಳು ಅನ್ನೋ ಕಾರಣಕ್ಕೆ ದೆವ್ವದ ಕತೆ ಕಟ್ಟಿ, ಮಾನಸಿಕ ರೋಗಿ ಎಂಬಂತೆ ಬಿಂಬಿಸಿದ್ದಾರೆ. ಇದು ಎಷ್ಟು ಸರಿ? ಇಷ್ಟೆಲ್ಲಾ ಆದ್ರೂ ಬಿಗ್‌ ಬಾಸ್‌ ಯಾಕೆ ಸುಮ್ಮನಿದ್ದಾರೆ? ಈ ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ಅವರು ಈ ಮ್ಯಾಟರ್ ಎತ್ತಿ ಅಶ್ವಿನಿ ಹಾಗೂ ಜಾನ್ವಿಗೆ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಕಮೆಂಟ್‌ ಮಾಡ್ತಿದ್ದಾರೆ. ಕಳೆದ ವಾರ ರಕ್ಷಿತಾಳನ್ನು ಕಾರ್ಟೂನ್ ಎಂದು ಕರೆದು ಅವಮಾನ ಮಾಡಿದ್ದಕ್ಕೆ ಅಶ್ವಿನಿಯನ್ನು ಖಡಕ್ ಆಗಿ ಪ್ರಶ್ನಿಸಿಲ್ಲ.. ಈ ವಾರ ಕೂಡ ಹಾಗೇ ಮಾಡಿದ್ರೆ ನಾವು ಬಿಗ್ ಬಾಸ್ ನೋಡಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Shwetha M