ಭಾವನಾ ತಿರುಗೇಟಿಗೆ ಅತ್ತೆ, ಓರಗಿತ್ತಿಗೆ ಶಾಕ್ – ಸಿದ್ದೇಗೌಡರಿಗೆ ಮತ್ತಷ್ಟು ಹತ್ತಿರವಾದ ಮುದ್ದಿನ ಹೆಂಡತಿ

ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲಿ ಕೊನೆಗೂ ಅನ್ಯಾಯದ ವಿರುದ್ಧ ಸೊಸೆ ಸಿಡಿಯುವ ಲಕ್ಷಣ ಕಂಡು ಬಂದಿದೆ. ಅತ್ತೆ, ಓರಗಿತ್ತಿಯ ಕಾಟಕ್ಕೆ ಸರಿಯಾದ ತಿರುಗೇಟು ನೀಡುತ್ತಿದ್ದಾಳೆ ಭಾವನಾ. ಕೊನೆಗೂ ಹೆಣ್ಣುಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಿದೆ ಸೀರಿಯಲ್ ತಂಡ.
ಇದನ್ನೂ ಓದಿ:ತಾಳಿ ಕಟ್ಟುವಾಗ ಬಯಲಾಯ್ತು ನಿತ್ಯಾ ತಾಯಿಯಾಗುವ ರಹಸ್ಯ- ಸಪ್ತಪದಿ ತುಳಿದ ಕರ್ಣನ ಮುಂದೆ ಕಠೋರ ಸತ್ಯ
ಸಿದ್ದೇಗೌಡರನ್ನು ಮದುವೆಯಾಗಿ ಭಾವನಾ ಬಂದಾಗಿನಿಂದ ಓರಗಿತ್ತಿಯನ್ನು ಮನೆಯಿಂದ ಹೇಗೆ ಹೊರಗೆ ಹಾಕಬೇಕೆಂದು ನೀಲು ಸಂಚು ರೂಪಿಸುತ್ತಿದ್ದಾರೆ. ಇದೀಗ ಈ ಕೆಲಸಕ್ಕೆ ನೀಲುಗೆ ಅತ್ತೆಯ ಸಾಥ್ ಸಿಕ್ಕಿದೆ. ಮನೆಯ ಹಿರಿಯ ಸೊಸೆ ಜೊತೆ ಸೇರಿ ಭಾವನಾಳನನ್ನು ಸಿದ್ದೇಗೌಡನ ಜೀವನದಿಂದ ದೂರ ಮಾಡಲು ರೇಣುಕಾ ಪ್ಲಾನ್ ಮಾಡಿದ್ದಾರೆ. ನೀಲು ಹೇಳಿದಂತೆ ಭಾವನಾಗೆ ಕಿರುಕುಳ ನೀಡಲು ಆರಂಭಿಸುತ್ತಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ರೇಣುಕಾ ಮತ್ತು ನೀಲು ಜ್ಯೋತಿಷಿ ಬಳಿ ಸುಳ್ಳು ಹೇಳಿಸಿ ಭಾವನಾಗೆ ಕಠಿಣ ವ್ರತ ಮಾಡುವಂತೆ ಮಾಡಿದ್ದ ಇದೀಗ ನೀಲು ಮತ್ತು ರೇಣುಕಾ ಸಂಚು ಭಾವನಾಗೆ ಗೊತ್ತಾಗಿದೆ. ಹಾಗಾಗಿ ಅವರ ಮಂತ್ರವನ್ನೇ ತಿರುಮಂತ್ರವನ್ನಾಗಿ ಮಾಡಿ ಅತ್ತೆ ಮತ್ತು ಓರಗಿತ್ತಿಗೆ ಶಾಕ್ ಕೊಟ್ಟಿದ್ದಾಳೆ. ವ್ರತದಿಂದಾಗಿ ದೂರವಾಗಿದ್ದ ಸಿದ್ದೇಗೌಡರಿಗೆ ಹತ್ತಿರವಾಗಿದ್ದಾಳೆ. ಇದರಿಂದ ಸಿದ್ದೇಗೌಡರು ಫುಲ್ ಖುಷಿಯಾಗಿದ್ದು, ದೇವರಿಗೆ ನಮಸ್ಕಾರ ಮಾಡಿದ್ದಾರೆ. ಸಂಚು ಅರಿತಿರೋ ಭಾವನಾ ಶಾಂತ ಸ್ವಭಾವದಿಂದಲೇ ಅತ್ತೆಗೆ ಶಾಕ್ ಕೊಟ್ಟಿದ್ದಾರೆ. ಅತ್ತೆ ಏನೇ ಬೈದ್ರೂ ಅಳದೇ ಭಾವನಾ ಸಂತೋಷವಾಗಿರೋದನ್ನು ಕಂಡು ನೀಲುಗೆ ಶಾಕ್ ಆಗಿದೆ. ನಮ್ಮ ಕಣ್ಮುಂದೆ ಇಬ್ಬರು ದೂರವಿದ್ದು, ಹೊರಗಡೆ ಗಂಡನೊಂದಿಗೆ ಭಾವನಾ ಚೆನ್ನಾಗಿರುವ ಅನುಮಾನ ಬಂದಿದೆ. ಇದರಿಂದ ಭಾವನಾ ಜೊತೆಯಲ್ಲಿಯೇ ರೇಣುಕಾ ಮತ್ತು ನೀಲು ಹೊರಗಡೆ ಮಲಗಿಕೊಂಡಿದ್ದಾರೆ. ಇಬ್ಬರಿಗೂ ಶಾಕ್ ಕೊಡಲು ಹೊಟ್ಟೆ ಸರಿಯಾಗಿಲ್ಲ ಅತ್ತೆ, ಬೆಳಗ್ಗೆಯಿಂದ ಹೊಟ್ಟೆ ತೊಳಿಸಿದ ಹಾಗೆ ಆಗಿ ವಾಂತಿ ಬಂದಂತೆ ಆಗ್ತಿದೆ ಎಂದು ಭಾವನಾ ಹೇಳಿದನ್ನು ಕೇಳಿ ರೇಣುಕಾ ಮತ್ತು ನೀಲು ಶಾಕ್ ಆಗಿದ್ದಾರೆ.

ನೋಡಿರಿ

