ರ*ಕ್ತಸಿಕ್ತ ಯುದ್ಧಕ್ಕೆ 48 ಗಂಟೆ ಬ್ರೇಕ್! ಹೆ*ಣ ಬೀಳುತ್ತಿದ್ದಂತೆ ಕಾಲುಹಿಡಿದ ಪಾಕ್!
ತಾಲಿ*ಬಾನ್ ತಾಕತ್ತು ಹೇಗಿದೆ ನೋಡಿ!

ರ*ಕ್ತಸಿಕ್ತ ಯುದ್ಧಕ್ಕೆ 48 ಗಂಟೆ ಬ್ರೇಕ್!  ಹೆ*ಣ ಬೀಳುತ್ತಿದ್ದಂತೆ ಕಾಲುಹಿಡಿದ ಪಾಕ್!ತಾಲಿ*ಬಾನ್ ತಾಕತ್ತು ಹೇಗಿದೆ ನೋಡಿ!

ಪಾಕ್ ಮತ್ತು ಅಫ್ಘಾನ್ ಗಡಿಯಲ್ಲಿ ರಕ್ತದೊಕುಳಿಯೇ ಹರಿದಿದೆ. ಎರಡು ದೇಶದ ಸೈನಿಕರು ತಮ್ಮ ತಮ್ಮ ದೇಶಕ್ಕಾಗಿ ನೆತ್ತರು ಚೆಲ್ಲಿದ್ದಾರೆ.. ಕೇವಲ ಸೈನಿಕರು ಮಾತ್ರವಲ್ಲಿ ಸಾರ್ವಜನಿಕರು ಕೂಡ ಈ ಯುದ್ಧದಲ್ಲಿ ಬಲಿಯಾಗಿದ್ದಾರೆ. ಕಾಬೂಲ್‌ನಲ್ಲಿರುವ ಪ್ರಮುಖ ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿದ ನಂತ್ರ, ಅಫ್ಘಾನ್ ಪ್ರತಿಕಾರದ ದಾಳಿ ನಡೆಸೋಕೆ ಶುರು ಮಾಡ್ತು.. ಅಲ್ಲಿಂದ  ಬುಧವಾರ ಸಂಜೆ ತನಕ  ಎರಡು ದೇಶದ ನಡುವೆ ರಕ್ತಸಿಕ್ತ ಯುದ್ಧ ನಡೆದಿದೆ. ಗಡಿ ಪೋಸ್ಟ್‌ಗಳ ಮೇಲೆ ಅಫ್ಘಾನ್ ತಾಲಿಬಾನ್ ದಾಳಿಯಲ್ಲಿ 23 ಸೈನಿಕರು ಮೃತಪಟ್ರೆ 29 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನಿ ಸೇನೆ ಒಪ್ಪಿಕೊಂಡಿದೆ. ಪಾಕಿಸ್ತಾನಿ ಸೇನೆಯು ಪ್ರತೀಕಾರದ ಕ್ರಮದಲ್ಲಿ 200 ಕ್ಕೂ ಹೆಚ್ಚು ತಾಲಿಬಾನ್ ಹೋರಾಟಗಾರರು ಮತ್ತು ಉಗ್ರಗಾಮಿಗಳು ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದೆ. ಆದಾಗ್ಯೂ, ಅಫ್ಘಾನಿಸ್ತಾನ 58 ಪಾಕಿಸ್ತಾನಿ ಸೈನಿಕರನ್ನು ಕೊಂದಿರುವುದಾಗಿ ಹೇಳಿಕೊಂಡಿದೆ. ಆದ್ರೆ ಎಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ ಅನ್ನೋ ಲೆಕ್ಕವನ್ನ ಯಾರು ಸರಿಯಾಗಿ ಕೊಡ್ತಿಲ್ಲ.  ಆದ್ರೆ ಹೀಗೆ ಎರಡು ಕಡೆ ರಕ್ತಪಾತ ಆಗುತ್ತಿದ್ದಂತೆ ಬುಧವಾರ ಸಂಜೆ ಎರಡೂ ದೇಶಗಳು 48 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಕೊಂಡವೆ.  ಆದ್ರೆ ಯುದ್ಧಕ್ಕೆ ಜಸ್ಟ್ 48 ಗಂಟೆ ಮಾತ್ರ ಬ್ರೇಕ್ ಬಿದ್ದಿದೆ. ಈ ಕದನ ವಿರಾಮಕ್ಕೆ ಕಾರಣ ಏನು ಅಂತ ಹುಡುಕುತ್ತಾ ಹೊದ್ರೆ ಪಾಕಿಸ್ತಾನ ಬಂಡವಾಳ ಬಯಲಾಗುತ್ತಾ ಹೋಗುತ್ತೆ.. ಆಪರೇಷನ್ ಸಿಂಧೂರ್‌ನಲ್ಲಿ ನಾವು ಭಾರತಕ್ಕೆ ಅಷ್ಟು ಹಾನಿ ಮಾಡಿದ್ದೇವೆ ಇಷ್ಟು ಹಾನಿ ಮಾಡಿದ್ದೇವೆ.. ಭಾರತದ ಯುದ್ಧ ವಿಮಾನಗಳನ್ನ ಹೊಡೆದ್ ಹಾಕಿದ್ದೇವೆ ಅಂತ ಸುಳ್ಳು ಕಥೆ ಹೇಳುವ ಪಾಕ್‌ಗೆ ತಾಲಿಬಾನ್ ಕೊಟ್ಟ ಗುನ್ನಾಕ್ಕೆ ಪತರುಗುಟ್ಟಿ ಹೋಗಿದೆ.. ಅಯ್ಯೋ ಸಾಕು ಬಿಡ್ರಪ್ಪ ನಮ್ದೆ ತಪ್ಪು ಆಯ್ತು ಅಂತ ತಾಲಿಬಾನ್‌ಗಳ ಕೈ ಕಾಲು ಹಿಡಿದುಕೊಂಡು 48 ಗಂಟೆಗಳ ಕದನ ವಿರಾಮ ಘೋಷಣೆ ಮಾಡಿಕೊಂಡಿವೆ..

ಇದನ್ನೂ ಓದಿ: ನಾನೇ ಗೆದ್ದೆ ಎಂದು ಬಿಲ್ಡಪ್ ಕೊಟ್ಟ ಪಾಕ್ ಮಾನ ಅಫ್ಘಾನ್ ಬೀದಿ ಬೀದಿಗಳಲ್ಲಿ ಹರಾಜು

ಅಂದಹಾಗೇ ಗಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಕೆ ಎರಡು ಕಡೆಯಿಂದ ಮಾತುಕತೆ ಮೂಲಕ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುವೆ ಎಂದು ಪಾಕಿಸ್ತಾನದ ವಕ್ತಾರರು ತಿಳಿಸಿದ್ದಾರೆ.  ಆದ್ರೆ ಪಾಕಿಸ್ತಾನ ಬೇಡಿಕೊಂಡಿದ್ದಕ್ಕೆ ಅಫ್ಘಾನಿಸ್ತಾನ ಕದನ ವಿರಾಮ ಘೋಷಿಸಿದೆ ಎಂದು ಅಫ್ಘಾನ್ ಸರ್ಕಾರದ ವಕ್ತಾರ ಜಬಿಯುಲ್ಲಾ ಮುಜಾಹಿದ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.  ಅಂದರೆ ಭಾರತದೊಂದಿಗೆ ಯುದ್ಧ ಮಾಡುವ ದುಸ್ಸಾಹಸಕ್ಕೆ ಕೈಹಾಕಿ ಸರ್ವನಾಶದ ಅಂಚಿಗೆ ಬಂದು ನಿಂತಿದ್ದ ಪಾಕಿಸ್ತಾನ, ಅಫ್ಘಾನಿಸ್ತಾನದ ಜೊತೆಗೂ ಮಿಲಿಟರಿ ಸಂಘರ್ಷ ಆರಂಭಿಸಿ ಪೆಟ್ಟು ತಿಂದಿರುವುದು ಎದ್ದು ಕಾಣ್ತಿದೆ. ಪಾಕಿಸ್ತಾನವೇ ಮುಂದಾಗಿ ಕದನ ವಿರಾಮ ಒಪ್ಪಂದಕ್ಕೆ ಮೊರೆ ಇಟ್ಟಿದೆ ಎಂಬ ತಾಲಿಬಾನ್‌ ಹೇಳಿಕೆ, ಪಾಕಿಸ್ತಾನ ಸೇನೆ ಎಷ್ಟು ಡಮ್ಮಿ ಅನ್ನೋದು ಇಡೀ ಜಗತ್ತಿಗೆ ಸಾರಿ ಸಾರಿಹೇಳಿದೆ.

ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಟೀಕೆಗೆ ಗುರಿಯಾಗುವುದು ಹೊಸದೇನಲ್ಲ. ಪ್ರತಿಬಾರಿಯೂ ಭಾರತದಿಂದ ಮಿಲಿಟರಿ ಹೊಡೆತ ತಿನ್ನುವ ಅದು, ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನ ಸೇನೆಯಿಂದಲೂ ದೊಡ್ಡ ಏಟನ್ನೇ ತಿಂದಿದೆ. ಹೀಗಾಗಿಯೇ ಅಫ್ಘಾನಿಸ್ತಾನದ ಸೇನೆ ಎದುರಿಗೆ ಪಾಕಿಸ್ತಾನ ಸೇನೆ ಮಂಡಿಯೂರಿದ್ದು ಸ್ಪಷ್ಟವಾಗಿದ್ದು, ಶಾಂತಿ ಮಾತುಕತೆಗೆ ಮುಂದಾಗಿದೆ.

ಇನ್ನೊಂದು ಇಂಟ್ರೆಸ್ಟಿಂಗ್ ವಿಷ್ಯ ಏನಪ್ಪ ಅಂದ್ರೆ ಸೌದಿ ಅರೇಬಿಯಾದೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಂಡಿದ್ದ ಪಾಕಿಸ್ತಾನ, ಇನ್ನು ರಣಾಂಗಣದಲ್ಲಿ ನಮ್ಮನ್ನು ಸೋಲಿಸುವವರು ಯಾರೂ ಇಲ್ಲ ಅಂತ ಬಿಟ್ಟಿ ಬಿಲ್ಡಪ್ ಕೊಡುತ್ತಿತ್ತು. ಅದರಲ್ಲೂ ಸೌದಿ-ಪಾಕ್‌ ರಕ್ಷಣಾ ಒಪ್ಪಂದ ಭಾರತಕ್ಕೆ ಎಚ್ಚರಿಕೆಯ ಗಂಟೆ ಅಂತ ಹೊದಲ್ಲಿ ಬಂದಲ್ಲಿ ಪಾಕ್ ಹೇಳ್ತಾ ಇತ್ತು.  ಆದರೆ ಅಫ್ಘಾನಿಸ್ತಾನದೊಂದಿಗಿನ ಸಣ್ಣ ಯುದ್ಧದಲ್ಲೂ, ಸೌದಿ ಅರೇಬಿಯಾ ಪಾಕಿಸ್ತಾನದ ನೆರವಿಗೆ ಬಾರದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಫ್ಘಾನಿಸ್ತಾನ-ಪಾಕಿಸ್ತಾನ ಸಂಘರ್ಷ ಯುದ್ಧವಲ್ಲವಾದರೂ, ಸೌದಿ ಅರೇಬಿಯಾದಿಂದ ಪಾಕಿಸ್ತಾನದ ಪರ ಯಾವುದೇ ಪವರ್ ಫುಲ್ ಹೇಳಿಕೆಗಳು ಬಂದಿಲ್ಲ. ಸಂಘರ್ಷದ ಬಗ್ಗೆ ಆತಂಕ ವ್ಯಕ್ತಪಡಿಸಿ ಕದನ ವಿರಾಮ ಒಪ್ಪಂದಕ್ಕೆ ಮುಂದಾಗುವಂತೆ ಒಂದು ಸಾಲಿನ ಮನವಿ ಮಾಡಿದ್ದು ಬಿಟ್ಟರೆ, ಸೌದಿ ಅರೇಬಿಯಾ ರಾಷ್ಟ್ರ ಪಾಕಿಸ್ತಾನದ ಪರವಾಗಿ ಏನನ್ನೂ ಹೇಳಿಲ್ಲ. ಹಾಗಂತ ಇಲ್ಲಿ ಸೌದಿನೇ ಕದನ ವಿರಾಮ ಮಾಡಿ ಅಂತ ಡೈರೆಕ್ಟ್ ಆಗಿ ಹೇಳಿಲ್ಲ.. ಪಾಕ್‌ ಸೌದಿ ಹತ್ರ ನೀವು ಮಾತುಕತೆ ನಡೆಸಿ ಕದನ ವಿರಾಮ ಮಾಡಿ ಅಂತ ಬೇಡಿಕೊಂಡಿದೆ ಅನ್ನೋದು ಕೂಡ ವಿಪರ್ಯಾಸ. ತಾಲಿಬಾನ್ ಮೇಲೆ ತಾನೇ ಮೊದಲು ದಾಳಿ ಮಾಡಿ ಪಾಕಿಸ್ತಾನ ಈಗ ಸರಿಯಾಗಿಪೆಟ್ಟು ತಿನ್ನುತ್ತಿದೆ. ದಾರಿಯಲ್ಲಿ ಹೋಗುವ ಮಾರಿಯನ್ನ ಮನೆಗೆ ಕರೆತದಂತೆ ಆಗಿದೆ ಪಾಕ್ ಕಥೆ..

ಆದರೆ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಪಾಕಿಸ್ತಾನ ವರ್ತಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇದರ ಘೋರ ಪರಿಣಾಮಗಳನ್ನು ಎದುರಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಒಂದ್ಕಡೆ ಭಾರತ ಕೊಟ್ಟ ಏಟು ಇನ್ನೊಂದ್ಕಡೆ ಅಫ್ಘಾನ್ ಕೊಟ್ಟ ಏಟು.. ಈ ಎರಡು ಏಟಿನಿಂದ ಪಾಕಿಸ್ತಾನ ಸಧಾರಿಸಿಕೊಳ್ಳುವುದ್ದಕ್ಕೆ ಏನೆಷ್ಟು ವರ್ಷಗಳು ಬೇಕೋ, ಪಾಕಿಸ್ತಾನ ಬುದ್ಧು ಕಲಿಯಲು ಇನ್ನೆಷ್ಟು ಮಿಲಿಟರಿ ಘರ್ಷಣೆಗಳು ಸಂಭವಿಸಬೇಕು? ಇನ್ನೆಷ್ಟು ಕದನ ವಿರಾಮ ಒಪ್ಪಂದಗಳು ಏರ್ಪಡಬೇಕು? ಅನ್ನೋದು ಪಾಕಿಸ್ತಾನಕ್ಕೂ ಗೊತ್ತಿಲ್ಲ..

Kishor KV