ಮೊಟ್ಟೆ ತಿಂದ್ರೆ ಮಧುಮೇಹ ಕಂಟ್ರೋಲ್‌ ಆಗುತ್ತಾ? – ತಜ್ಞರು ಹೇಳೋದೇನು?

ಮೊಟ್ಟೆ ತಿಂದ್ರೆ ಮಧುಮೇಹ ಕಂಟ್ರೋಲ್‌ ಆಗುತ್ತಾ? – ತಜ್ಞರು ಹೇಳೋದೇನು?

ಮನುಷ್ಯನ ಆರೋಗ್ಯಕ್ಕೆ ಮೊಟ್ಟೆ ಬಹಳ ಒಳ್ಳೆಯದು. ಮೊಟ್ಟೆಗಳು ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ ಅವುಗಳನ್ನು ಸೂಪರ್‌ಫುಡ್ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ದಿನಾ ಬೆಳಗ್ಗೆ ಬೇಯಿಸಿದ ಮೊಟ್ಟೆ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು ಎನ್ನುತ್ತಾರೆ ತಜ್ಞರು. ಆದ್ರೆ ಮಧುಮೇಹ ಇರುವವರು ಮೊಟ್ಟೆ ತಿಂದ್ರೆ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತಾ ಅನ್ನೋ ಗೊಂದಲ ಅನೇಕರಲ್ಲಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: RSS ವಿಚಾರವಾಗಿ ಪ್ರಿಯಾಂಕ್ ಖರ್ಗೆ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿ ಮಹಾರಾಷ್ಟ್ರದಲ್ಲಿ ಅರೆಸ್ಟ್

ಇತ್ತೀಚಿನ ದಿನಗಳಲ್ಲಿ ಮಧುಮೇಹವು ಅನೇಕ ಜನರನ್ನು ಕಾಡುತ್ತಿರುವ ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ದೀರ್ಘಕಾಲೀನ ನೋವನ್ನು ಉಂಟುಮಾಡುವ ಈ ಕಾಯಿಲೆಯನ್ನು ಗುಣಪಡಿಸುವುದು ತುಂಬಾ ಕಷ್ಟದ ಕೆಲಸವಾಗಿದೆ. ಏಕೆಂದರೆ.. ಇದಕ್ಕೆ ಇನ್ನೂ ಯಾವುದೇ ಚಿಕಿತ್ಸೆಯನ್ನು ಕಂಡು ಹಿಡಿದಿಲ್ಲ. ಆರೋಗ್ಯ ತಜ್ಞರ ಪ್ರಕಾರ, ನಾವು ಸೇವಿಸುವ ಆಹಾರದಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಈ ರೋಗವನ್ನು ನಿಯಂತ್ರಿಸಬಹುದು. ಮಧುಮೇಹ ಇರುವವರು ಮೊಟ್ಟೆ ತಿನ್ನಬಹುದಾ? ತಿನ್ನಬಾರದಾ ಅನ್ನೋ ಗೊಂದಲ ಅನೇಕರಲ್ಲಿದೆ. ತಜ್ಞರ ಪ್ರಕಾರ ಮಧುಮೇಹದಿಂದ ಬಳಲುತ್ತಿರುವವರು ಮೊಟ್ಟೆ ತಿನ್ನೋದು ಒಳ್ಳೆಯದು.

ಮೊಟ್ಟೆ ತಿನ್ನುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ ಅದರಲ್ಲೂ ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮೊಟ್ಟೆ ತಿನ್ನುವುದು ವಿಶೇಷವಾಗಿ ಒಳ್ಳೆಯದು. ಇದಲ್ಲದೆ, ಮೊಟ್ಟೆ ತಿನ್ನುವ ಜನರಲ್ಲಿ ಮಧುಮೇಹ ಸಮಸ್ಯೆಗಳು ಸುಲಭವಾಗಿ ನಿಯಂತ್ರಿಸಲ್ಪಡುತ್ತವೆ ಎಂದು ತಜ್ಞರು ಹೇಳುತ್ತಾರೆ. ಮೊಟ್ಟೆ ತಿನ್ನುವುದರಿಂದ ಟೈಪ್ 2 ಮಧುಮೇಹ ಕಡಿಮೆಯಾಗುತ್ತದೆ ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

ವಾರಕ್ಕೆ ನಾಲ್ಕು ಮೊಟ್ಟೆಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಬಹುದು.ಆದರೆ ನಾಲ್ಕು ಮೊಟ್ಟೆಗಳಿಗಿಂತ ಹೆಚ್ಚು ತಿನ್ನುವುದರಿಂದ ಯಾವುದೇ ಹೆಚ್ಚುವರಿ ಪ್ರಯೋಜನವಿಲ್ಲ ಎಂದು ತಜ್ಞರು ಹೇಳುತ್ತಾರೆ. ವಾರಕ್ಕೆ ನಾಲ್ಕು ಮೊಟ್ಟೆಗಳನ್ನು ತಿನ್ನುವುದರಿಂದ ಗ್ಲೂಕೋಸ್, ಚಯಾಪಚಯ ಮತ್ತು ಉರಿಯೂತದ ಮಟ್ಟಗಳು ಕಡಿಮೆಯಾಗುತ್ತವೆ. ಇದು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಬೆಳಿಗ್ಗೆ ಮೊಟ್ಟೆಗಳನ್ನು ತಿನ್ನುವುದು ಹೆಚ್ಚು ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ.

Shwetha M