ಅಯ್ಯೋ.. ಈ ಸಾವು ನ್ಯಾಯವೇ..! – ಯುವಕನಿಗೆ ಚುಚ್ಚಿ ಪ್ರಾಣ ತೆಗೆದ ಕಿಲ್ಲರ್ ಫಿಶ್!

ಇತ್ತೀಚಿನ ದಿನಗಳಲ್ಲಿ ಸಾವು ಯಾರಿಗೆ? ಯಾವಾಗ? ಹೇಗೆ ಬರುತ್ತದೆ ಎಂದು ಹೇಳೋಕೆ ಸಾಧ್ಯವಿಲ್ಲ.. ಈಗ ನಮ್ಮ ಮುಂದೆ ಇದ್ದವರು, ನಾಳೆ ನಮ್ಮೊಂದಿಗೆ ಇರ್ತಾರೆ ಅನ್ನೋದಿಕ್ಕೆ ಸಾಧ್ಯವಿಲ್ಲ.. ಇದೀಗ ಇಲ್ಲೊಬ್ಬ ಯುವಕನ ಪಾಲಿಗೆ ಮೀನೊಂದು ಯಮನ ರೂಪದಲ್ಲಿ ಬಂದು ಜೀವ ತೆಗೆದಿದೆ. ಮೀನು ಚುಚ್ಚಿ ಯುವಕ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ಇದನ್ನೂ ಓದಿ: ತಾಳಿ ಕಟ್ಟುವಾಗ ಬಯಲಾಯ್ತು ನಿತ್ಯಾ ತಾಯಿಯಾಗುವ ರಹಸ್ಯ- ಸಪ್ತಪದಿ ತುಳಿದ ಕರ್ಣನ ಮುಂದೆ ಕಠೋರ ಸತ್ಯ
ಮೃತ ಯುವಕನನ್ನು 24 ವರ್ಷದ ಅಕ್ಷಯ ಅನಿಲ ಮಾಜಾಳಿಕರ್ ಎಂದು ಗುರುತಿಸಲಾಗಿದೆ. ಕಾರವಾರದ ಮಾಜಾಳಿ ದಾಂಡೇಭಾಗದಲ್ಲಿ ಅಕ್ಟೋಬರ್ 14 ರಂದು ಯುವಕನೊಬ್ಬ ಮೀನುಗಾರಿಕೆಗೆ ತೆರಳಿದ್ದ. ಈ ವೇಳೆ ದೋಣಿಯಲ್ಲಿದ್ದ ಯುವಕನಿಗೆ ನೀರಿನಿಂದ ಜಿಗಿದ ಚೂಪು ಮೂತಿಯ ಕಾಂಡೆ (ತೊಳೆ) ಮೀನು ಚುಚ್ಚಿದೆ. ಸುಮಾರು 8 ರಿಂದ 10 ಇಂಚಿದ್ದ ಮೀನಿನ ಮೂತಿ ಚುಚ್ಚಿದ ಪರಿಣಾಮ ಯುವಕ ಗಂಭೀರವಾಗಿ ಗಾಯಗೊಂಡಿದ್ದ.
ಗಾಯಗೊಂಡ ಯುವಕನನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದೆರಡು ದಿನಗಳಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಯುವಕನಿಗೆ ವೈದ್ಯರು ಹೊಟ್ಟೆಯ ಭಾಗದ ಗಾಯಕ್ಕೆ ಹೊಲಿಗೆ ಹಾಕಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದರೂ, ತೀವ್ರ ನೋವಿದ್ದ ಪರಿಣಾಮ ಯುವಕ ಆಸ್ಪತ್ರೆಯಲ್ಲೇ ತಂಗಿದ್ದ. ಮೀನಿನ ಮೂತಿ ಚುಚ್ಚಿದ್ದರಿಂದ ಯುವಕನ ಕರುಳಿಗೂ ಗಾಯವಾಗಿದ್ದ ಪರಿಣಾಮ ನಿನ್ನೆ ರಾತ್ರಿ ಯುವಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ವೈದ್ಯರ ನಿರ್ಲ್ಯಕ್ಷದಿಂದಲೇ ಯುವಕ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಹಿನ್ನಲೆ ಆಸ್ಪತ್ರೆ ಸುತ್ತಾ ಯುವಕನ ಸಂಬಂಧಿಕರು ಜಮಾಯಿಸಿದ್ದು, ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೋಡಿರಿ

