ವಲ್ಲಭ ಮತ್ತು ಅಮೂಲ್ಯ ಮದುವೆ ಆಗೋಯ್ತು..! – ತಲೆತಿರುಗಿ ಬಿದ್ದ ನಂದ

ವಲ್ಲಭ ಮತ್ತು ಅಮೂಲ್ಯ ಮದುವೆ ಆಗೋಯ್ತು..! – ತಲೆತಿರುಗಿ ಬಿದ್ದ ನಂದ

ನಂದ ಗೋಕುಲ ಧಾರಾವಾಹಿಯಲ್ಲಿ ವೀಕ್ಷಕರು ಅಂದುಕೊಂಡಂತೆ ಆಗಿಯೇ ಹೋಗಿದೆ. ಮೊದಲೇ ಎಲ್ಲರೂ ಹೀಗೆ ಆಗಬಹುದು ಅಂತಾ ಲೆಕ್ಕಾಚಾರ ಹಾಕಿದ್ದರು. ಕೊನೆಗೂ ವಲ್ಲಭ ಮತ್ತು ಅಮೂಲ್ಯ ಮದುವೆಯಾಗಿದ್ದಾರೆ. ಇಬ್ಬರ ಮದುವೆಯಿಂದ ಎರಡು ಮನೆಗಳ ಮನಸು ಮತ್ತೆ ಮುರಿದಿದೆ.

ಇದನ್ನೂ ಓದಿ:ಗಾಯಕ ರಘು ದೀಕ್ಷಿತ್ 2ನೇ ಮದುವೆ – ಗಾಯಕಿ ವಾರಿಜಶ್ರೀ ಜೊತೆ ವಿವಾಹಕ್ಕೆ ಸಿದ್ಧತೆ

ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ. ಪದೇ ಪದೇ ಕಿತ್ತಾಡಿಕೊಳ್ಳುವುದೇ ಇವರಿಬ್ಬರಿಗೆ ಅದೇನೋ ಖುಷಿ. ಈಗ ಇದೇ ಕಿತ್ತಾಟದ ಜೋಡಿ ಒಂದಾಗಿದ್ದಾರೆ. ಶತ್ರುಗಳಾಗಿದ್ದ ಅಮೂಲ್ಯ ಮತ್ತು ವಲ್ಲಭ ಈಗ ಪತಿ-ಪತ್ನಿಯರಾಗಿದ್ದಾರೆ. ಸಿದ್ದು ಮೋಸದಿಂದ ಮನನೊಂದು ಆತ್ಮಹತ್ಯೆಗೆ ಅಮೂಲ್ಯ ಯತ್ನಿಸಿದ್ದಳು. ಇವಳನ್ನು ತಡೆದ ವಲ್ಲಭನ ತಾಯಿ ಒಂದು ತೀರ್ಮಾನಕ್ಕೆ ಬರುತ್ತಾಳೆ. ವಲ್ಲಭನ ಜೊತೆ ಅಮೂಲ್ಯಳಿಗೆ ಮದುವೆ ಮಾಡಿಸಿದ್ದಾರೆ. ಈ ಮದುವೆಯಿಂದ ನಂದ ಮತ್ತು ಅಮೂಲ್ಯರ ಕುಟುಂಬಕ್ಕೆ ತೀವ್ರ ಆಘಾತವಾಗಿದೆ.

ನಂದ ಗೋಕುಲ ಧಾರಾವಾಹಿಯಲ್ಲಿ ನಂದ ಹಾಗೂ ನಂದನ ಪತ್ನಿ ಮನೆಯವರಿಗೂ ದ್ವೇಷ ಬೆಳೆದಿತ್ತು. ಈ ಅಂತರ ಈಗ ಮತ್ತಷ್ಟು ದ್ವೇಷದ ಕಿಡಿ ಹಚ್ಚಿದೆ. ಅಮೂಲ್ಯ ಮದುವೆ ಮುರಿದು ಬಿದ್ದಿದ್ದು. ಆ ಸಂದರ್ಭದಲ್ಲಿ ನಂದ ತನ್ನ ಪತ್ನಿಯ ಸಹೋದರರ ಪರವಾಗಿ ಮಾತನಾಡಿದ್ದ. ಆತ್ಮಹತ್ಯೆಗೆ ಹೊರಟವನ ಬದುಕಿಸಿದ್ದ. ಹೀಗಿರುವಾಗಲೇ ವಲ್ಲಭ ಹಾಗೂ ಅಮೂಲ್ಯ ವಿವಾಹ ನಡೆದಿದೆ.

‘ನಂದ ಗೋಕುಲ’ ಧಾರಾವಾಹಿಯಲ್ಲಿ ಅಮೂಲ್ಯ ಹಾಗೂ ಸಿದ್ಧು ಪರಸ್ಪರ ಪ್ರೀತಿಸುತ್ತಾ ಇದ್ದರು. ಆದರೆ, ಸಿದ್ದು ಕೇವಲ ಹಣದ ಆಸೆಗೆ ಪ್ರೀತಿ ಮಾಡಿದ್ದ. ಅಮೂಲ್ಯಳ ಚಿನ್ನಾಭರಣ ತೆಗೆದುಕೊಂಡು ಪರಾರಿಯಾಗಿದ್ದ. ಈ ವೇಳೆ ದಿಕ್ಕು ತೋಚದೆ ಆಕೆ ಆತ್ಮಹತ್ಯೆಗೆ ಮುಂದಾಗಿದ್ದಾಳೆ. ಈ ಸಮಯಕ್ಕೆ ಸರಿಯಾಗಿ ಚಿನ್ನು ಅವಳನ್ನು ಕಾಪಾಡಿದ್ದಾಳೆ. ಆಗ ವಲ್ಲಭ ಹಾಗೂ ಅವನ ತಾಯಿ ಸಿಕ್ಕಿದ್ದಾಳೆ. ಈ ವೇಳೆ ವಲ್ಲಭನ ತಾಯಿ ದೊಡ್ಡ ನಿರ್ಧಾರ ತೆಗೆದುಕೊಂಡಳು. ವಲ್ಲಭ ಹಾಗೂ ಅಮೂಲ್ಯನನ್ನು ಮದುವೆ ಮಾಡಲು ನಿರ್ಧರಿಸಿದಳು. ಈ ಮದುವೆ ಯಶಸ್ವಿಯಾಗಿ ಆಗಿದೆ. ಅಮೂಲ್ಯ ಹಾಗೂ ವಲ್ಲಭ ಮದುವೆ ಆಗಿ ಮನೆಗೆ ಬಂದಿದ್ದಾರೆ. ಇದನ್ನು ನೋಡಿ ನಂದ ತಲೆತಿರುಗಿ ಬಿದ್ದಿದ್ದಾನೆ. ಅಮೂಲ್ಯಾ ಮನೆಯವರಿಗೂ ಇದು ಶಾಕಿಂಗ್ ಎನಿಸಿದೆ. ಮಗಳನ್ನು ಕೊಲ್ಲಲು ಮುಂದಾದವರು ಈಗ ಅಮೂಲ್ಯ-ವಲ್ಲಭನ ಮದುವೆ ನೋಡಿ ಮತ್ತಷ್ಟು ಸಿಟ್ಟಾಗಿದ್ದಾರೆ. ಈ ತಿರುವು ಈ ಇಬ್ಬರ ಮನೆಯವರ ಮನಸು ಮತ್ತಷ್ಟು ಮುರಿಯಲು ಕಾರಣವಾಗಿದೆ.

Sulekha