ಕೆಕೆಆರ್ ತಂಡಕ್ಕೆ ಕನ್ನಡಿಗ ಕೆಎಲ್ ರಾಹುಲ್?- ಕ್ಯಾಪ್ಟನ್ ಪಟ್ಟ ಕಟ್ಟಲು ಶಾರುಖ್ ಖಾನ್ ರೆಡಿ

ಕನ್ನಡಿಗ ಕೆ.ಎಲ್ ರಾಹುಲ್ ಅವರಿಗೆ ಐಪಿಎಲ್ನಲ್ಲಿ ಭಾರಿ ಡಿಮ್ಯಾಂಡ್ ಬೇಡಿಕೆಯಿದೆ. ಕೆಕೆಆರ್ ಟೀಮ್ ಗೆ ಸೇರುವ ಸಾಧ್ಯತೆಯಿದೆ. ಈಗಾಗಲೇ ಕೆಕೆಆರ್ ಮಾಲೀಕ ಶಾರುಖ್ ಖಾನ್, ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನ ತನ್ನ ತಂಡಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ಮಾಡುತ್ತಾ ಇದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಕೆಣಕಿದ್ದಕ್ಕೆ ಕ್ರಿಕೆಟ್ ಬ್ಯಾನ್? – PAK Vs AFG ಸರಣಿ ಕ್ಯಾನ್ಸಲ್!
ಮುಂಬರುವ ಐಪಿಎಲ್ಗೆ ಶಾರುಖ್ ಖಾನ್ ಒಡೆತನದ ಕೆಕೆಆರ್, ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟರ್ ಕೆ.ಎಲ್ ರಾಹುಲ್ರನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿದೆ. ಜೊತೆಗೆ ಕೆಕೆಆರ್ ಟೀಮ್ ಗೆ ಸೇರಿದರೆ ರಾಹುಲ್ ನಾಯಕ ಆಗೋದು ಕೂಡಾ ಫಿಕ್ಸ್ ಅಂತಾ ಹೇಳಲಾಗುತ್ತಿದೆ. ಜೊತೆಗೆ ಆರಂಭಿಕ ಬ್ಯಾಟರ್ ಮತ್ತು ವಿಕೆಟ್ಕೀಪಿಂಗ್ ಜವಾಬ್ದಾರಿ ನೀಡಲು ಕೆಕೆಆರ್ ಮುಂದಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ನಿಂದ ರಾಹುಲ್ ಹೊರಬಿದ್ದರೆ, ಕೆಕೆಆರ್ ತಂಡ ಸೇರೋದು ಗ್ಯಾರಂಟಿ ಎನ್ನಲಾಗುತ್ತಿದೆ.
ಆರಂಭಿಕ ಬ್ಯಾಟ್ಸ್ಮನ್ ಆಗಿ, ವಿಕೆಟ್ ಕೀಪರ್ ಆಗಿ ಹಾಗೂ ನಾಯಕನಾಗಿ ತಂಡವನ್ನು ಮುನ್ನಡೆಸಿದ ಅನುಭವವಿರುವ ರಾಹುಲ್ಗಾಗಿ ಮುಂಬರುವ ಐಪಿಎಲ್ಗೂ ಮುನ್ನ ಸಾಕಷ್ಟು ಫ್ರಾಂಚೈಸಿಗಳು ಬಲೆ ಬೀಸುತ್ತಿವೆ. ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧವೂ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ವರದಿಗಳ ಪ್ರಕಾರ ಕೆಎಲ್ ರಾಹುಲ್ ಜೊತೆಗೆ ಈಗಾಗಲೇ ಕೆಕೆಆರ್ ಫ್ರಾಂಚೈಸಿ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ. ಆ ಪ್ರಕಾರ ರಾಹುಲ್ರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಮಾತ್ರವಲ್ಲದೆ ಅವರಿಗೆ ತಂಡದ ನಾಯಕತ್ವ, ಆರಂಭಿಕನ ಜವಾಬ್ದಾರಿ ಮತ್ತು ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ವಹಿಸಲು ಕೆಕೆಆರ್ ಪ್ರಾಂಚೈಸಿ ರೆಡಿಯಾಗಿದೆ. ಶ್ರೇಯಸ್ ಅಯ್ಯರ್ ನಿರ್ಗಮನದ ನಂತರ, ಕೆಕೆಆರ್ ಅಜಿಂಕ್ಯ ರಹಾನೆ ಅವರನ್ನು ನಾಯಕನನ್ನಾಗಿ ನೇಮಿಸಿತು. ಆದರೆ ಅವರ ನಾಯಕತ್ವದಲ್ಲಿ ಕೆಕೆಆರ್ ಪ್ರದರ್ಶನ ತೀರ ಕಳಪೆಯಾಗಿತ್ತು. ತಂಡಕ್ಕೆ ಪ್ಲೇಆಫ್ ತಲುಪಲು ಸಾಧ್ಯವಾಗಲಿಲ್ಲ. ಈಗ, ಮುಂದಿನ ಸೀಸನ್ನಲ್ಲಿ ರಹಾನೆ ಅವರ ನಾಯಕತ್ವ ಮುಂದುವರಿಯುವುದು ಅಸಂಭವವಾಗಿದೆ. ಹೀಗಾಗಿ ಅವರ ಬದಲಿಯಾಗಿ ರಾಹುಲ್ರನ್ನು ನೋಡಲಾಗುತ್ತಿದೆ.

ನೋಡಿರಿ

