11 ಗುರುವಾರ ಹೀಗೆ ಉಪವಾಸ ಮಾಡಿದರೆ ಶುಭ ಫಲ ಖಂಡಿತ – ಪೂಜೆ ಹೀಗಿರಬೇಕು ಗೊತ್ತಾ?

11 ಗುರುವಾರ  ಹೀಗೆ ಉಪವಾಸ ಮಾಡಿದರೆ ಶುಭ ಫಲ ಖಂಡಿತ –  ಪೂಜೆ ಹೀಗಿರಬೇಕು ಗೊತ್ತಾ?

ಗುರುವಾರ ಅಂದರೆ ಇಂದು ಶ್ರೀಹರಿಯನ್ನು ಪೂಜಿಸುವುದರಿಂದ ಆ ವ್ಯಕ್ತಿಯು ತನ್ನ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತಾನೆ. ಅದೇ ರೀತಿ ಗುರುವಾರ ಶ್ರೀಹರಿಯನ್ನು ಪೂಜಿಸುವುದರೊಂದಿಗೆ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಹರಿಯ ಆಶೀರ್ವಾದವನ್ನು ಮತ್ತು ಬ್ರಹಸ್ಪತಿಯ ಆಶೀರ್ವಾದವನ್ನು ಕೂಡ ಪಡೆದುಕೊಳ್ಳಬಹುದು. ಹಾಗೂ ನಮ್ಮೆಲ್ಲಾ ಆಸೆಗಳು ಈಡೇರುತ್ತದೆ. ಹಾಗಾದರೆ ನಾವು ಗುರುವಾರ ಕೈಗೊಳ್ಳಬೇಕಾದ ನಿಯಮಗಳಾವುವು..?

ಗುರುವಾರ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ 

ಗುರುವಾರ ಭಗವಾನ್‌ ಬೃಹಸ್ಪತಿ ದೇವರನ್ನು ಪೂಜಿಸುವಾಗ ಬಾಳೆ ಗಿಡವನ್ನು ಕೂಡ ಪೂಜಿಸಬೇಕು. ಬಾಳೆ ಗಿಡವನ್ನು ಪೂಜಿಸುವಾಗ ಬಾಳೆ ಮರಕ್ಕೆ ನೀರು ಮತ್ತು ಹಳದಿ ಬಣ್ಣದ ಹೂವುಗಳನ್ನು ಸಹ ಅರ್ಪಿಸಬೇಕು. ಮತ್ತೊಂದೆಡೆ, ಮದುವೆಯಾಗುವುದರಲ್ಲಿ ಪದೇ ಪದೇ ಸಮಸ್ಯೆ ಎದುರಿಸುತ್ತಿದ್ದರೆ ಗುರುವಾರದಂದು ಉಪವಾಸ ವ್ರತವನ್ನು ಕೈಗೊಳ್ಳಬೇಕು.
ಇದರ ನಂತರ 11 ಗುರುವಾರದವರೆಗೆ ನಿಯಮಿತವಾಗಿ ಉಪವಾಸವನ್ನು ಮಾಡಬೇಕು. ಗುರುವಾರ ಉಪವಾಸ ವ್ರತವನ್ನು ಕೈಗೊಳ್ಳುವಾಗ ಹಳದಿ ಬಣ್ಣದ ಬಟ್ಟೆಯನ್ನು ಧರಿಸಬೇಕು. ಮತ್ತು ಹಳದಿ ಬಣ್ಣದ ಆಹಾರ ಪದಾರ್ಥಗಳನ್ನು ಸೇವಿಸಿ, ನಂತರ ಹಳದಿ ಬಣ್ಣದ ಬಾಳೆ ಹಣ್ಣನ್ನು ದಾನ ಮಾಡಬೇಕು. ನೀವು ಗುರುವಾರ ಉಪವಾಸದಲ್ಲಿ ಬಾಳೆ ಹಣ್ಣನ್ನು ದಾನ ಮಾಡುವುದರಿಂದ ಶುಭ ಫಲಿತಾಂಶವನ್ನು ಪಡೆದುಕೊಳ್ಳಬಹುದು. ಆದರೆ ಗುರುವಾರ ನೀವು ಮಾತ್ರ ಬಾಳೆಹಣ್ಣನ್ನು ಸೇವಿಸಬಾರದು.
ಉದ್ಯೋಗ – ವ್ಯಾಪಾರದಲ್ಲಿ ತೊಂದ್ರೆ ಆದ್ರೆ  ಹೀಗೆ ಮಾಡಿ 

ನಿಮ್ಮ ಕುಂಡಲಿಯಲ್ಲಿ ಗುರು ಗ್ರಹದ ಸ್ಥಾನ ಕೆಟ್ಟದಾಗಿದ್ದರೆ, ಗುರು ಗ್ರಹದಿಂದ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಆಗ ನೀವು ಗುರವಾರದಂದು ವಿಷ್ಣುವಿನ ದೇವಾಲಯಕ್ಕೆ ಭೇಟಿ ನೀಡಿ ಕೇಸರಿಯನ್ನು ಮತ್ತು ಕಡಲೆ ಬೇಳೆಯನ್ನು ದಾನವಾಗಿ ನೀಡಬೇಕು. ಪ್ರತಿನಿತ್ಯ ಹಣೆಗೆ ಕೇಸರಿ ಮತ್ತು ಶ್ರೀಗಂಧದ ತಿಲಕವನ್ನಿಡಬೇಕು. ಹಾಗೂ ಗುರುವಾರದಂದು ಧಾರ್ಮಿಕ ಪುಸ್ತಕಗಳನ್ನು ದಾನ ಮಾಡಬೇಕು. ಇದನ್ನು ಮಾಡುವುದರಿಂದ ಭಗವಾನ್‌ ಬೃಹಸ್ಪತಿಯು ಪ್ರಸನ್ನನಾಗಿ ನಿಮ್ಮ ಜೀವನದ ಸಮಸ್ಯೆಗಳನ್ನು, ಉದ್ಯೋಗದಲ್ಲಿನ ಸಮಸ್ಯೆಗಳನ್ನು ಮತ್ತು ವ್ಯವಹಾರದಲ್ಲಿನ ಸಮಸ್ಯೆಗಳನ್ನು ದೂರಾಗಿಸುವನು.

Kishor KV