ಬಿಗ್ ಬಾಸ್ ನಿಂದ ದಿವ್ಯಾ ಉರುಡುಗ ಔಟ್

ಬಿಗ್ ಬಾಸ್ ನಿಂದ ದಿವ್ಯಾ ಉರುಡುಗ ಔಟ್

ಬಿಗ್ ಬಾಸ್ ಕನ್ನಡ ಸೀಸನ್ 9 ಯಾರಾಗ್ತಾರೆ ಅನ್ನೋದಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಡಿಸೆಂಬರ್ 30, 31ರಂದು ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಫಿನಾಲೆ ವಾರದಲ್ಲಿ ಒಟ್ಟು 5 ಮಂದಿ ಸ್ಪರ್ಧಿಗಳಿದ್ದರು. ಸದ್ಯ ದೊಡ್ಮನೆಯಿಂದ ಹೊಸ ಅಪ್‌ಡೇಟ್ ಹೊರಬಂದಿದೆ. ಬಿಗ್ ಬಾಸ್  ಮನೆಯಲ್ಲಿರುವ 5 ಮಂದಿಯಲ್ಲಿ ಇಬ್ಬರು ಈಗಾಗಲೇ ಹೊರಬಂದಿದ್ದಾರೆ. ಫಿನಾಲೆಗೆ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ದೀಪಿಕಾ ದಾಸ್ ಮತ್ತು ದಿವ್ಯಾ ಉರುಡುಗ ಸೇರಿ ಐದು ಮಂದಿ ಮನೆಯೊಳಗೆ ಇದ್ದರು. ಆದರೆ, ಫೈನಲ್ ಹಂತದಲ್ಲಿ ದಿವ್ಯಾ ಉರುಡಗಗೆ ಲಕ್ ಕೈಕೊಟ್ಟಿದೆ.

ಫಿನಾಲೆವರೆಗೂ ಬಂದಿದ್ದ ದಿವ್ಯಾ ಉರುಡುಗ ಮನೆಯಿಂದ ಔಟ್ ಆಗಿದ್ದಾರೆ. ಐದನೇ ಸ್ಪರ್ಧಿಯಾಗಿ ದಿವ್ಯಾ ಉರುಡುಗ ಮನೆಯಿಂದ ಹೊರಬಂದಿದ್ದಾರೆ. 4ನೇ ಸ್ಪರ್ದಿಯಾಗಿ ದೀಪಿಕಾ ಕೂಡಾ ಮನೆಯಿಂದ ಹೊರನಡೆದಿದ್ದಾರೆ. ದಿವ್ಯಾ ಮತ್ತು ದೀಪಿಕಾ ಇಬ್ಬರೂ ಮನೆಯಿಂದ ಹೊರ ಬಂದ ಬಳಿಕ ಮನೆಯಲ್ಲಿ 3 ಸ್ಪರ್ಧಿಗಳು ಮಾತ್ರ ಇದ್ದಾರೆ. ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ ಮತ್ತು ರಾಕೇಶ್ ಅಡಿಗ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಈ ಮೂವರಲ್ಲಿ ಬಿಗ್ ಬಾಸ್ ಟ್ರೋಫಿ ಯಾರ ಮುಡಿಗೆ ಎನ್ನುವ ಕುತೂಹಲ ಹೆಚ್ಚಾಗಿದೆ.

ಬಿಗ್ ಬಾಸ್ ಕನ್ನಡ 8 ಶೋನಿಂದಲೂ ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿಗೂ ಆಗಿ ಬರೋದಿಲ್ಲ. ಬಿಗ್ ಬಾಸ್ ಕನ್ನಡ ಸೀಸನ್ 9 ಶೋನಲ್ಲಿಯೂ ಕೂಡ ಇದೇ ಮುಂದುವರೆದಿದೆ. ಸಾಕಷ್ಟು ಬಾರಿ ದಿವ್ಯಾ ವಿರುದ್ಧ ಪ್ರಶಾಂತ್ ಸಂಬರಗಿ ಆರೋಪ ಮಾಡಿದ್ದರು. ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರ ಮುಂದೆ ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಯಾರು ಮನೆಯಿಂದ ಹೊರಗಡೆ ಬರಬೇಕು ಎನ್ನುವ ಪ್ರಶ್ನೆಗೆ ಪ್ರಶಾಂತ್ ಸಂಬರಗಿ ಅವರು, “ದಿವ್ಯಾ ಉರುಡುಗ ಅವರು ಇಷ್ಟುದಿನ ಇದ್ದಿದ್ದೆ ಹೆಚ್ಚು. ಅವರು ಏನೂ ಮಾಡದೆ ಬಿಗ್ ಬಾಸ್ ಫಿನಾಲೆ ತಲುಪಿದ್ದಾರೆ. ದಿವ್ಯಾ ಬಿಗ್ ಬಾಸ್ ಮನೆಯಲ್ಲಿ ಏನು ಮಾಡಿದ್ದಾರೆ ಎಂದು ಅವರನ್ನು ಅವರೇ ಕೇಳಿಕೊಳ್ಳಲಿ. ಇಷ್ಟುದಿನ ದಿವ್ಯಾ ಹೆಜ್ಜೆ ಹಾಕಿದ್ದು ಅದೃಷ್ಟದಿಂದ ಮಾತ್ರ. ದಿವ್ಯಾ ಉರುಡುಗ ಅವರೇ ಮನೆಯಿಂದ ಹೊರಗಡೆ ಬರಬೇಕು, ಹೊರಗಡೆ ಬರುತ್ತಾರೆ” ಎಂದು ಖಾರವಾಗಿ ಹೇಳಿದ್ದರು. ಇದನ್ನು ಮನೆಯ ಒಳಗಡೆ ಇದ್ದಾಗಲೇ ಕೇಳಿಸಿಕೊಂಡ ದಿವ್ಯಾ ಉರುಡುಗ ಅವರು ಹೊರಗಡೆ ಬಂದು, ಕಿಚ್ಚ ಸುದೀಪ್ ಮುಂದೆ ನಿಂತು ಪ್ರಶಾಂತ್ ಸಂಬರಗಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ದಿವ್ಯಾ ಉರುಡುಗ “ನಾನು ಅದೃಷ್ಟದಿಂದ ಬಿಗ್ ಬಾಸ್‌ನಲ್ಲಿ ಇಷ್ಟುದಿನ ಇಲ್ಲ. ನನ್ನನ್ನು ಜನರು ಇಷ್ಟಪಟ್ಟಿರೋದಿಕ್ಕೆ ಇಲ್ಲಿ ಇರೋದು, ಇಲ್ಲ ಅಂದ್ರೆ ಇರುತ್ತಿರಲಿಲ್ಲ. ದಿವ್ಯಾ ಅಂತ ಹೆಸರು ಬಂದಕೂಡಲೇ ನನ್ನ ಬಗ್ಗೆ ಏನೇನೋ ಮಾತನಾಡುತ್ತೀರಿ. ಪ್ರಶಾಂತ್ ಸಂಬರಗಿಯವರನ್ನು ನಾನೊಬ್ಬಳೇ ಹ್ಯಾಂಡಲ್ ಮಾಡಬಹುದಿತ್ತು. ಆದರೆ ಪ್ರಶಾಂತ್ ಸಂಬರಗಿಗೆ ಉಳಿದ ಸ್ಪರ್ಧಿಗಳನ್ನು ಹ್ಯಾಂಡಲ್ ಮಾಡೋದು ಕಷ್ಟ ಆಗಿತ್ತು. ಹಾಗಾಗಿ ನನಗೆ ಈ ಸಲ ಸ್ವಲ್ಪ ಹೊಂದಿಕೊಳ್ಳೋದು ಕಷ್ಟ ಆಗಿರಬಹುದು. ಯಾರು ಮನೆಯಿಂದ ಹೊರಗಡೆ ಹೋಗ್ತಾರೆ ಎಂದು ಕೇಳಿದಾಗ ಪ್ರಶಾಂತ್ ಸಂಬರಗಿ ಅವರು ಬೇರೆಯವರು ಕೂಡ ನನ್ನ ಹೆಸರು ಹೇಳಬೇಕು ಅನ್ನೋ ತರ ಮಾತನಾಡುತ್ತಾರೆ” ಎಂದು ಖಾರವಾಗಿ ಹೇಳಿದ್ದಾರೆ.

suddiyaana