ಇಂಡಿಯಾ ನೆಕ್ಸ್ಟ್ ಟಾರ್ಗೆಟ್ AUS – ಸರಣಿಗೂ ಮೊದ್ಲೇ ಭಾರತ ಕೆಣಕಿದ್ದೇಕೆ?
3 ಪಂದ್ಯ.. ಎಷ್ಟು ಇಂಪಾರ್ಟೆಂಟ್?

ಐಸಿಸಿ ಚಾಂಪಿಯನ್ಸ್ ಟ್ರೋಫಿ.. ಇಂಗ್ಲೆಂಡ್ ಸರಣಿ ಡ್ರಾ.. ಏಷ್ಯಾಕಪ್ ನಲ್ಲಿ ಅಜೇಯ ಚಾಂಪಿಯನ್.. ವೆಸ್ಟ್ ಇಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ರೆಕಾರ್ಡ್.. ಸದ್ಯ ಸೂಪರ್ ಸಾಲಿಡ್ ಫಾರ್ಮ್ನಲ್ಲಿರೋ ಟೀಂ ಇಂಡಿಯಾ ಈಗ ಆಸ್ಟ್ರೇಲಿಯಾ ಸರಣಿಗೆ ಸಜ್ಜಾಗಿದೆ. ವೈಟ್ ಬಾಲ್ ಸಿರೀಸ್ ಗೆಲ್ಲೋದ್ರ ಜೊತೆಗೆ ರೋಹಿತ್-ಕೊಹ್ಲಿ ಜೋಡಿಗೂ ಈ ಟೂರ್ ತುಂಬಾನೇ ಇಂಪಾರ್ಟೆಂಟ್ ಆಗುತ್ತೆ. ಅದೂ ಅಲ್ದೇ ಪಾಕ್ ವಿರುದ್ಧ ಭಾರತದ ನೋ ಶೇಕ್ ಹ್ಯಾಂಡ್ ನಿರ್ಧಾರವನ್ನ ಟೀಕಿಸುತ್ತಿರೋ ಕಾಂಗರೂಗಳಿಗೆ ತಕ್ಕ ಪಾಠ ಕಲಿಸ್ಬೇಕಿದೆ. ವೈಟ್ ಬಾಲ್ ಹಾಗೇ ರೆಡ್ ಬಾಲ್ ಫಾರ್ಮೆಟ್ನಲ್ಲಿ ಡಾಮಿನೇಟ್ ಮಾಡ್ತಿರೋ ಟೀಂ ಇಂಡಿಯಾ ಈಗ ಆಸ್ಟ್ರೇಲಿಯಾ ಸರಣಿಗೆ ಸಜ್ಜಾಗಿದೆ. ಅದೂ ಅಲ್ದೇ ಈ ಸರಣಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಮ್ ಬ್ಯಾಕ್ ಮಾಡಿರೋದು ಸರಣಿಯ ಹೈಲೆಟ್ ಆಗಿದೆ. ಶುಭ್ಮನ್ ಗಿಲ್ ನಾಯಕತ್ವದಲ್ಲಿ ಇಬ್ಬರು ಲೆಜೆಂಡರಿ ಪ್ಲೇಯರ್ಸ್ ಕಣಕ್ಕಿಳಿಯುತ್ತಿದ್ದು 2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ಈ ಸಿರೀಸ್ ಮೇಲೆ ಎಲ್ಲರ ಕಣ್ಣಿದೆ.
ಇದನ್ನೂ ಓದಿ : PAK ಕ್ರಿಕೆಟರ್ಸ್ ಕೈಗೆ ಗನ್ – ಕಪ್ ಗೆದ್ದು ಮೈದಾನದಲ್ಲೇ ಫೈರಿಂಗ್
5 ತಿಂಗಳ ಬಳಿಕ ಮೈದಾನಕ್ಕೆ ರೋಹಿತ್ & ಕೊಹ್ಲಿ!
ಆಸ್ಟ್ರೇಲಿಯಾ ವಿರುದ್ಧದ 3 ಏಕದಿನ ಪಂದ್ಯಗಳ ಸರಣಿ ಇದೇ ಅಕ್ಟೋಬರ್ 19ರಂದು ಪರ್ತ್‌ನಲ್ಲಿ ಆರಂಭವಾಗುತ್ತದೆ. ಎರಡನೇ ಪಂದ್ಯ ಅಕ್ಟೋಬರ್ 23ಕ್ಕೆ ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆದ್ರೆ ಕೊನೇ ಪಂದ್ಯ ಅಕ್ಟೋಬರ್ 25ಕ್ಕೆ ಮೂರನೇ ಏಕದಿನ ಪಂದ್ಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಸರಣಿಯಲ್ಲಿ ರೋಹಿತ್ ಮತ್ತು ಕೊಹ್ಲಿ ಅವರು ಆಡಲಿದ್ದು, 7 ತಿಂಗಳ ಬಳಿಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಮ್ ಬ್ಯಾಕ್ ಮಾಡ್ತಿದ್ದಾರೆ. ಭಾರತದ ಯಂಗ್ ಕ್ಯಾಪ್ಟನ್ ಶುಭ್ಮನ್ ಗಿಲ್ಗೆ ಇದು ನಾಯಕನಾಗಿ ಮೊದಲ ಏಕದಿನ ಸರಣಿಯ ಅಗ್ನಿಪರೀಕ್ಷೆಯಾಗಲಿದೆ. ಅದೂ ಅಲ್ದೇ ಏಕದಿನ ವಿಶ್ವಕಪ್‌ಗೆ ಇನ್ನೂ ಎರಡು ವರ್ಷಗಳು ಬಾಕಿ ಇರುವಾಗ 36 ವರ್ಷದ ಕೊಹ್ಲಿ ಮತ್ತು 38 ವರ್ಷದ ರೋಹಿತ್ ಶರ್ಮಾ ಅವ್ರ ಫ್ಯೂಚರ್ ಕ್ರಿಕೆಟ್ ಬಗ್ಗೆಯೂ ಇಲ್ಲಿನ ಪರ್ಫಾಮೆನ್ಸ್ ಮೂಲಕ ಒಂದು ಕ್ಲಾರಿಟಿ ಸಿಗುತ್ತೆ. ಅಂದ್ರೆ ಈ ಟೂರ್ನಿಯಲ್ಲಿ ಅವ್ರ ಪ್ರದರ್ಶನ, ಫಿಟ್ನೆಸ್ ನೋಡಿ ಆ ಬಳಿಕ ವಿಶ್ವಕಪ್‌ಗೆ ಕಂಟಿನ್ಯೂ ಮಾಡ್ಬೇಕಾ ಅಥವಾ ಹೊಸ ಟೀಂ ಕಟ್ಟಬೇಕಾ ಅನ್ನೋ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ತಾರೆ. ಇದೆಲ್ಲ ಒಂದ್ಕಡೆಯಾದ್ರೆ ಆಸ್ಟ್ರೇಲಿಯನ್ನರ ದರ್ಪ, ದೌಲತ್ತು ಕೂಡ ಜಾಸ್ತಿಯಾಗ್ತಿದೆ. ಭಾರತವನ್ನ ಅಣಕಿಸಿ ವಿಡಿಯೋ ಮಾಡ್ತಿದ್ದಾರೆ. ಏಷ್ಯಾಕಪ್ ನಲ್ಲಿ ಭಾರತ ತಂಡದ ಆಟಗಾರರು ಪಾಕ್ ಆಟಗಾರರಿಗೆ ಕೈಕುಲುಕೋಕೆ ಒಪ್ಪಿರಲಿಲ್ಲ. ಅಲ್ಲಿನ ಮೆನ್ಸ್ ಌಂಡ್ ವುಮೆನ್ಸ್ ಟೀಮ್ ನವ್ರೂ ಇದನ್ನೇ ಮಿಮಿಕ್ ಮಾಡಿ ಗೇಲಿ ಮಾಡಿದ್ದಾರೆ. ಈ ವಿಡಿಯೋವನ್ನ ಶೇರ್ ಮಾಡಿದ್ದಾರೆ.
ಭಾರತದ ನೋ ಶೇಕ್ ಹ್ಯಾಂಡ್ ನಿರ್ಧಾರ ಅಣಕಿಸಿದ ಆಸ್ಟ್ರೇಲಿಯನ್ನರು!
ಏಷ್ಯಾಕಪ್ನ ಮೂರೂ ಪಂದ್ಯಗಳಲ್ಲೂ ಭಾರತ-ಪಾಕಿಸ್ತಾನ ಆಟಗಾರರು ನೋ ಶೇಕ್ ಹ್ಯಾಂಡ್ ಪಾಲಿಸಿ ಮಾಡಿದ್ರು. ಇದೀಗ ಭಾರತ ಮತ್ತು ಆಸ್ಟ್ರೇಲಿಯಾ ಏಕದಿನ ಸರಣಿಗೂ ಮುನ್ನ ಆಸ್ಟ್ರೇಲಿಯಾದ ಕ್ರಿಕೆಟಿಗರು ಅಂದ್ರೆ ಇಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಭಾರತದ ಹ್ಯಾಂಡ್‌ಶೇಕ್ ನಿರಾಕರಣೆ ನಿರ್ಧಾರವನ್ನು ಟಾರ್ಗೆಟ್ ಮಾಡಿ ಅಪಹಾಸ್ಯ ಮಾಡಿದ್ದು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ, ಒಬ್ಬ ಆಂಕರ್, ಟೀಂ ಇಂಡಿಯಾ ಎಷ್ಟು ಬಲಿಷ್ಠವಾಗಿದೆ ಅನ್ನೋದು ನಮ್ಗೆಲ್ಲಾ ಗೊತ್ತಿದೆ. ಆದರೆ ನಾವು ಅವರ ಒಂದು ವೀಕೆನೆಸ್ನ ಫೈಂಡ್ ಮಾಡಿದ್ದೇವೆ ಅಂತಾರೆ. ಆ ಟೈಮಲ್ಲಿ ಮತ್ತೊಬ್ಬ ಌಂಕರ್, ಭಾರತೀಯರಿಗೆ ಸಾಂಪ್ರದಾಯಿಕ ಶುಭಾಶಯ ಅಂದ್ರೆ ಹ್ಯಾಂಡ್‌ಶೇಕ್ ಅಷ್ಟಾಗಿ ಇಷ್ಟವಿಲ್ಲ ಎಂಬುದು ನಮಗೆ ಗೊತ್ತು. ಆದ್ದರಿಂದ ನಾವು ಚೆಂಡು ಎಸೆಯುವುದಕ್ಕೂ ಮುನ್ನವೇ ಅವರನ್ನು ಕನ್ಫ್ಯೂಸ್ ಮಾಡಬಹುದು ಅಂದಿದ್ದಾರೆ. ಇದಕ್ಕೆ ಆಸ್ಟ್ರೇಲಿಯಾ ಪ್ಲೇಯರ್ಸ್ ಬೇರೆ ಬೇರೆ ರೀತಿಯಲ್ಲಿ ವಿಶಸ್ ಮಾಡ್ಬೋದು ಅನ್ನೋ ಥರ ಌಕ್ಟ್ ಮಾಡಿದ್ದಾರೆ. ಆಸ್ಟ್ರೇಲಿಯಾದ ಪುರುಷರ ಮತ್ತು ಮಹಿಳಾ ತಂಡದ ಕ್ರಿಕೆಟಿಗರು ಹ್ಯಾಂಡ್‌ಶೇಕ್ ಬದಲಿಗೆ ಭಾರತೀಯ ಆಟಗಾರರೊಂದಿಗೆ ನಾವು ಬೇರೆ ರೀತಿಯಲ್ಲಿ ಶುಭಾಶಯಗಳನ್ನ ತಿಳಿಸಬಹುದು ಎಂದಿದ್ದು ವಿಡಿಯೋ ಫುಲ್ ವೈರಲ್ ಆಗ್ತಿದೆ.
ಆಸ್ಟ್ರೇಲಿಯಾ ವಿರುದ್ಧ ಗೆದ್ರಷ್ಟೇ ಭಾರತದ ಪ್ರತಿಷ್ಠೆ!
ಌಕ್ಚುಲಿ ಪಾಕಿಸ್ತಾನ ಆಟಗಾರರಿಗೆ ಕೈಕುಲುಕಬೇಕೋ ಬೇಡ್ವೋ ಅನ್ನೋದು ಭಾರತೀಯರಿಗೆ ಬಿಟ್ಟದ್ದು. ಅದು ನಮ್ಮ ಚಾಯ್ಸ್.. ಅದನ್ನ ಅಣಕ ಮಾಡೋದು, ವ್ಯಂಗ್ಯ ಮಾಡೋ ರೈಟ್ಸ್ ಆಸ್ಟ್ರೇಲಿಯನ್ಸ್ಗೆ ಇಲ್ಲ. ಸೋ ಕಾಂಗರೂನಾಡಿನ ಆಟಗಾರರ ಸೊಕ್ಕು ಮುರೀಬೇಕು ಅಂದ್ರೆ ಟೀಂ ಇಂಡಿಯಾ ಈ ಸರಣಿಯನ್ನ ಗೆಲ್ಲಲೇಬೇಕು. ಯಾಕಂದ್ರೆ ಭಾರತದ ವಿರುದ್ಧ ಪ್ರತೀ ಮ್ಯಾಚ್ ಗೆದ್ದಾಗ್ಲೂ ಆಸ್ಟ್ರೇಲಿಯಾ ಪ್ಳೇಯರ್ಸ್ ಏನಾದ್ರೂ ಕುಚೇಷ್ಠೆ ಮಾಡ್ತಾನೇ ಇರ್ತಾರೆ. 2024-2025ರ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲೂ ನಾವು ಇದನ್ನೆಲ್ಲಾ ನೋಡಿದ್ವಿ ಸೋ ಈ ಸಲ ಅದಕ್ಕೆ ಚಾನ್ಸ್ ಕೊಡ್ಲೇಬಾರದು.
ಸದ್ಯ ಆಸ್ಟ್ರೇಲಿಯಾ ಪ್ರವಾಸದ ನಂತರ ಭಾರತ ತಂಡವು ತವರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2 ಟೆಸ್ಟ್‌ಗಳ ಸರಣಿಯನ್ನು ಆಡಲಿದ್ದು, ನವೆಂಬರ್ 14ರಂದು ಕೋಲ್ಕತ್ತಾದಲ್ಲಿ ಆರಂಭವಾಗುತ್ತದೆ. ಈ ಸರಣಿಯು WTC 2025-27ರಲ್ಲಿ ಭಾರತದ ಮುಖ್ಯ ಭಾಗವಾಗಿದ್ದು, ಗಿಲ್ ಅವರ ನಾಯಕತ್ವದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಟಾವ ಪ್-2 ಸ್ಥಾನಕ್ಕೆ ತಲುಪುವ ಅವಕಾಶ ಹೊಂದಿದೆ.

ನೋಡಿರಿ

