ಚಿಕ್ಕ ವಯಸ್ಸಿಗೆ ಅಶ್ವಿನಿ ಗೌಡ ಮದ್ವೆ.. Divorce! – BBK ಅಶ್ವಿನಿ ಹೋರಾಟದ ಬದುಕು

ಚಿಕ್ಕ ವಯಸ್ಸಿಗೆ ಅಶ್ವಿನಿ ಗೌಡ ಮದ್ವೆ.. Divorce! – BBK ಅಶ್ವಿನಿ ಹೋರಾಟದ ಬದುಕು

ಬಿಗ್ ಬಾಸ್ ಕನ್ನಡ ಸೀಸನ್ 12 ರೋಚಕತೆಯಿಂದ ಕೂಡಿದೆ. 19 ಸ್ಪರ್ಧಿಗಳ ಪೈಕಿ ಈಗ 17 ಮಂದಿ ದೊಡ್ಮನೆಯಲ್ಲಿ ಆಟ ಆಡ್ತಿದ್ದಾರೆ. ಇವ್ರಲ್ಲಿ ಪ್ರಮುಖ ಆಕರ್ಷಣೆ ನಟಿ ಹಾಗೂ ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಗೌಡ.. ಮೊದಲ ದಿನದಿಂದಲೇ ಅಶ್ವಿನಿ ಹವಾ ಜೋರಾಗಿದೆ. ಸ್ವಲ್ಪ‌ ಕೆಣಕಿದ್ರೂ ಸಿಕ್ಕಿದ್ದೇ ಚಾನ್ಸ್ ಅಂತ ಸಹ ಸ್ಪರ್ಧಿಗಳ ಮೇಲೆ ಜಗಳಕ್ಕೆ ಬರ್ತಾರೆ. ಇದ್ರಿಂದಾಗೇ ಅಶ್ವಿನಿ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ ಗುರುತಿಸಿಕೊಂಡಿದ್ದಾರೆ. ದೊಡ್ಮನೆಯಲ್ಲಿ ಸದಾ ಲವಲವಿಕೆಯಿಂದ ಆಟ ಆಡೋ ಈ ಹೋರಾಟಗಾರ್ತಿ ಅಶ್ವಿನಿ ಕೋಟಿಗಳ ಒಡತಿ. ಆದ್ರೆ ಎಷ್ಟು ಕೋಟಿ ಕೋಟಿ ಸಂಪತ್ತು ಇದ್ರು, ಅಶ್ವಿನಿ ಜೀವನ ಕಹಿಯಿಂದ ಕೂಡಿದೆ.

ಇದನ್ನೂ ಓದಿ: ಕರ್ಣನ ಪಾತ್ರದಿಂದ ಮನೆಮಾತಾಗಿದ್ದ ಬಹುಬಾಷ್ ನಟ ಪಂಕಜ್ ಧೀರ್ ವಿಧಿವಶ

ನಟಿ, ನಿರ್ಮಾಪಕಿ, ಕನ್ನಡ ಪರ ಹೋರಾಟಗಾರ್ತಿ ಅಶ್ವಿನಿ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಚೆನ್ನಾಗಿ ಆಟ ಆಡ್ತಿದ್ದಾರೆ. ನಟಿ ಅಶ್ವಿನಿ ಗೌಡ ಮೊದಲ ದಿನದಿಂದಲೇ ಸಖತ್ ಹೈಲೈಟ್ ಆಗಿದ್ದಾರೆ.. ಸದಾ ಗಿಲ್ಲಿನಟನ ಜೊತೆಗೆ ಜಗಳ ಮಾಡ್ಕೊಂಡು ಬಂದ ಅಶ್ವಿನಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ದೊಡ್ಮನೆಯಲ್ಲಿ ಚೆನ್ನಾಗಿ ಆಟ ಆಡ್ತಿದ್ದಂತೆ ಅಶ್ವಿನಿ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಚರ್ಚೆ ನಡೆಯುತ್ತಿದೆ. ಶ್ರೀಮಂತ ಕುಟುಂಬದಲ್ಲಿ ಬೆಳೆದ ಅಶ್ವಿನಿ ಬದುಕು ನಿಜಕ್ಕೂ ಹೋರಾಟದಿಂದಲೇ ಕೂಡಿದೆ.

ಅಶ್ವಿನಿ ಗೌಡ ನಟನಾ ಕ್ಷೇತ್ರಕ್ಕೆ ಕಾಲಿಡೋಕು ಮುನ್ನವೇ ವೆಲ್ ಸೆಟಲ್  ಆಗಿದ್ರು.  ಕೆ.ಆರ್ ಪುರಂನಲ್ಲಿ ಪಂಚಾಯತಿಯ ಮಾಜಿ ಅಧ್ಯಕ್ಷರಾಗಿದ್ದ ಮುನಿಬಚ್ಚಪ್ಪ ಅಶ್ವಿನಿ ಗೌಡ ಅವ್ರ ತಂದೆ. ಕುಟುಂಬದಲ್ಲಿ ಎಲ್ಲರೂ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡ್ರೆ ಅಶ್ವಿನಿ ಮಾತ್ರ ಬಣ್ಣದ ಲೋಕಕ್ಕೆ ಕಾಲಿಟ್ರು. ಅಶ್ವಿನಿ 25ಕ್ಕೂ ಹೆಚ್ಚು ಕನ್ನಡ, ತೆಲುಗು ಸೀರಿಯಲ್ಗಳಲ್ಲಿ, 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಜೊತೆಗೆ ಕನ್ನಡ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಇನ್ನು ಅಶ್ವಿನಿ ಗೌಡ ತುಂಬಾ ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿದ್ದಾರೆ. 17 ವರ್ಷದವರಿದ್ದಾಗ ಅವರ ಮದುವೆ ನಡೆದಿತ್ತು.. ಒಬ್ಬ ಮಗ ಕೂಡ ಇದ್ದಾನೆ.. ಆದ್ರೆ ಮದುವೆಯಾದ ಕೆಲವೇ ವರ್ಷಗಳಲ್ಲಿ ದಾಂಪತ್ಯದಲ್ಲಿ ಬಿರುಕು ಬಿದ್ದಿತ್ತು. ಗಂಡನ ಜೊತೆ ಮನಸ್ತಾಪ ಶುರುವಾಗಿದ್ರಿಂದಾಗಿ ಅಶ್ವಿನಿ ಡಿವೋರ್ಸ್ ಪಡೆದುಕೊಂಡಿದ್ದರು. ನಂತರ ತನ್ನ ತಾಯಿ ಮನೆಯಲ್ಲಿ ಅಶ್ವಿನಿ ಗೌಡ ಇದ್ದಾರೆ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ..

ನಟಿ ಅಶ್ವಿನಿ ಗೌಡ ಅವರು ಶ್ರೀಮಂತ ಕುಟುಂಬದಲ್ಲೇ ಬೆಳೆದವರು.. ಅವರ ಅಜ್ಜ ಆ ಕಾಲದಲ್ಲೇ ತುಂಬಾ ಆಸ್ತಿ ಮಾಡಿದ್ರು. ಅದನ್ನ ಅಶ್ವಿನಿ ತಂದೆ ಡೆವಲಪ್ ಮಾಡಿದ್ರು. ಬಳಿಕ ಅವರ ತಂದೆ  ಮನೆ, ವ್ಯವಹಾರದ ಜವಾಬ್ದಾರಿಯನ್ನ ಇವರಿಗೆ ವಹಿಸಿದ್ದಾರಂತೆ. ತಂದೆ ತೀರಿಕೊಂಡ ಬಳಿಕ ಅಶ್ವಿನಿ ಮನೆ, ಉದ್ಯಮವನ್ನ ಮುಂದುವರಿಸಿಕೊಂಡು ಹೋಗ್ತಿದ್ದಾರೆ. ಅಶ್ವಿನಿ ಸದ್ಯ ತಾಯಿ ಮಗನ ಜೊತೆ ಐಶಾರಾಮಿ ಮನೆಯಲ್ಲಿ ನೆಲೆಸಿದ್ದಾರೆ. ಜೊತೆಗೆ 150 ಮನೆಗಳನ್ನ ಬಾಡಿಗೆಗೆ ನೀಡಿದ್ದಾರಂತೆ. ಇನ್ನು ಅಶ್ವಿನಿಗೆ ಮೊದಲಿನಿಂದಲೂ ಕಾರ್ ಕ್ರೇಜ್ ಇದೆ.10ಕ್ಕೂ ಹೆಚ್ಚು ಲಕ್ಷುರಿ ಕಾರುಗಳು ಅವರ ಮನೆಯಲ್ಲಿವೆಯಂತೆ. .

ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಆಧ್ಯಕ್ಷೆ ಆಗಿರುವ ಅಶ್ವಿನಿ ಕನ್ನಡ‌ಪರ‌ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಇದ್ರಿಂದಾಗಿ ಒಂದಷ್ಟು ಕೇಸುಗಳೂ ಅವರ ವಿರುದ್ಧ ಬಿದ್ದಿವೆ. ಈಗಾಗಲೇ 20 ರಿಂದ 23 ಕೇಸ್‌ಗಳಿವೆ ಎಂದು ಅಶ್ವಿನಿ ಹೇಳಿಕೊಂಡಿದ್ದಾರೆ. ಏನೇ ಆದ್ರು ಬಿಗ್ ಬಾಸ್ ನಲ್ಲಿ ಅಶ್ವಿನಿ ಟಫ್ ಕಂಟೆಸ್ಟೆಂಟ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

Shwetha M