ಟಾಸ್ಕ್‌ನಲ್ಲಿ ಕಾವ್ಯ ಎಡವಟ್ಟು.. ಮನೆಯವರು ಸಪೋರ್ಟ್‌ ಮಾಡಿದ್ರೂ ಸೋತಿದ್ದು ಹೇಗೆ?

ಟಾಸ್ಕ್‌ನಲ್ಲಿ ಕಾವ್ಯ ಎಡವಟ್ಟು.. ಮನೆಯವರು ಸಪೋರ್ಟ್‌ ಮಾಡಿದ್ರೂ ಸೋತಿದ್ದು ಹೇಗೆ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರ ಮೊದಲ ಫಿನಾಲೆಗೆ ಕೌಂಟ್‌ಡೌನ್‌ ಶುರುವಾಗಿದೆ. ಇದೇ ಶನಿವಾರ ಹಾಗೂ ಭಾನುವಾರ ಫಿನಾಲೆ ನಡೆಯಲಿದೆ. ಈ ವಾರ ಒಟ್ಟು 13 ಮಂದಿ ಸ್ಪರ್ಧಿಗಳು ನಾಮಿನೇಟ್‌ ಆಗಿದ್ದು, ಈ ವಾರ ಮಾಸ್‌ ಎಲಿಮಿನೇಷನ್‌ ನಡೆಯಲಿದೆ. ಹೀಗಾಗಿ ಸ್ಪರ್ಧಿಗಳು ತಮ್ಮ ಸ್ಥಾನ ಉಳಿಸಿಕೊಳ್ಳಲು ಹೋರಾಟ ನಡೆಸಲೇಬೇಕಿದೆ. ಆದ್ರೀಗ ಬಿಗ್‌ ಬಾಸ್‌ ಕೊಟ್ಟ ಆಟದಲ್ಲಿ ಕಾವ್ಯ ಎಡವಿದ್ದಾರೆ.

ಇದನ್ನೂ ಓದಿ: ಡಿಕೆಶಿಗೆ ಹಾಸನಾಂಬೆ ಮಹಾಪ್ರಸಾದ – ಪೂಜೆ ವೇಳೆ ಎರಡೆರಡು ಬಾರಿ ಬಲಗಡೆ ಹೂವು ವರ ನೀಡಿದ ದೇವಿ

ಇಂದಿನ ಸಂಚಿಕೆಯಲ್ಲಿ ಬಿಗ್‌ ಬಾಸ್‌ ಮೊದಲ ಫಿನಾಲೆಯ ಈ ವಾರ ತಾವು ಫೈನಲಿಸ್ಟ್ ಆಗಿ ಈ ಮನೆಯಲ್ಲಿ ತಮ್ಮ ಪ್ರಯಾಣ ಮುಂದುವರೆಸಲು ಇದು ಕಟ್ಟ ಕಡೆಯ ಅವಕಾಶ ಎಂದು ಹೇಳಿ ಒಂದು ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್‌ನಲ್ಲಿ  ಕಾವ್ಯಾ ಹಾಗೂ ರಾಶಿಕಾ ಭಾಗವಹಿಸಿದ್ದಾರೆ. ಓರ್ವ ಸ್ಪರ್ಧಿ ಹಲಗೆ ಮೇಲೆ ನಡೆಯುತ್ತ ಎದುರಾಳಿ ಆಟಗಾರ ಇಟ್ಟಿರುವ ಡಿಸ್ಕ್ ಅನ್ನು ತಿರುಗಿಸಿ ತಮ್ಮ ಬಣ್ಣದ ಅಧಿಕ ಡಿಸ್ಕ್​ಗಳು ಮೇಲ್ಬದಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಈ ಟಾಸ್ಕ್‌ನಲ್ಲಿ ಅನೇಕರು ಕಾವ್ಯಗೆ ಸಪೋರ್ಟ್‌ ಮಾಡಿದ್ದಾರೆ. ಜಾನ್ವಿ, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಮಲ್ಲಮ್ಮ, ಧನುಷ್ ಸೇರಿದಂತೆ ಅನೇಕರು ಕಾವ್ಯ ಅವರು ಈ ಗೆಲ್ಲಲಿ ಅಂತ ಅವರಿಗೆ ಸಪೋರ್ಟ್ ಮಾಡ್ತೇನೆ ಎಂದಿದ್ದಾರೆ. ಆದರೆ, ಟಾಸ್ಕ್​ ಅನ್ನು ಸರಿಯಾಗಿ ಅರ್ಥ ಮಾಡುವಲ್ಲಿ ಕಾವ್ಯ ಎಡವಿದ್ದಾರೆ.

ಟಾಸ್ಕ್​ನ ಉಸ್ತುವಾರಿ ವಹಿಸಿಕೊಂಡಿದ್ದ ಧ್ರುವಂತ್ ಅವರು, ಡಿಸ್ಕ್​ಗಳನ್ನು ಕಾವ್ಯ ಅವರು ಕೈಯಲ್ಲಿ ಕಲೆಕ್ಟ್ ಮಾಡ್ತಾ ಹೋಗ್ತಿದ್ದಾರೆ. ಅವರು ತಮಗೆ ಇಷ್ಟ ಬಂದ ಹಾಗೆ ಆಟವಾಡಿದ್ದಾರೆ.. ನಿಮ್ಮನ್ನ ಈ ಟಾಸ್ಕ್​ನಲ್ಲಿ ಮೂವ್ ಮಾಡೋಕೆ ಬಿಡಲ್ಲ ಎಂದು ಹೇಳಿದ್ದಾರೆ.  ಈ ಪ್ರಸಂಗದಿಂದ ರಾಶಿಕಾಗೆ ಪ್ಲಸ್ ಆಗುವ ಸಾಧ್ಯತೆ ಇದೆ. ಅಲ್ಲದೆ ಪ್ರೋಮೋದಲ್ಲಿ ಕಾವ್ಯ ಬೇಸರದಲ್ಲಿ ಹೋಗುತ್ತಿರುವುದು ಕಂಡರೆ ರಾಶಿಕಾ ಮೊಗದಲ್ಲಿ ಗೆಲುವಿನ ನಗೆ ಕಾಣಿಸುತ್ತಿದೆ. ಇದೀಗ ಕಾವ್ಯ ಟಾಸ್ಕ್‌ನಿಂದ ಹೊರಗುಳಿದ್ರಾ? ಮುಂದೇನಾಗಲಿದೆ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿ ಮೂಡಿದೆ.

Shwetha M