ಡಿಕೆಶಿಗೆ ಹಾಸನಾಂಬೆ ಮಹಾಪ್ರಸಾದ – ಪೂಜೆ ವೇಳೆ ಎರಡೆರಡು ಬಾರಿ ಬಲಗಡೆ ಹೂವು ವರ ನೀಡಿದ ದೇವಿ

ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣೆಗೆ ಆಗ್ತಿದೆ. ಕರ್ನಾಟಕದಲ್ಲಿ ಸಚಿವ ಸಂಪುಟ ಪುನಾರಚನೆಗೆ ಕಸರತ್ತು ನಡೆಯುತ್ತಿದೆ. ಈ ಹೊತ್ತಿನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಹಾಸನದ ಅಧಿದೇವತೆ ಹಾಸನಾಂಬ ಮತ್ತು ಸಿದ್ದೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವರ ಪ್ರಾರ್ಥನೆ ವೇಳೆ ಡಿಕೆಶಿಗೆ ಬಲಗಡೆಯಿಂದ ಹೂವು ವರವಾಗಿ ಸಿಕ್ಕಿದೆ.
ಇದನ್ನೂ ಓದಿ: ದೇವರ ಪೂಜೆಗೆ ಮೊದಲು ಈ 7 ಆಹಾರ ತಿಂದ್ರೆ ತೊಂದ್ರೆ ಇಲ್ಲ – ಶಾಸ್ತ್ರ ಹೇಳುವ ಆಹಾರ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಮಂಗಳವಾರ ರಾತ್ರಿ ಪತ್ನಿಯೊಂದಿಗೆ ಹಾಸನಾಂಬೆ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಡಿಸಿಎಂಗೆ ವಿಜಯೀ ಶ್ರೇಯಸ್ಸು ಲಭಿಸಲೆಂದು ನಾರಾಯಣಿ ನಮಸ್ಕಾರ ಮಂತ್ರದ ಮೂಲಕ ಪೂಜೆ ಸಲ್ಲಿಸಿದ್ರು. ಸುಮಾರು ಐದು ನಿಮಿಷ ದುರ್ಗಾ ಸಪ್ತಸತಿಯ 11ನೇ ಅಧ್ಯಾಯದ ನಾರಾಯಣಿ ನಮಸ್ಕಾರ ಮಂತ್ರ ಹೇಳಿ ಅರ್ಚಕರು ಪೂಜೆ ನೆರವೇರಿಸಿದರು. ಪೂಜೆ ನೇರವೇರಿಸುವ ವೇಳೆ ಡಿಕೆಶಿ ಶತ್ರುವಿನ ಮೇಲೆ ವಿಜಯ ಸಾಧಿಸಲು ಖಡ್ಗಮಾಲ ಸ್ತೋತ್ರ ಪಠಿಸಿದ್ದಾರೆ. ಇದೇ ಶುಭ ಸಮಯದಲ್ಲಿ ದೇವಿಯ ಬಲಗಡೆಯಿಂದ ಹೂವು ವರವಾಗಿ ಸಿಕ್ಕಿದೆ. 2 ಬಾರಿ ದೇವಿಯ ಬಲಭಾಗದ ಹೂವು ಬಿದ್ದಿತು. ಪೂಜೆ ಬಳಿಕ ಮಾತನಾಡಿದ ಡಿಕೆಶಿ, ನಾನುಂಟು.. ಆ ತಾಯಿ ಉಂಟು ನಮಗೆ, ನಿಮಗೆ, ಎಲ್ಲರಿಗೂ ಭಗವಂತ ಶಾಂತಿ, ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದ್ರು.
ಇನ್ನು ಸಿಎಂ ಸಿದ್ದರಾಮಯ್ಯ ಕೂಡ ಇಂದು ಹಾಸನಾಂಬ ಸನ್ನಿಧಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆ ಬೂವನಹಳ್ಳಿ ಹೆಲಿಪ್ಯಾಡ್‌ಗೆ ಆಗಮಿಸಲಿದ್ದು, ಅಲ್ಲಿಂದ ಹಾಸನಾಂಬೆ ದರ್ಶನಕ್ಕೆ ತೆರಳಲಿದ್ದಾರೆ. ದರ್ಶನ ಪಡೆದು ಮಧ್ಯಾಹ್ನ 12 ಗಂಟೆಗೆ ವಾಪಸ್ ಆಗಲಿದ್ದಾರೆ.

ನೋಡಿರಿ

