PAK ಕ್ರಿಕೆಟರ್ಸ್ ಕೈಗೆ ಗನ್ – ಕಪ್ ಗೆದ್ದು ಮೈದಾನದಲ್ಲೇ ಫೈರಿಂಗ್
ಪಾಕ್ ಟೀಂ ಬ್ಯಾನ್ ಆಗುತ್ತಾ?

PAK ಕ್ರಿಕೆಟರ್ಸ್ ಕೈಗೆ ಗನ್ –  ಕಪ್ ಗೆದ್ದು ಮೈದಾನದಲ್ಲೇ ಫೈರಿಂಗ್ಪಾಕ್ ಟೀಂ ಬ್ಯಾನ್ ಆಗುತ್ತಾ?

ಹುಟ್ಟು ಗುಣ ಸುಟ್ರು ಹೋಗಲ್ಲ ಅನ್ನೋದನ್ನ ಪಾಕಿಸ್ತಾನಿಯರನ್ನ ನೋಡಿಯೇ ಹೇಳಿಬಿಡ್ಬೋದು. ಒಂದು ಕಡೆ ಅನ್ನ, ಇನ್ನೊಂದ್ ಕಡೆ ಗನ್ ಇಟ್ರೆ ಅವ್ರು ಗನ್ನೇ ಚೂಸ್ ಮಾಡಿಕೊಳ್ತಾರೆ. ಇದಕ್ಕೆ ಅಲ್ಲಿನ ಕ್ರಿಕೆಟಿಗರೂ ಹೊರತಲ್ಲ. ಕೈಗೆ ಬ್ಯಾಟ್, ಬಾಲ್ ಕೊಟ್ಟು ಆಡ್ರಿ ಅಂದ್ರೆ ಇಲ್ಲ ಇಲ್ಲ ನಾವು ಬ್ಯಾಟ್​ನೇ ರೈಫಲ್ ಮಾಡಿಕೊಳ್ತೇವೆ ಅಂಥಾ ಹುಚ್ಚಾಟ ಆಡ್ತಿದ್ದಾರೆ. ಏಷ್ಯಾಕಪ್​ನಲ್ಲಿ ಮೆನ್ಸ್ ಟೀಂ ಆಯ್ತು, ಐಸಿಸಿ ವುಮೆನ್ಸ್ ಕಪ್​ನಲ್ಲಿ ಗರ್ಲ್ಸ್ ಈಗ ಅಂಡರ್ 19 ತಂಡದಲ್ಲೂ ಅದೇ ಕಥೆ. ಪಾಕಿಸ್ತಾನಿ ಪ್ಲೇಯರ್ಸ್ ಮಾಡ್ತಿರೋ ಮಂಗಾಟಗಳೇ ಪಾಕಿಸ್ತಾನಿ ಕ್ರಿಕೆಟ್ ಟೀಮ್​ನೇ ಬ್ಯಾನ್ ಮಾಡಿ ಅನ್ನೋ ಟ್ರೆಂಡ್ ಶುರುವಾಗಿದೆ.

ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಒಂದೇ ಒಂದು ಮ್ಯಾಚ್ ಗೆಲ್ಲೋಕೆ ಆಗ್ದಿದ್ರೂ ಪಾಕಿಸ್ತಾನಿ ಆಟಗಾರರು ಬೇಜಾನ್ ದೌಲತ್ತು ತೋರ್ಸಿದ್ರು. ಸಾಹಿಬ್​ಜಾದಾ ಪರ್ಹಾನ್ ಬ್ಯಾಟ್​ನೇ ರೈಫಲ್ ಮಾಡಿ ಸೆಲೆಬ್ರೇಟ್ ಮಾಡಿದ್ದ. ಹ್ಯಾರಿಸ್ ರೌಫ್ ಭಾರತದ ರಫೇಲ್ ಯುದ್ಧವಿಮಾನಗಳನ್ನ ಕ್ರಾಶ್ ಮಾಡಿದ್ದೀವಿ ಅಂತಾ ಸಹ್ನೆ ಮಾಡಿದ್ದ. ಈ ಇಬ್ಬರಿಗೂ ಐಸಿಸಿ ಸರಿಯಾಗೇ ಬೆಂಡೆತ್ತಿ ಫೈನ್ ಹಾಕಿತ್ತು. ಆದ್ರೆ ಇಷ್ಟಾದ್ರೂ ಪಾಕ್​ನ ಆಟಗಾರರು ಬುದ್ಧಿ ಕಲಿತಿಲ್ಲ. ಈ ಇಬ್ಬರು ಮಾಡಿದ್ದ ಹುಚ್ಚಾಟಗಳನ್ನೇ ಬೇರೆ ಬೇರೆ ಟೂರ್ನಿ, ಪಂದ್ಯಗಳಲ್ಲಿ ರಿಪೀಟ್ ಮಾಡ್ತಿದ್ದಾರೆ. ಈಗ ಅಂಡರ್ 19 ತಂಡದ ಪ್ಲೇಯರ್ಸ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

ಪಾಕಿಸ್ತಾನದ ಅಂಡರ್ 19 ತಂಡದಿಂದಲೂ ಗನ್ ಫೈರ್ ಹುಚ್ಚಾಟ!

ಪ್ರಸ್ತುತ ಪಾಕಿಸ್ತಾನದ ಮೆನ್ಸ್ ಌಂಡ್ ವುಮೆನ್ಸ್ ಟೀಂ ಪ್ಲೇಯರ್ಸ್ ಆಟಕ್ಕಿಂತ ಜಾಸ್ತಿ ಗಾಂಚಾಲಿಗಳಿಂದಲೇ ಸದ್ದು ಮಾಡ್ತಿದ್ದಾರೆ. ಏಷ್ಯಾಕಪ್ ಬಳಿಕ ಪ್ರಚೋದನಾಕಾರಿ ಸೆಲೆಬ್ರೇಷನ್ ಜಾಸ್ತಿಯಾಗಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ವಿಡಿಯೋವೊಂದು ವೈರಲ್ ಆಗ್ತಿದೆ. ಪಾಕಿಸ್ತಾನದ U-19 ಮಹಿಳಾ ತಂಡದ ಆಟಗಾರ್ತಿಯರು ಈ ಸಲ ಮ್ಯಾಚ್ ಗೆದ್ಮೇಲೆ ರಫೇಲ್ ಡೌನ್ ರೀತಿಯ ಸಂಭ್ರಮಾಚರಣೆ ಮಾಡಿದ್ದಾರೆ. ಟೂರ್ನೆಮಂಟ್​ನಲ್ಲಿ ಗೆದ್ದ ಬಳಿಕ ನೇರಳೆ ಬಣ್ಣದ ಜೆರ್ಸಿ ಧರಿಸಿದ ಆಟಗಾರ್ತಿಯರ ಗುಂಪೊಂದು ಟ್ರೋಫಿಯೊಂದಿಗೆ ಕುಳಿತಿದೆ. ಮತ್ತೊಂದೆಡೆ ಇಬ್ಬರು ಯುವ ಆಟಗಾರರು ಬಂದೂಕುಗಳಂತೆ ತಮ್ಮ ಬ್ಯಾಟ್‌ಗಳನ್ನು ಹಿಡಿದುಕೊಂಡು ಮಿಲಿಟರಿ ಶೈಲಿಯಲ್ಲಿ ಹೆಜ್ಜೆ ಹಾಕಿದ್ದಾರೆ. ಇಬ್ಬರೂ ಗುಂಡು ಹಾರಿಸುತ್ತಿರುವಂತೆ ಌಕ್ಟ್ ಮಾಡಿದ್ದಾರೆ. ಈ ವೇಳೆ ಟ್ರೋಫಿಯೊಂದಿಗೆ ಕುಳಿತಿದ್ದ ಎಲ್ಲಾ ಆಟಗಾರ್ತಿಯರು ನೆಲಕ್ಕೆ ಬಿದ್ದು ಪೆಟ್ಟು ಬಿದ್ದಂತೆ ನಟಿಸಿದ್ದಾರೆ.

Video Flwo.. ( ಮಗಾ ವಿಡಿಯೋ ಫ್ಲೋ ಬಿಡು. ಆಡಿಯೋ ಮಾತ್ರ ಬೇರೆ ಹಾಕು.. ಕಾಪಿ ರೈಟ್ ಇದೆ)

ಇದೇ ಹುಚ್ಚಾಟದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. 19 ವರ್ಷದೊಳಗಿನ ಇವ್ರ ಕೃತ್ಯದ ಅರ್ಥ ಮತ್ತು ಪರಿಣಾಮಗಳೇನು. ಜಗತ್ತಿಗೆ ಯಾವ ಸಂದೇಶವನ್ನು ಕಳುಹಿಸಲು ಬಯಸುತ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ.

ಪ್ರಚೋದನಾಕಾರಿ ಸಂಭ್ರಮ.. ಪಾಕ್ ತಂಡಕ್ಕೆ ಬ್ಯಾನ್ ಬಿಸಿ!

ಪಾಕಿಸ್ತಾನಿ ಆಟಗಾರರ ವರ್ತನೆಗಳು ಇತ್ತೀಚೆಗೆ ಅತಿರೇಕವಾಗ್ತಿದೆ. ಕ್ರಿಕೆಟ್ ಅಷ್ಟೇ ಅಲ್ಲದೇ ಇತರೆ ಕ್ರೀಡೆಗಳಲ್ಲೂ ಇದೇ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಹೀಗಾಗಿ ಕ್ರೀಡೆಗಳಲ್ಲಿ ಪಾಕಿಸ್ತಾನ ತಂಡವನ್ನ ಬ್ಯಾನ್ ಮಾಡ್ಬೇಕು ಅಂತಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಗಳನ್ನ ಹಾಕ್ತಿದ್ದಾರೆ. ಅಷ್ಟೇ ಅಲ್ಲದೆ ಐಸಿಸಿ ವಾರ್ನ್ ಮಾಡಿದ್ರೂ ಕೂಡ ಬುದ್ಧಿ ಕಲಿಯದೇ ಇರೋದು ಆಕ್ರೋಶಕ್ಕೆ ಕಾರಣವಾಗಿದೆ. ಅಂಟುರೋಗದಂತೆ ಒಬ್ರಿಂದ ಒಬ್ರಿಗೆ ಹಬ್ಬುತ್ತಲೇ ಇದೆ. ಇದು ಹೀಗೇ ಕಂಟಿನ್ಯೂ ಆದ್ರೆ ಮುಂದಿನ ದಿನಗಳಲ್ಲಿ ಬೇರೆ ತಂಡಗಳ ಮೇಲೆ ಪರಿಣಾಮ ಬೀರುತ್ತೆ. ಹೀಗಾಗಿ ಪಾಕ್ ಟೀಂ ಬೇಡ್ವೇ ಬೇಡ ಅನ್ನೋ ವಾದ ಶುರುವಾಗಿದೆ. ಒಟ್ನಲ್ಲಿ ಪಾಕಿಸ್ತಾನಿ ಆಟಗಾರರು ಆಡೋದನ್ನ ಮರೆತು ಮಿಕ್ಕಿದ್ದನ್ನೆಲ್ಲಾ ಮಾಡ್ತಿದ್ದಾರೆ. ರೂಲ್ಸ್​ಗಂತೂ ಕವಡೆ ಕಾಸಿನ ಕಿಮ್ಮತ್ತು ಕೊಡ್ತಿಲ್ಲ. ಸೋ ಈಗಲೇ ಬಿಸಿ ಮುಟ್ಟಿಸಿದ್ರೆ ಒಳ್ಳೇದು.

 

 

Kishor KV