ಕಾವ್ಯ ಪ್ಲ್ಯಾನ್.. ಅಶ್ವಿನಿ ಎಸ್.ಎನ್ ಆಟದಿಂದ ಔಟ್! – ದೊಡ್ಮನೆಯಲ್ಲಿ ಡಬಲ್ಗೇಮ್ ಶುರು?

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈ ವಾರ ಮೊದಲ ಫಿನಾಲೆ ನಡೆಯಲಿದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಒಂಟಿ, ಜಂಟಿಗಳ ಆಟಕ್ಕೆ ಬ್ರೇಕ್ ಬಿದ್ದಿದೆ. ದೊಡ್ಮನೆಯಲ್ಲಿ ಉಳಿಯಬೇಕಾದ್ರೆ ಸ್ಪರ್ಧಿಗಳು ಒಂಟಿಯಾಗಿ ಹೋರಾಡಿ, ಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದಾರೆ. ಯಾಕಂದ್ರೆ ಈ ವಾರ ಮಾಸ್ ಎಲಿಮಿನೇಷನ್ ನಡೆಯಲಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಹೀಗಾಗಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಸ್ಪರ್ಧಿಗಳು ಮೈಚಳಿ ಬಿಟ್ಟು ಆಡುತ್ತಿದ್ದಾರೆ. ಆದ್ರೀಗ ಅಶ್ವಿನಿ ಎಸ್.ಎನ್ ಮನೆ ಮಂದಿ ಶಾಕ್ ಕೊಟ್ಟಿದ್ದಾರೆ. ಇದೀಗ ಆಕೆಯನ್ನ ಎಲ್ಲಾ ಟಾಸ್ಕ್ಗಳಿಂದ ಹೊರಗಿಟ್ಟಿದ್ದಾರೆ.
ಈ ಸೀಸನ್ನಲ್ಲಿ ಎರಡು ಫಿನಾಲೆ ನಡೆಯಲಿದೆ. ಮೊದಲ ಫಿನಾಲೆ ಈ ವಾರ ನಡೆಯಲಿದ್ದು, ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಸ್ಪಂದನಾ ಸೋಮಣ್ಣ ಹಾಗೂ ಮಾಲು ಫಿನಾಲೆ ಕಂಟೆಂಡರ್ ಆಗಿದ್ದಾರೆ. ಇನ್ನೋರ್ವ ಸ್ಪರ್ಧಿ ಯಾರು ಎಂಬುದು ನೋಡಬೇಕಿದೆ. ಮೊದಲ ಫಿನಾಲೆಯ ಈ ವಾರ ತಾವು ಫೈನಲಿಸ್ಟ್ ಆಗಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರಯಾಣ ಮುಂದುವರೆಸಲು ಇದು ಕಟ್ಟ ಕಡೆಯ ಅವಕಾಶ ಎಂದು ಹೇಳಿ ಬಿಗ್ ಬಾಸ್ ಟಾಸ್ಕ್ ನೀಡಿದ್ದಾರೆ. ಇದರಲ್ಲಿ ಗೆದ್ದವರಿಗೆ ಉಳಿಗಾಲ.. ಸೋತವರು ಯಾವ ಸಂದರ್ಭದಲ್ಲಿ ಬೇಕಾದ್ರೂ ಎಲಿಮಿನೇಟ್ ಆಗಬಹುದು. ಇದೀಗ ಕಲರ್ಸ್ ಇಂದಿನ ಎಪಿಸೋಡ್ನ ಒಂದು ಪ್ರೋಮೋ ಹೊರಬಿಟ್ಟಿದೆ.
ಆಟದಲ್ಲಿ ಉಳಿಸಲು ಇಚ್ಚಿಸುವ ಒಬ್ಬ ಸದಸ್ಯನ ಭಾವಚಿತ್ರದ ಮುಂದೆ ದೊಡ್ಡ ಚೆಂಡನ್ನು ಇಡಬೇಕು ಎಂದು ಬಿಗ್ ಬಾಸ್ ಹೇಳಿದ್ದಾರೆ. ಈ ಸಂದರ್ಭ ಕೆಲ ಮಹಿಳಾ ಸ್ಪರ್ಧಿಗಳು ಗುಂಪಾಗಿ ಚರ್ಚಿಸಿ ತಮ್ಮ ತಮ್ಮ ಫೋಟೋದ ಮುಂದೆ ಚೆಂಡನ್ನು ಇಡುವ ತೀರ್ಮಾನ ಮಾಡಿದ್ದಾರೆ. ಅಂತಿಮವಾಗಿ ಅಶ್ವಿನಿ ಎಸ್.ಎನ್ ಅವರ ಫೋಟೋ ಎದುರು ಯಾರೂ ಚೆಂಡು ಇಟ್ಟಿರುವುದಿಲ್ಲ.. ಅವರು ಆಟದಿಂದ ಹೊರಗುಳಿದಿದ್ದಾರೆ.
ಟಾಸ್ಕ್ ಮುಗಿದ ಬಳಿಕ ಮನೆಯಲ್ಲಿ ಜಗಳ ನಡೆದಿದೆ. ಸ್ಪಂದನಾ ಹಾಗೂ ರಾಶಿಕಾ ಮಾತನಾಡುತ್ತ ಟೀಮ್ ಆಗೋಣ ಅಂತ ಕರೆದಿದ್ದೇ ಕಾವ್ಯ ಅವರು ಎಂದು ಹೇಳಿದ್ದಾರೆ. ಇದು ಅಶ್ವಿನಿ ಎಸ್ಎನ್ ಕಿವಿಗೆ ಬಿದ್ದಿದೆ ಎಂಬಂತೆ ಕಾಣುತ್ತಿದೆ. ಸದ್ಯ ಇದೆಲ್ಲ ಕಾವ್ಯ ಪ್ಲ್ಯಾನ್.. ಅವಳು ನೋಡಿದ ರೀತಿ ಅಲ್ಲ ಎಂದು ಕೆಲವು ಅಭಿಪ್ರಾಯ ಹೊರಹಾಕಿದ್ದಾರೆ. ಅತ್ತ ಅಶ್ವಿನಿ ಎಸ್ಎನ್ ಬೇಸರದಲ್ಲಿ ಮುಳುಗಿದ್ದಾರೆ.

ನೋಡಿರಿ

