ಉಲ್ಟಾ ಆಯ್ತಾ ಮೈತ್ರಿ ಲೆಕ್ಕಾಚಾರ – ಬಿಜೆಪಿ ನಡೆ ಸಿಎಂ ನಿತೀಶ್ ಕುಮಾರ್‌ಗೆ ಎಫೆಕ್ಟ್ ಆಗುತ್ತಾ?

ಉಲ್ಟಾ ಆಯ್ತಾ ಮೈತ್ರಿ ಲೆಕ್ಕಾಚಾರ –  ಬಿಜೆಪಿ ನಡೆ ಸಿಎಂ ನಿತೀಶ್ ಕುಮಾರ್‌ಗೆ  ಎಫೆಕ್ಟ್ ಆಗುತ್ತಾ?

ಭಾರತೀಯ ಜನತಾ ಪಕ್ಷ ಇಂದು ( ಅ.14) ಮುಂಬರುವ ಬಿಹಾರ ವಿಧಾನಸಭಾ ಚುನಾವಣೆ 2025 ರ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್  ಸಿನ್ಹಾ ಅವರನ್ನು ಕ್ರಮವಾಗಿ ತಾರಾಪುರ ಮತ್ತು ಲಖಿಸರಾಯ್ ಸ್ಥಾನಗಳಿಂದ ಕಣಕ್ಕಿಳಿಸಿದೆ. ಮಾಜಿ ಉಪಮುಖ್ಯಮಂತ್ರಿ ತರ್ಕಿಶೋರ್ ಪ್ರಸಾದ್ ಮತ್ತು ರಾಜ್ಯ ಸಚಿವೆ ರೇಣು ದೇವಿ ಕ್ರಮವಾಗಿ ಕತಿಹಾರ್ ಮತ್ತು ಬೆಟ್ಟಯ್ಯದಿಂದ ಸ್ಪರ್ಧಿಸಲಿದ್ದಾರೆ. ಶ್ರೇಯಸಿ ಸಿಂಗ್ ಜಮುಯಿ ಸ್ಥಾನದಿಂದ ಕಣಕ್ಕೆ ಇಳಿಯಲಿದ್ದಾರೆ ಎಂದು ಬಿಜೆಪಿ ಬಿಡುಗಡೆ ಮಾಡಿದ ಪಟ್ಟಿ ತಿಳಿಸಿದೆ.

ಇದನ್ನೂ ಓದಿ: ಅಪ್ಪು ಹೆಸರಲ್ಲಿ ಜನಸ್ನೇಹಿ ಅಪ್ಲಿಕೇಶನ್  – ಆ್ಯಪ್ ಲಾಂಚ್​​ಗೆ ಡಿಕೆಶಿಗೆ ಆಹ್ವಾನ ನೀಡಿದ ಅಶ್ವಿನಿ ಪುನೀತ್‌ರಾಜ್‌ಕುಮಾರ್‌

ಅಭ್ಯರ್ಥಿಗಳಲ್ಲಿ ರಕ್ಸೌಲ್‌ನಿಂದ ಪ್ರಮೋದ್ ಸಿನ್ಹಾ, ಮೋತಿಹರಿಯಿಂದ ಪ್ರಮೋದ್ ಕುಮಾರ್, ಸೀತಾಮರ್ಹಿಯಿಂದ ಸುನಿಲ್ ಕುಮಾರ್ ಪಿಂಟು, ಸಹರ್ಸಾದಿಂದ ಅಲೋಕ್ ರಂಜನ್ ಝಾ ಸೇರಿದಂತೆ ಇತರರಿಗೆ ಅವಕಾಶ ಸಿಕ್ಕಿದೆ. ಸೀಟು ಹಂಚಿಕೆ ಒಪ್ಪಂದದ ಪ್ರಕಾರ, ಬಿಜೆಪಿ 101 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಕೇಂದ್ರ ಸಚಿವ ಮತ್ತು ಬಿಜೆಪಿಯ ಬಿಹಾರ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಭಾನುವಾರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಎಂದು ಘೋಷಿಸಿದರೆ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷವು 29 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.

 ಬಿಹಾರ ವಿಧಾನಸಭಾ ಸ್ಪೀಕರ್ ನಂದ ಕಿಶೋರ್ ಯಾದವ್ ಅವರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಸಾಮ್ರಾಟ್ ಚೌಧರಿ ತಾರಾಪುರದಿಂದ ಸ್ಪರ್ಧಿಸಲಿದ್ದಾರೆ. ವಿಜಯ್ ಸಿನ್ಹಾ ಲಖಿಸರಾಯ್‌ನಿಂದ ಸ್ಪರ್ಧಿಸಲಿದ್ದಾರೆ. ಇನ್ನೂ 30 ಸ್ಥಾನಗಳ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಘೋಷಿಸುವುದು ಬಾಕಿ ಇದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14ರಂದು ಎಣಿಕೆ ನಡೆಯಲಿದೆ. ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) 29 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ) ಮತ್ತು ಜಿತನ್ ರಾಮ್ ಮಾಂಝಿ ಅವರ ಎಚ್‌ಎಎಂ (ಎಸ್) ತಲಾ 6 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.

Kishor KV