ಭಾರತದ ಗೆಲುವಿನ ಕುಲದೀಪ – ಸದ್ದಿಲ್ಲದೇ ಚರಿತ್ರೆ ಸೃಷ್ಟಿಸಿದ ಯಾದವ್
ವೈಟ್ & ರೆಡ್ ಬಾಲ್ ಸೂಪರ್ ಸ್ಟಾರ್

ಕುಲ್ದೀಪ್ ಯಾದವ್. ಪ್ರಸ್ತುತ ಟೀಂ ಇಂಡಿಯಾದ ನಂಬರ್ 1 ಸ್ಪಿನ್ ಬೌಲರ್. Left arm wrist spinner ಆಗಿರೋ ಕುಲ್ದೀಪ್ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ಕೊಡ್ತಾನೇ ಬಂದಿದ್ದಾರೆ. ಇತ್ತೀಚೆಗೆ ಏಷ್ಯಾಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಕುಲ್ದೀಪ್ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಮ್ಯಾಚಲ್ಲೂ ಭಾರತಕ್ಕೆ ಬಿಗ್ ಸ್ಟ್ರೆಂಥ್ ಆಗಿದ್ದಾರೆ.. ಅದ್ರಲ್ಲೂ ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಭಾರತಕ್ಕೆ ಮ್ಯಾಚ್ ಟರ್ನಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ಇತ್ತೀಚಿನ ಪಂದ್ಯಗಳಲ್ಲಿ ಕುಲ್ದೀಪ್ ಯಾದವ್ ಬೌಲಿಂಗ್ಗೆ ಬಂದ್ರು ಅಂದ್ರೆ ವಿಕೆಟ್ ಪಕ್ಕಾ ಎನ್ನುವಂತೆ ಪರ್ಫಾಮ್ ಮಾಡ್ತಿದ್ದಾರೆ.
ಕೆರೆಬಿಯನ್ ಬ್ಯಾಟರ್ ಗಳ ಸಿಂಹಸ್ವಪ್ನವಾದ ಕುಲ್ದೀಪ್!
ವಿಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಎರಡೂ ಪಂದ್ಯಗಳನ್ನ ಗೆದ್ದು ವಿಂಡೀಸ್ ತಂಡವನ್ನ ವೈಟ್ ವಾಶ್ ಮಾಡಿದೆ. ಭಾರತದ ಈ ಗೆಲುವಿನಲ್ಲಿ ಕುಲ್ದೀಪ್ ಬೌಲಿಂಗ್ ಬಲ ತುಂಬಾನೇ ಇತ್ತು. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಭಾರತಕ್ಕೆ ಬೌಲಿಂಗ್ ವಿಭಾಗದಲ್ಲಿ ಶಕ್ತಿಯಾಗಿದ್ರು. ಮೊದಲ ಇನ್ನಿಂಗ್ಸ್ನಲ್ಲಿ 6.1 ಓವರ್ಗಳಲ್ಲಿ 25 ರನ್ ನೀಡಿ 2 ವಿಕೆಟ್ ಉರುಳಿಸಿದ್ರು. ಌಂಡ್ ಸೆಕೆಂಡ್ ಇನ್ನಿಂಗ್ಸ್ನಲ್ಲಿ 8.1 ಓವರ್ಗಳಲ್ಲಿ 23 ರನ್ ನೀಡಿ 2 ವಿಕೆಟ್ ಬೇಟೆಯಾಡಿದ್ರು. ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲಂತೂ ಬೌಲಿಂಗ್ ನಲ್ಲಿ ಫೈಫರ್ ವಿಕೆಟ್ ಸಾಧನೆ ಮಾಡಿದ್ದಾರೆ. ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಭಾರತದ ಪರ ಕುಲ್ದೀಪ್ ಯಾದವ್ 5 ವಿಕೆಟ್ಗಳನ್ನ ಬೇಟೆಯಾಡಿದ್ದಾರೆ. 26.5 ಓವರ್ ಬೌಲ್ ಮಾಡಿದ್ದ ಕುಲ್ದೀಪ್ 4 ಮೇಡನ್ ಓವರ್ಗಳ ಸಹಿತ 82 ರನ್ ನೀಡಿದ್ರು. ಹಾಗೇ 5 ವಿಕೆಟ್ಗಳನ್ನ ಬೇಟೆಯಾಡಿದ್ರು. ಈ ಮೂಲಕ ವೆಸ್ಟ್ ಇಂಡೀಸ್ ತಂಡವನ್ನ 248 ರನ್ಗಳಿಗೆ ಆಲೌಟ್ ಮಾಡುವಲ್ಲಿ ಭಾರತದ ಮೇನ್ ವೆಪನ್ ಆದ್ರು. ಇನ್ನು ಸೆಕೆಂಡ್ ಇನ್ನಿಂಗ್ಸ್ನಲ್ಲೂ ಮೂರು ವಿಕೆಟ್ ತೆಗ್ದಿದ್ದಾರೆ. 29 ಓವರ್ಗಳನ್ನ ಬೌಲ್ ಮಾಡಿದ ಕುಲ್ದೀಪ್ 4 ಮೇಡನ್ ಓವರ್ ಸಹಿತ 104 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ಟೋಟಲ್ಲಾಗಿ ಎರಡು ಪಂದ್ಯಗಳ ನಾಲ್ಕೂ ಇನ್ನಿಂಗ್ಸ್ಗಳಿಂದ ಸೇರಿ 12 ವಿಕೆಟ್ ಉರುಳಿಸಿದ್ದಾರೆ. ಹಾಗೇ ಸರಣಿಯಲ್ಲಿ ಹೈಯೆಸ್ಟ್ ವಿಕೆಟ್ ಟೇಕರ್ ಕೂಡ ಆಗಿದ್ದಾರೆ.
5 ವಿಕೆಟ್ ಗಳೊಂದಿಗೆ ವಿಶ್ವದಾಖಲೆ ಬರೆದ ಸ್ಪಿನ್ನರ್!
ಇನ್ನು ವಿಂಡೀಸ್ ವಿರುದ್ಧ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 5 ವಿಕೆಟ್ಗಳ ಗೊಂಚಲು ಪಡೆದ ಕುಲ್ದೀಪ್ ದಾಖಲೆಯನ್ನೂ ನಿರ್ಮಿಸಿದ್ರು. 5ನೇ ಬಾರಿಗೆ 5 ವಿಕೆಟ್ ಗಳ ಸಾಧನೆಯಾಗಿದೆ. ಆ ಮೂಲಕ ಭಾರತದ ರಿಸ್ಟ್ ಸ್ಪಿನ್ನರ್ ಅಪರೂಪದ ದಾಖಲೆ ನಿರ್ಮಿಸಿದ್ದು, ಅತೀ ಹೆಚ್ಚು ಬಾರಿ 5 ವಿಕೆಟ್ ಗೊಂಚಲು ಪಡೆದ ಮೊದಲ ಎಡಗೈ ಸ್ಪಿನ್ನರ್ ಎಂಬ ಚರಿತ್ರೆ ಸೃಷ್ಟಿಸಿದ್ದಾರೆ. ಆ ಮೂಲಕ ಇಂಗ್ಲೆಂಡ್ನ ಮಾಜಿ ಸ್ಪಿನ್ನರ್ ಜಾನಿ ವಾರ್ಡ್ಲೆ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಎಡಗೈ ಚೈನಾಮನ್ ಬೌಲರ್ ವಾರ್ಡೆಲ್ಗಿಂತ ವೇಗವಾಗಿ ಈ ಸಾಧನೆ ಮಾಡಿದ್ದಾರೆ. ಇದರಿಂದಾಗಿ ಚೈನಾಮನ್ ಬೌಲರ್ಗಳಲ್ಲಿ ಈ ಸಾಧನೆಯನ್ನು ವೇಗವಾಗಿ ಮಾಡಿದ ಬೌಲರ್ ಎನಿಸಿಕೊಂಡಿದ್ದಾರೆ. ಜಸ್ಟ್ 15 ಟೆಸ್ಟ್ ಪಂದ್ಯಗಳಲ್ಲೇ ಈ ಸಾಧನೆ ಮಾಡಿದ್ದಾರೆ.
ಏಷ್ಯಾಕಪ್ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಬೇಟೆಯಾಡಿದ್ದ ಕುಲ್ದೀಪ್!
ಇನ್ನು ಏಷ್ಯಾಕಪ್ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದ ಕುಲ್ದೀಪ್ ಇಡೀ ಟೂರ್ನಿಯಲ್ಲಿ ಹೈಯೆಸ್ಟ್ ವಿಕೆಟ್ ಟೇಕರ್ ಆಗಿದ್ರು. 7 ಪಂದ್ಯಗಳಿಂದ 9.29 ರ ಸರಾಸರಿಯಲ್ಲಿ 17 ವಿಕೆಟ್ಗಳನ್ನು ಪಡೆದಿದ್ರು. ಅದ್ರಲ್ಲೂ ಯುಎಇ ವಿರುದ್ಧ ನಡೆದ ಪಂದ್ಯದಲ್ಲಿ 7 ರನ್ ನೀಡಿ 4 ವಿಕೆಟ್ ಉರುಳಿಸಿದ್ದು ಪಂದ್ಯಾವಳಿಯಲ್ಲಿ ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಒಂದೇ ಆವೃತ್ತಿಯ ಏಷ್ಯಾ ಕಪ್ನಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಪಡೆದ ಬೌಲರ್ ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಇವರು ಫೈನಲ್ ಪಂದ್ಯದಲ್ಲೂ ಪಾಕ್ ವಿರುದ್ಧ ಸ್ಥಿರ ಪ್ರದರ್ಶನ ನೀಡಿ 4 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಮಿಂಚಿದ್ದರು. ಹೀಗಾಗಿ ಟೂರ್ನಮೆಂಟ್ನ ದಿ ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ರು. ಭಾರತ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಇಷ್ಟೇ ಅಲ್ದೇ ಒಡಿಐ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 100 ವಿಕೆಟ್ ಪಡೆದ ಭಾರತೀಯ ಬೌಲರ್ಗಳ ಲಿಸ್ಟ್ನಲ್ಲಿ ಕುಲ್ದೀಪ್ ಯಾದವ್ ನಂಬರ್ 3 ಪ್ಲೇಸ್ನಲ್ಲಿದ್ದಾರೆ. ಮೊಹಮ್ಮದ್ ಶಮಿ 56 ಪಂದ್ಯಗಳಲ್ಲಿ ಈ ಸಾಧನೆ ಮಾಡಿ ಫಸ್ಟ್ ಪ್ಲೇಸ್ನಲ್ಲಿದ್ರೆ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ 57 ಒಡಿಐ ಪಂದ್ಯಗಳಲ್ಲಿ 100 ವಿಕೆಟ್ಗಳ ಸಾಧನೆ ಮಾಡಿದ್ದಾರೆ. ಇನ್ನು ಕುಲ್ದೀಪ್ ಯಾದವ್ ಮೂರನೇ ಪ್ಲೇಸ್ನಲ್ಲಿದ್ದು 58 ಪಂದ್ಯಗಳಿಂದ 100 ವಿಕೆಟ್ಗಳನ್ನ ಬೇಟೆಯಾಡಿ ದಾಖಲೆ ಮಾಡಿದ್ದಾರೆ.
ಸದ್ಯ ಟೀಂ ಇಂಡಿಯಾದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಬ್ಯಾಟಿಂಗ್ & ಬೌಲಿಂಗ್ನಲ್ಲಿ ಇಡೀ ಕ್ರಿಕೆಟ್ ಜಗತ್ತನ್ನೇ ಡಾಮಿನೇಟ್ ಮಾಡ್ತಿರೋ ಪ್ಲೇಯರ್ಸ್ ಇದ್ದಾರೆ.. ಹೀಗೆ ಪ್ರತೀಸಲ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಕೊಟ್ಟಾಗ್ಲೂ ಒಬ್ಬೊಬ್ರು ಟ್ರೆಂಡಿಂಗ್ನಲ್ಲಿರ್ತಾರೆ. ಬಟ್ ಸದ್ದಿಲ್ಲದೇ ಚರಿತ್ರೆ ಸೃಷ್ಟಿಸ್ತಿರೋ ಸೂಪರ್ ಸ್ಟಾರ್ ಅಂದ್ರೆ ಅದು ಕುಲ್ದೀಪ್ ಯಾದವ್. ವೈಟ್ ಬಾಲ್ ಹಾಗೇ ರೆಡ್ ಬಾಲ್ ಫಾರ್ಮೆಟ್ನಲ್ಲಿ ಪ್ರಸ್ತುತ ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್ ಆಗಿದ್ದಾರೆ.

ನೋಡಿರಿ

