WTC ಅಂಕಪಟ್ಟಿಯಲ್ಲಿ ಭಾರತಕ್ಕೆ ಮೂರನೇ ಸ್ಥಾನ – ಟೀಮ್ ಇಂಡಿಯಾಕ್ಕೆ ಇನ್ನೆಷ್ಟು ಗೆಲುವು ಬೇಕು?

WTC ಅಂಕಪಟ್ಟಿಯಲ್ಲಿ ಭಾರತಕ್ಕೆ ಮೂರನೇ ಸ್ಥಾನ – ಟೀಮ್ ಇಂಡಿಯಾಕ್ಕೆ ಇನ್ನೆಷ್ಟು ಗೆಲುವು ಬೇಕು?

ವೆಸ್ಟ್ ಇಂಡೀಸ್ ವಿರುದ್ಧ ಭಾರತ ಕ್ಲೀನ್ ಸ್ವೀಪ್ ಸಾಧಿಸಿದೆ. ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭರ್ಜರಿ ಜಯ ಸಾಧಿಸಿದೆ. ಹೀಗಿದ್ದರೂ ಕೂಡಾ WTC ಅಂಕಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿ ತೃಪ್ತಿಪಟ್ಟುಕೊಳ್ಳಬೇಕಿದೆ.

ಇದನ್ನೂ ಓದಿ:ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ – ಟೆಸ್ಟ್ ಸರಣಿ ಕ್ಲೀನ್ ಸ್ವೀಪ್

ಆಸ್ಟ್ರೇಲಿಯಾ ತಂಡವು WTC 2025-27 ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನ ಪಡೆದಿದೆ. 3 ಪಂದ್ಯಗಳಲ್ಲಿ 3 ಗೆಲುವುಗಳೊಂದಿಗೆ 36 ಪಾಯಿಂಟ್‌ಗಳೊಂದಿಗೆ ಆಸ್ಟ್ರೇಲಿಯಾ ತಂಡ ಟಾಪ್ 1 ಪ್ಲೇಸ್‌ನಲ್ಲಿದೆ. ಭಾರತ ಇನ್ನೂ ಕೂಡಾ ಮೂರನೇ ಸ್ಥಾನದಲ್ಲೇ ಇದೆ.  ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನ ಮೊದಲ ಸರಣಿ ಡ್ರಾ ಸಾಧಿಸಿದ್ದ ಭಾರತ, 2ನೇ ಟೆಸ್ಟ್ ಸರಣಿಯಲ್ಲಿ ಗೆಲುವು ಸಾಧಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಸರಣಿಯನ್ನು 2-0ರಿಂದ ಕ್ಲೀನ್ ಸ್ವೀಪ್ ಮಾಡಿದೆ. ಆದರೆ ಈ ಸರಣಿ ಗೆಲುವು ಕೂಡ ಟೀಮ್ ಇಂಡಿಯಾ ಪಾಯಿಂಟ್ಸ್ ಟೇಬಲ್‌ನಲ್ಲಿ ಟಾಪ್-2 ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಶುಭಮನ್ ಗಿಲ್ ನಾಯಕತ್ವದ ಭಾರತ ತಂಡವು ಇದೀಗ ಮೂರನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳು ಮೊದಲೆರಡು ಸ್ಥಾನಗಳಲ್ಲಿವೆ.

ಟೀಮ್ ಇಂಡಿಯಾ 2025-27ರ ವಿಶ್ವಟೆಸ್ಟ್ ಚಾಂಪಿಯನ್​ಶಿಪ್ನಲ್ಲಿ 7 ಪಂದ್ಯಗಳನ್ನಾಡಿದ್ದು 61.90 ಗೆಲುವಿನ ಶೇಕಡಾವಾರು ಹೊಂದಿದೆ. ಆಸ್ಟ್ರೇಲಿಯಾ 100% ಗೆಲುವಿನ ಶೇಕಡಾವಾರು ಸಾಧಿಸಿ ಮೊದಲ ಸ್ಥಾನದಲ್ಲಿದ್ದರೆ, ಶ್ರೀಲಂಕಾ 66.67% ಶೇಕಡಾವಾರು ಸಾಧಿಸಿ ಎರಡನೇ ಸ್ಥಾನದಲ್ಲಿದೆ. WTC 2025-27 ಸೈಕಲ್ ಜೂನ್ 2025ರಲ್ಲಿ ಶ್ರೀಲಂಕಾ-ಬಾಂಗ್ಲಾದೇಶ ಸರಣಿಯೊಂದಿಗೆ ಆರಂಭವಾಗಿದ್ದು, 2027ರ ಜೂನ್‌ನಲ್ಲಿ ಲಾರ್ಡ್ಸ್‌ನಲ್ಲಿ ಫೈನಲ್ ನಡೆಯಲಿದೆ. 8 ತಂಡಗಳಲ್ಲಿ ಟಾಪ್-2 ತಂಡಗಳು ಫೈನಲ್‌ಗೆ ಅರ್ಹರಾಗುತ್ತವೆ. ಭಾರತ ತಂಡವು ಈಗಾಗಲೇ 7 ಪಂದ್ಯಗಳನ್ನು ಆಡಿದ್ದು, ನಾಲ್ಕು ಗೆಲುವುಗಳು, ಎರಡು ಸೋಲುಗಳು, ಮತ್ತು ಒಂದು ಡ್ರಾ ಸಾಧಿಸಿದ್ದು, ಒಟ್ಟು 52 ಪಾಯಿಂಟ್‌ಗಳನ್ನು ಪಡೆದಿದೆ. ವೆಸ್ಟ್ ಇಂಡೀಸ್ ಸರಣಿಯ ಗೆಲುವು ಭಾರತದ ಗೆಲುವಿನ ಪಾಯಿಂಟ್ಸ್ ಸುದಾರಿಸುವಂತೆ ಮಾಡಿದೆ. ಆದರೆ, ಇಂಗ್ಲೆಂಡ್ ವಿರುದ್ಧದ ಸೋಲು ಟೀಮ್ ಇಂಡಿಯಾಕ್ಕೆ ನುಂಗಲಾರದ ತುತ್ತಾಗಿದೆ.

Sulekha