ಅಪ್ಪು ಹೆಸರಲ್ಲಿ ಜನಸ್ನೇಹಿ ಅಪ್ಲಿಕೇಶನ್ – ಆ್ಯಪ್ ಲಾಂಚ್ಗೆ ಡಿಕೆಶಿಗೆ ಆಹ್ವಾನ ನೀಡಿದ ಅಶ್ವಿನಿ ಪುನೀತ್ರಾಜ್ಕುಮಾರ್

ಪುನೀತ್ ರಾಜ್ಕುಮಾರ್… ಕನ್ನಡಿಗರ ಎದೆಯಾಳುವ ದೊರೆ. ಕರುನಾಡ ಜನರ ಪ್ರೀತಿಯ ಅಪ್ಪು ಅಗಲಿ ನಾಲ್ಕು ವರ್ಷಗಳಾಗುತ್ತಾ ಬಂತು. ಪುನೀತ್ ಆ ನಗು ಮಾತ್ರ ಇಂದಿಗೂ ಯಾರ ಕಣ್ಣಿಂದಲೂ ಮರೆಯಾಗಿಲ್ಲ. ಪುನೀತ್ ಸಾವಿನ ಕ್ಷಣ ನೆನೆದರೆ ಇಂದಿಗೂ ಕಣ್ಣಾಲೆಗಳು ಒದ್ದೆಯಾಗುತ್ತವೆ. ಕನ್ನಡದ ಕಣ್ಮಣಿ ನಟ ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ ಅವರನ್ನ ಅಮರರಾಗಿಡಲು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಕಾರ್ಯವೊಂದನ್ನು ಕೈಗೊಂಡಿದ್ದಾರೆ. ಇದೀಗ ಅಪ್ಪು ಹೆಸರಿನಲ್ಲಿ ಅಪ್ಲಿಕೇಶನ್ವೊಂದು ಬಿಡುಗಡೆಗೆ ಸಜ್ಜಾಗಿದೆ.
ಇದನ್ನೂ ಓದಿ: ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕ್! – ಏಕಾಏಕಿ ಟಿಕೆಟ್ ದರ ಹೆಚ್ಚಿಸಿದ ಖಾಸಗಿ ಬಸ್ಗಳು!
ಪುನೀತ್ ರಾಜ್ಕುಮಾರ್ ನಮ್ಮನ್ನ ಅಗಲಿ ನಾಲ್ಕು ವರ್ಷ ಆಗ್ತಾ ಬಂದ್ರೂ ಕನ್ನಡಿಗರು ಒಂದಲ್ಲ ಒಂದು ಕಾರಣಕ್ಕೆ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಅಪ್ಪು ನೆನಪಿನಲ್ಲಿ ಅಪ್ಲಿಕೇಶನ್ ಒಂದನ್ನು ಹೊರತರಲು ಸಜ್ಜಾಗಿದ್ದಾರೆ.. ಪುನೀತ್ ರಾಜ್ಕುಮಾರ್ ಅವರ ಸ್ಮರಣಾರ್ಥ ಬಿಡುಗಡೆ ಆಗುವ ಅಪ್ಲಿಕೇಶನ್ಗೆ ಪಿಆರ್ಕೆ ಎಂದು ಹೆಸರಿಡಲಾಗಿದ್ದು, ಅಪ್ಪು ಅವರ ಪುಣ್ಯ ಸ್ಮರಣೆಯ ದಿನವಾದ ಅಕ್ಟೋಬರ್ 29ರಂದು ಅಪ್ಲಿಕೇಶನ್ ಅನ್ನು ಲೋಕಾರ್ಪಣೆ ಮಾಡುವ ಸಾಧ್ಯತೆಯಿದೆ. ಈ ಅಪ್ಲಿಕೇಶನ್ನ ಲೋಕಾರ್ಪಣೆಗೆ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಆಹ್ವಾನಿಸಿದ್ದಾರೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್ ಅವರನ್ನೂ ಸಹ ಆಹ್ವಾನಿಸುವ ಸಾಧ್ಯತೆ ಇದೆ.
ಪುನೀತ್ ರಾಜ್ಕುಮಾರ್ ಅವರ ಸಿನಿಮಾಗಳು, ಜೀವನ, ಅವರ ಸಾಧನೆ, ಮಾನವೀಯ ಗುಣ, ಅವರ ಸಮಾಜ ಸೇವೆ ಇನ್ನಿತರೆಗಳ ಮಾಹಿತಿಯನ್ನು ಅಪ್ಲಿಕೇಶನ್ ಒಳಗೊಂಡಿರುವ ಜೊತೆಗೆ, ಅಂಗಾಂಗ ದಾನ, ಶಿಕ್ಷಣ, ಆರೋಗ್ಯ ಮಾಹಿತಿ ಮತ್ತು ಸೇವೆ ಇನ್ನಿತರೆ ಸೇವೆಗಳನ್ನು ಸಹ ಈ ಅಪ್ಲಿಕೇಶನ್ ಒಳಗೊಂಡಿರುವ ಸಾಧ್ಯತೆ ಇದೆ. ಅಪ್ಲಿಕೇಶನ್ ಲೋಕಾರ್ಪಣೆಗೊಂಡ ಬಳಿಕವಷ್ಟೆ ಈ ಬಗ್ಗೆ ಪೂರ್ಣ ಮಾಹಿತಿ ಹೊರಬೀಳಲಿದೆ.

ನೋಡಿರಿ

