ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕ್!‌ – ಏಕಾಏಕಿ ಟಿಕೆಟ್ ದರ ಹೆಚ್ಚಿಸಿದ ಖಾಸಗಿ ಬಸ್​ಗಳು!

ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕ್!‌ – ಏಕಾಏಕಿ ಟಿಕೆಟ್ ದರ ಹೆಚ್ಚಿಸಿದ ಖಾಸಗಿ ಬಸ್​ಗಳು!

ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕೇಲವೇ ದಿನಗಳು ಬಾಕಿ. ಹಬ್ಬದ ಹಿನ್ನೆಲೆ ಸಾಲು ಸಾಲು ರಜೆ ಇರೋದ್ರಿಂದ ಬೆಂಗಳೂರಿನಲ್ಲಿ ನೆಲೆಸಿರುವ ಮಂದಿ ಊರಿಗೆ ತೆರಳಲು ಪ್ಲ್ಯಾನ್‌ ಮಾಡಿದ್ದಾರೆ. ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್‌ ಮಾಲಕರು ಪ್ರಯಾಣಿಕರಿಂದ ಸುಲಿಗೆಗಿಳಿದಿದ್ದಾರೆ. ಮನಬಂದಂತೆ ಟಿಕೆಟ್‌ ದರ ನಿಗದಿ ಮಾಡಿ, ಪ್ರಯಾಣಿಕರಿಗೆ ಶಾಕ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: ಆಟದಲ್ಲಿ ಗೆದ್ರೂ ಎಲ್ಲ ಟಾಸ್ಕ್​ನಿಂದ ಧ್ರುವಂತ್ ಬ್ಲಾಕ್! – ಸ್ಪಂದನಾ  ಮಾಸ್ಟರ್ ಸ್ಟ್ರೋಕ್.. ನಟ ಶಾಕ್!

ಪ್ರತಿ ಸಲ ಯಾವುದೇ ಹಬ್ಬ ಬಂದ್ರೂ ಖಾಸಗಿ ಬಸ್‌ಗಳ ಟಿಕೆಟ್ ದರ ಹೆಚ್ಚಿಸಿ, ಪ್ರಯಾಣಿಕರ ಜೇಬಿಗೆ ಬರೆ ಹಾಕೋದು ಮಾಮೂಲಿಯಾಗಿದೆ. ಇದೀಗ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲೂ ಖಾಸಗಿ ಬಸ್‌ ಮಾಲೀಕರು ಸುಲಿಗೆಗೆ ಇಳಿದಿದ್ದಾರೆ. 18 ಶನಿವಾರ, 19 ಭಾನುವಾರ, 20 ನರಕ ಚತುರ್ದಶಿ, 21 ಅಮಾವ್ಯಾಸೆ, 22 ದೀಪಾವಳಿಯಿದೆ. ಹೀಗಾಗಿ ಸಾಲು ಸಾಲು ರಜೆ ಬಂದಿವೆ. ಈ ನಿಟ್ಟಿನಲ್ಲಿ ಇದೇ ಶುಕ್ರವಾರ 17ರಂದು ರಾತ್ರಿಯೇ ಬೆಂಗಳೂರು ಮಂದಿ ಊರಿಗೆ ಹೊರಡೋ ಪ್ಲಾನ್‌ ಮಾಡಿದ್ದಾರೆ. ಇದ್ರ ಬೆನ್ನಲ್ಲೇ ಬೆಂಗಳೂರಿನಿಂದ ಕರ್ನಾಟಕದ ವಿವಿಧ ಊರುಗಳಿಗೆ ತೆರಳೋ ಖಾಸಗಿ ಬಸ್‌ಗಳು ಟಿಕೆಟ್ ದರವನ್ನು ದುಪ್ಪಟ್ಟಾಗಿದೆ. ಕೆಲ ಬಸ್‌ಗಳು 50% ಟಿಕೆಟ್ ದರ ಏರಿಕೆ ಮಾಡಿದ್ದಾರೆ.

ಇನ್ನೂ ಖಾಸಗಿ ಬಸ್‌ಗಳ ಟಿಕೆಟ್ ದರ ಏರಿಕೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ಕೊಟ್ಟಿದ್ದಾರೆ. ಈ ಟಿಕೆಟ್ ದರ ಏರಿಕೆ ಸರಿಯಲ್ಲ. ಸಾರಿಗೆ ಇಲಾಖೆಯಿಂದ ಟಿಕೆಟ್ ದರ ಏರಿಕೆ ಮಾಡಿದ ಬಸ್‌ಗಳ ಕಾರ್ಯಾಚರಣೆ ಮಾಡ್ತೇವೆ. ಜನರಿಗೆ ಸಹಾಯವಾಗಲಿ ಅಂತಾನೇ 2,500 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಹೆಚ್ಚುವರಿಯಾಗಿ ಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.

ಖಾಸಗಿ ಬಸ್ ಹಳೆ ದರ ಮತ್ತು ಹೊಸ ದರ

ಬೆಂಗಳೂರು-ಹುಬ್ಬಳ್ಳಿ

ಹಳೆ ದರ: 900-1,000 ರೂ.

ಹೊಸ ದರ: 2,500-3,000 ರೂ.

ಬೆಂಗಳೂರು-ಬೆಳಗಾವಿ

ಹಳೆ ದರ: 1,500-1,600ರೂ.

ಹೊಸ ದರ: 2,600-4,000ರೂ.

ಬೆಂಗಳೂರು-ಗದಗ

ಹಳೆ ದರ: 1,100-1,200ರೂ.

ಹೊಸ ದರ: 1,800-2,000ರೂ.

ಬೆಂಗಳೂರು-ಮಂಗಳೂರು

ಹಳೆ ದರ: 1,300-1,400ರೂ.

ಹೊಸ ದರ: 2,300-2,700ರೂ.

ಬೆಂಗಳೂರು-ಉಡುಪಿ

ಹಳೆ ದರ: 1,500-1,700ರೂ.

ಹೊಸ ದರ: 2,000-2,300ರೂ.

ಬೆಂಗಳೂರು-ಬೀದರ್

ಹಳೆ ದರ: 1,700-1,800ರೂ.

ಹೊಸ ದರ:  2,500-3,500ರೂ.

ಬೆಂಗಳೂರು-ರಾಯಚೂರು

ಹಳೆ ದರ: 1,000-1,200ರೂ.

ಹೊಸ ದರ: 1,900-2,700ರೂ

ಬೆಂಗಳೂರು-ಕಲಬುರಗಿ

ಹಳೆ ದರ: 1,700-1,800ರೂ.

ಹೊಸ ದರ: 2,500-2,600ರೂ.

Shwetha M