ಪಾಕ್ ಪ್ರಧಾನಿ ಮುಂದೆ ಭಾರತ & ಮೋದಿಯನ್ನ ಹೊಗಳಿದ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೆ ಹೊಗಳಿದ್ದಾರೆ. ಭಾರತವು ನನ್ನ ಉತ್ತಮ ಸ್ನೇಹಿತನನ್ನು ಹೊಂದಿರುವ ಉತ್ತಮ ದೇಶ ಎಂದು ಅವರು ಹೇಳಿದರು. ಇಸ್ರೇಲ್-ಹಮಾಸ್ ಯುದ್ಧವನ್ನು ಕೊನೆಗೊಳಿಸಿ ಗಾಜಾದಲ್ಲಿ ಕದನ ವಿರಾಮ ಒಪ್ಪಂದದ ನಂತರ ಈಜಿಪ್ಟ್ ನಗರದಲ್ಲಿ ವಿಶ್ವ ನಾಯಕರ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಭಾರತ ಮತ್ತು ಪಾಕಿಸ್ತಾನಗಳು ಒಟ್ಟಿಗೆ ಚೆನ್ನಾಗಿ ಬದುಕುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್ ಹೇಳಿದರು.
ಇದನ್ನೂ ಓದಿ: ಖ್ಯಾತ ರಂಗಭೂಮಿ ಕಲಾವಿದ ರಾಜು ತಾಳಿಕೋಟೆ ನಿಧನ –ಹುಟ್ಟೂರಿನಲ್ಲಿ ಇಂದು ಅಂತ್ಯಕ್ರಿಯೆ
ಟ್ರಂಪ್ ಮೋದಿ ಅವರನ್ನು ಹೊಗಳುವಾಗ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸಹ ಉಪಸ್ಥಿತರಿದ್ದರು. ನಂತರ ಮಾತನಾಡಿದ ಷರೀಫ್ ಭಾರತ ಮತ್ತು ಪಾಕಿಸ್ತಾನ ನಡುವಿನ ಪರಮಾಣು ಸಂಘರ್ಷವನ್ನು ಶಮನಗೊಳಿಸಿದ್ದಕ್ಕಾಗಿ ಟ್ರಂಪ್ಗೆ ಸಾರ್ವಜನಿಕವಾಗಿ ಧನ್ಯವಾದ ಅರ್ಪಿಸಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಮಾತ್ರವಲ್ಲದೆ ಮಧ್ಯಪ್ರಾಚ್ಯದಲ್ಲಿಯೂ ಲಕ್ಷಾಂತರ ಜೀವಗಳನ್ನು ಉಳಿಸಿದ್ದಕ್ಕಾಗಿ” ಟ್ರಂಪ್ ಅವರನ್ನು ಮತ್ತೊಮ್ಮೆ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಬಯಸುತ್ತೇನೆ ಎಂದು ಷರೀಫ್ ಹೇಳಿದ್ದಾರೆ.
ನೊಬೆಲ್ ಶಾಂತಿ ಪ್ರಶಸ್ತಿಯನ್ನು ಕಳೆದುಕೊಂಡ ನಂತರ, ಟ್ರಂಪ್ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಸೇರಿದಂತೆ ಎಂಟು ಯುದ್ಧಗಳನ್ನು ಪರಿಹರಿಸಿರುವುದಾಗಿ ಹೇಳಿಕೊಂಡಿದ್ದಾರೆ, ನೊಬೆಲ್ಗಾಗಿ ನಾನು ಇದನ್ನು ಮಾಡಿಲ್ಲ ಎಂದು ಹೇಳಿದ್ದಾರೆ. ಭಾರತ – ಪಾಕಿಸ್ತಾನ ಕದನ ವಿರಾಮವನ್ನು ಘೋಷಿಸಿದ್ದ ಟ್ರಂಪ್, ತಾನೇ ಯುದ್ಧ ನಿಲ್ಲಿಸಿದ್ದು ಎಂದು ಹೇಳಿಕೊಂಡಿದ್ದು, ಭಾರತ ಇದನ್ನು ಅಲ್ಲಗಳೆದಿತ್ತು. ಏಪ್ರಿಲ್ 22 ರಂದು 26 ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂದೂರ್ ನಡೆದಿತ್ತು.

ನೋಡಿರಿ

