ಮಂಗಳವಾರ ಸಂಜೆ ಹೀಗೆ ಮಾಡಿದರೆ ನಿಮ್ಮ ಕಷ್ಟಗಳೆಲ್ಲಾ ಮಾಯ

ಮಂಗಳವಾರ ಸಂಜೆ ಹೀಗೆ ಮಾಡಿದರೆ ನಿಮ್ಮ ಕಷ್ಟಗಳೆಲ್ಲಾ ಮಾಯ

ಮಂಗಳವಾರದ ದಿನದಂದು ಸಂಜೆ ನಾವು ಈ ಕೆಲಸಗಳನ್ನು ಮಾಡುವುದರಿಂದ ಮತ್ತು ಈ ಸ್ತೋತ್ರ, ಮಂತ್ರಗಳನ್ನು ಪಠಿಸುವುದರಿಂದ ಶನಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುವುದರ ಜೊತೆಗೆ ಜೀವನದ ಅಡೆತಡೆಗಳು, ಕಷ್ಟಗಳು ಕೂಡ ದೂರಾಗುವುದು. ಮಂಗಳವಾರದ ದಿನದಂದು ಸಂಜೆ ನಾವು ಏನನ್ನು ಮಾಡುವುದರಿಂದ ಶನಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುವುದು.? ಜೀವನದ ಕಷ್ಟಗಳು, ಸಮಸ್ಯೆಗಳು ದೂರಾಗುವುದು.?

ಪ್ರತಿ ಮಂಗಳವಾರದ ದಿನದಂದು ಆಂಜನೇಯ ಸ್ವಾಮಿಯನ್ನು ಪೂಜಿಸುವುದರ ಬಗ್ಗೆ ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಮಂಗಳವಾರದ ದಿನದಂದು ಆಂಜನೇಯ ಸ್ವಾಮಿಯನ್ನು ನಾವು ಪೂಜಿಸುವುದರಿಂದ ಆಂಜನೇಯ ಸ್ವಾಮಿಯ ಅನುಗ್ರಹವನ್ನು ಮಾತ್ರವಲ್ಲ, ಶನಿ ದೇವನ ಆಶೀರ್ವಾದವೂ ದೊರೆಯುತ್ತದೆ. ಹಾಗೂ ಮಂಗಳವಾರದ ದಿನದಂದು ಸಂಜೆ ಸಮಯದಲ್ಲಿ ನಾವು ಇವುಗಳನ್ನು ಮಾಡುವುದರಿಂದಲೂ ಶನಿ ದೋಷ ಹಾಗೂ ಶನಿ ದೇವನು ನಮಗೆ ನೀಡುವಂತಹ ಸಮಸ್ಯೆಗಳಿಂದಲೂ ಪರಿಹಾರ ದೊರೆಯುವುದು. ಮಂಗಳವಾರದ ದಿನದಂದು ಸಂಜೆ ನಾವು ಯಾವ ಕೆಲಸಗಳನ್ನು ಮಾಡಿದರೆ ಶನಿ ಸಮಸ್ಯೆಗಳು ಪರಿಹಾರವಾಗುವುದು.? ಮಂಗಳವಾರ ದಿನದಂದು ಸಂಜೆ ನೀವು ಇವುಗಳನ್ನು ಮಾಡಿ.
 
ಮಂಗಳವಾರದ ದಿನದಂದು ಶನಿ ಮಂತ್ರವನ್ನು ಪಠಿಸುವುದು ನಿಮಗೆ ಅದ್ಭುತವಾದ ಪ್ರಯೋಜನವನ್ನು ನೀಡುತ್ತದೆ. ಮಂಗಳವಾರದ ದಿನದಂದು ಸಂಜೆ ಸಂಪೂರ್ಣವಾಗಿ ಶುದ್ಧರಾಗಿ ಒಂದು ಶಾಂತವಾದ ಸ್ಥಳದಲ್ಲಿ ಕುಳಿತು ಸಂಪೂರ್ಣ ಏಕಾಗ್ರತೆಯಿಂದ ಈ ಎರಡು ಶನಿ ಮಂತ್ರಗಳಲ್ಲಿ ಯಾವುದಾದರೊಂದು ಶನಿ ಮಂತ್ರವನ್ನು 108ಬಾರಿ ಪಠಿಸಬೇಕು.
– ಓಂ ಶಂ ಶನೈಶ್ಚರಾಯ ನಮಃ – ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ
ಈ ಶನಿ ಮಂತ್ರವನ್ನು ನೀವು ಸರಿಯಾದ ವಿಧಿ – ವಿಧಾನಗಳ ಪ್ರಕಾರ ಪಠಿಸಬೇಕು. ಈ ಮಂತ್ರವನ್ನು ಪಠಿಸುವಾಗ ನೀವು ಕಪ್ಪು ಬಣ್ಣದ ಆಸನದ ಮೇಲೆ ಕುಳಿತು ಮಂತ್ರವನ್ನು ಪಠಿಸಬೇಕು. ಆಂಜನೇಯ ಸ್ವಾಮಿಯ ಅಥವಾ ಶನಿ ದೇವನ ಫೋಟೋ ಅಥವಾ ವಿಗ್ರಹವನ್ನು ಇಟ್ಟು ಅದರ ಮುಂದೆ ದೀಪವನ್ನು ಹಚ್ಚಿಟ್ಟು ನಂತರ ಈ ಶನಿ ಮಂತ್ರಗಳನ್ನು ಪಠಿಸಬೇಕು. ಇದರಿಂದಾಗಿ ಶನಿಯ ಕೆಟ್ಟ ದೃಷ್ಟಿಯು ಕಡಿಮೆಯಾಗುತ್ತದೆ. ನಿಮ್ಮ ಜೀವನವು ಸ್ಥಿರತೆ ಮತ್ತು ಪ್ರಗತಿಯಿಂದ ಕೂಡಿರುವಂತೆ ಈ ಮಂತ್ರ ಮಾಡುವುದು
tuesday-evening-do-these-works-with-chanting-this-mantra-it-will-help-you-to-get-shani-grace-and-remove-problems-from-your-life
ಮಂಗಳವಾರದ ದಿನದಂದು ಸಂಜೆ ಸಮಯದಲ್ಲಿ ನೀವು ಕಪ್ಪು ಬಣ್ಣದ ಹಸು ಅಥವಾ ಕಪ್ಪು ಬಣ್ಣದ ನಾಯಿಗೆ ತಿನ್ನಲು ರೊಟ್ಟಿಯನ್ನು ನೀಡಬೇಕು. ಒಂದು ವೇಳೆ ನೀವು ಕಪ್ಪು ಬಣ್ಣದ ಹಸುವಿಗೆ ರೊಟ್ಟಿಯನ್ನು ನೀಡುತ್ತಿದ್ದರೆ, ರೊಟ್ಟಿಯೊಂದಿಗೆ ಬೆಲ್ಲವನ್ನಿಟ್ಟು ನೀಡಬೇಕು. ಅದೇ ಕಪ್ಪು ಬಣ್ಣದ ನಾಯಿಗೆ ರೊಟ್ಟಿಯನ್ನು ನೀಡುತ್ತಿದ್ದರೆ ಅದಕ್ಕೆ ಎಣ್ಣೆಯನ್ನು ಹಚ್ಚಿ ನೀಡಬೇಕು. ಯಾಕೆಂದರೆ, ಶನಿಯು ಕಪ್ಪು ಬಣ್ಣದ ಪ್ರಾಣಿಗಳನ್ನು ಇಷ್ಟಪಡುತ್ತಾನೆ. ಅವುಗಳನ್ನು ನಾವು ಪೋಷಣೆ ಮಾಡುವುದರಿಂದ ಶನಿಯು ನಮ್ಮನ್ನು ಎಲ್ಲಾ ರೀತಿಯ ದುಃಖ, ಕಷ್ಟಗಳಿಂದ ರಕ್ಷಿಸುತ್ತಾನೆ ಎನ್ನುವ ನಂಬಿಕೆಯಿದೆ.

Kishor KV