ಕಾಂಗ್ರೆಸ್ಗೆ ಮುಳ್ಳಾಗುತ್ತಾ RSS? ಸರ್ಕಾರಿ ಸ್ಥಳಗಳಲ್ಲಿ ಬೈಠಕ್ ಬ್ಯಾನ್!
ಕೈ ನಿರ್ಧಾರ BJPಗೆ ಪ್ಲಸ್?

ಆರ್ಎಸ್ಎಸ್.. ಬರೋಬ್ಬರಿ ನೂರು ವರ್ಷಗಳ ಹಿಂದೆ ಹುಟ್ಟಿಕೊಂಡ ಭಾರತದ ಹಾಗೂ ವಿಶ್ವದ ಅತೀ ದೊಡ್ಡ ಸ್ವಯಂಸೇವಕ ಸಂಘಟನೆ.. ನೂರರ ಸಂಭ್ರಮದಲ್ಲಿರೋ ಈ ಸಂಘಟನೆ ದೇಶದಲ್ಲಿ ಪಥಸಂಚನ ನಡೆಸುತ್ತಿದೆ. ಈ ನಡುವೆ ರಾಜ್ಯದಲ್ಲಿ ಈ ಸಂಘಟನೆಗೆ ವಿಘ್ನ ಎದುರಾಗಿದೆ. ಕಾಂಗ್ರೆಸ್ ಸರ್ಕಾರದ ಕಟ್ಟಾಳುಗಳು.. ಆರ್ಎಸ್ಎಸ್ ವಿರುದ್ಧ ಹರಿಹಾಯುತ್ತಿದ್ದಾರೆ.. ಅದ್ರಲ್ಲೂ ಪ್ರಿಯಂಕಾ ಖರ್ಗೆ ಆರ್ಎಸ್ಎಸ್ಗೆ ಅಂಕುಶ ಹಾಕಬೇಕು ಅಂತ ಬರೆದಿರೋ ಪತ್ರ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲಿ ಸಂಚನವನ್ನ ಹುಟ್ಟುಹಾಕಿದೆ.
ಸರ್ಕಾರಿ ಮತ್ತು ಅನುದಾನಿತ ಶಾಲಾ ಆವರಣಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಚಟುವಟಿಕೆಗಳು ಹಾಗೂ ಶಾಖೆ ನಡೆಸಲು ಅನುಮತಿ ನಿರಾಕರಿಸುವಂತೆ ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ. ಈ ಮನವಿಯನ್ನು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.
ಪ್ರಿಯಾಂಕಾ ಖರ್ಗೆ ಏನ್ ಹೇಳಿದ್ದಾರೆ ಅಂದ್ರೆ ಪೊಲೀಸ್ ಅನುಮತಿ ಪಡೆಯದೆ ದೊಣ್ಣೆಗಳನ್ನು ಹಿಡಿದು ಆಕ್ರಮಣಕಾರಿ ಪ್ರದರ್ಶನ ನಡೆಸುವ ಮೂಲಕ ಮುಗ್ಧ ಮಕ್ಕಳು ಹಾಗೂ ಯುವಜನರ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಾಗುತ್ತಿದೆ. ನಾಡಿನ ಮಕ್ಕಳು, ಯುವ ಸಮುದಾಯ, ಸಾರ್ವಜನಿಕರು ಮತ್ತು ಸಮಾಜದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರದ ಅನುದಾನಿತ ಶಾಲೆಗಳು ಮತ್ತು ಮೈದಾನಗಳು, ಉದ್ಯಾನವನಗಳು, ಮುಜರಾಯಿ ಇಲಾಖೆಯ ದೇವಸ್ಥಾನಗಳು, ಪುರಾತತ್ವ ಇಲಾಖೆಯ ಸ್ಥಳಗಳು ಸೇರಿದಂತೆ ಯಾವುದೇ ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಸಂಘಟನೆಯು ಶಾಖೆ, ಸಭೆ ಅಥವಾ ಬೈಠಕ್ ಹೆಸರಲ್ಲಿ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಅಂತ ಹೇಳಿದ್ದಾರೆ.
ಇದನ್ನೂ ಓದಿ: ಈ ವಾರ ಬಿಗ್ಬಾಸ್ ಎಲಿಮಿನೇಷನ್ ಯಾಕಿಲ್ಲಾ ಗೊತ್ತಾ? – ಮುಂದಿನ ವಾರವೇ ಮೊದಲ ಫಿನಾಲೆ
ಆರ್ಎಸ್ಎಶ್ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ರಾಜಕೀಯ ಕಿತ್ತಾಟ ಜೋರಾಗಿದೆ. ಈ ಹಿಂದೆ 2-3 ಸಲ ಕೂಡ ಪ್ರಿಯಾಂಕ ಖರ್ಗೆ ಆರ್ಎಸ್ಎಸ್ ಬ್ಯಾನ್ ಮಾಡೋ ವಿಚಾರವಾಗಿ ಮಾತನಾಡಿದ್ರು. ಈ ಬಗ್ಗೆ ಮತ್ತೆ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಇಲ್ಲಿ ಪ್ರಿಯಾಂಕ ಖರ್ಗೆ ಕಾಂಗ್ರೆಸ್ ಎಐಸಿಸಿ ಅಧ್ಯಕ್ಷರ ಮಗ.. ಹೀಗಾಗಿ ಇವರು ಬರೆದಿರೋ ಪತ್ರ ಈಗ ಸದ್ದು ಮಾಡ್ತಿದೆ.. ಅಲ್ಲದೇ ಇವರ ಪತ್ರವನ್ನ ಸಿದ್ದರಾಮಯ್ಯ ಹೇಗೆ ಪರಿಗಣಿಸುತ್ತಾರೆ ಅನ್ನೋ ಕುತೂಹಲ ಕೂಡ ಮನೆ ಮಾಡಿದೆ. ಬಿಜೆಪಿ ನಾಯಕರು ಸೇರಿದಂತೆ ಹಲವರು ಪ್ರಿಯಾಂಕ್ ಖರ್ಗೆ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಆದರೆ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಈ ಕಚ್ಚಾಟ ಜೋರಾಗಿದೆ.
ಕಾಂಗ್ರೆಸ್ಗೆ ಯಾವತ್ತು ಆರ್ಎಸ್ಎಸ್ ವೋಟ್ ಬಿಳಲ್ಲ.. ಹಾಗೇ ಪಕ್ಕಾ ಹಿಂದೂಗಳ ವೋಟ್ ಕೂಡ ಬೀಳಲ್ಲ.. ಹೀಗಾಗಿ ಕಾಂಗ್ರೆಸ್ ಆರ್ಎಸ್ಎಸ್ ಬ್ಯಾನ್ ವಿಚಾರವನ್ನ ಹೇಳುತ್ತಿದ್ದಾರೆ. ಬಟ್ ಇದು ಎಲ್ಲೋ ಒಂದ್ಕಡೆ ಕಾಂಗ್ರೆಸ್ಗೆ ಎಫೆಕ್ಟ್ ಆಗೋದು ಪಕ್ಕಾ.. ಯಾಕಂದ್ರೆ ಈಗಾಗಲೇ ಹಿಂದೂ ವಿರೋಧಿ ಪಟ್ಟ ಕಟ್ಟಿಕೊಂಡಿರೋ ಕಾಂಗ್ರೆಸ್ ಮೇಲೆ ದಾಳಿ ಮಾಡೋಕೆ ಬಿಜೆಪಿಗೆ ಅಸ್ತ್ರ ಸಿಕ್ಕಂತೆ ಆಗಿದೆ. ಮುಂದಿನ ಎಲೆಕ್ಷನ್ಗಳಿಗೆ ಇದ್ದನ್ನೇ ದಾಳವಾಗಿ ಬಳಸಿಕೊಂಡು ಹಿಂದೂಗಳ ವೋಟ್ ಕಾಂಗ್ರೆಸ್ಗೆ ಬೀಳದಂತೆ ಮಾಡುತ್ತೆ.. ಅಲ್ಲದೇ ಎಲ್ಲಾ ಹಿಂದೂಗಳ ಮನೆ ಮನೆಗೆ ಹೋಗಿ ಆರ್ಎಸ್ಎಸ್ ಸಾಧನೆ ಬಗ್ಗೆ ತಿಳಿಸಿ, ಕಾಂಗ್ರೆಸ್ ಹೇಗೆ ಷಡ್ಯಂತರ ಮಾಡುತ್ತೆ ಅನ್ನೋದ್ದನ್ನ ತಿಳಿಸಿಕೊಡಲಿದೆ. ಇದು ಮುಂದೆ ಎಲ್ಲಿ ಹೋಗಿ ನಿಲ್ಲುತ್ತೆ ಕಾದು ನೋಡಬೇಕಿದೆ.

ನೋಡಿರಿ

