ಈ ವಾರ ಬಿಗ್‌ಬಾಸ್ ಎಲಿಮಿನೇಷನ್ ಯಾಕಿಲ್ಲಾ ಗೊತ್ತಾ? – ಮುಂದಿನ ವಾರವೇ ಮೊದಲ ಫಿನಾಲೆ

ಈ ವಾರ ಬಿಗ್‌ಬಾಸ್ ಎಲಿಮಿನೇಷನ್ ಯಾಕಿಲ್ಲಾ ಗೊತ್ತಾ? – ಮುಂದಿನ ವಾರವೇ ಮೊದಲ ಫಿನಾಲೆ

ಬಿಗ್ ಬಾಸ್ ಕನ್ನಡ ಸೀಸನ್ 12 ಶೋನ ಮೊದಲ ಫಿನಾಲೆ ಬಂದೇ ಬಿಟ್ಟಿದೆ. ಮುಂದಿನ ವಾರವೇ ಮೊದಲ ಫಿನಾಲೆ ನಡೆಯಲಿದೆ. ಈ ವೇಳೆ ಮಾಸ್ ಎಲಿಮಿನೇಷನ್ ನಡೆಯುತ್ತದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಇದನ್ನೂ ಓದಿ: ಗಿಲ್ಲಿಗೆ ಕಾವ್ಯ ಮೇಲೆ ಲವ್?‌ – ಕಿಚ್ಚನ ಮುಂದೆಯೇ ಗುಟ್ಟು ರಿವೀಲ್‌ ಮಾಡಿದ  ಗಿಲ್ಲಿನಟ!  

ಬಿಗ್‌ಬಾಸ್ ಮನೆಯಿಂದ ಹೊರಗೆ ಯಾರು ಹೋಗುತ್ತಾರೆ, ಯಾರು ಉಳಿಯುತ್ತಾರೆ ಎಂಬುದು 3ನೇ ವಾರ ತಿಳಿಯಲಿದೆ. ಮೊದಲ ವಾರದ ಎಲಿಮಿನೇಷನ್​​ನಲ್ಲಿ ಬಾಡಿ ಬಿಲ್ಡರ್ ಕರಿಬಸಪ್ಪ ಮತ್ತು ಆರ್​ಜೆ ಅಮಿತ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದರು. ಆದರೆ 2ನೇ ವಾರ ದೊಡ್ಡ ಟ್ವಿಸ್ಟ್ ಎದುರಾಗಿದೆ. ಯಾರೂ ಕೂಡ ಈ ವಾರ ಎಲಿಮಿನೇಟ್ ಆಗುವುದಿಲ್ಲ ಎಂಬುದನ್ನು ಸಂಚಿಕೆಯ ಕೊನೆಯಲ್ಲಿ ಕಿಚ್ಚ ಸುದೀಪ್ ಅವರು ತಿಳಿಸಿದರು. ಅಲ್ಲದೇ, ಮೊದಲ ಫಿನಾಲೆಯಲ್ಲಿ ಸ್ಪರ್ಧಿಸಲು ಮಾಳು ನಿಪನಾಳ ಮತ್ತು ಸ್ಪಂದನಾ ಅವರು ಅರ್ಹತೆ ಪಡೆದಿದ್ದಾರೆ ಎಂಬುದನ್ನು ಕಿಚ್ಚ ಸುದೀಪ್ ಘೋಷಿಸಿದರು.

ಈ ವಾರ ಅಶ್ವಿನಿ ಎಸ್​ಎನ್​, ಅಭಿಷೇಕ್, ಜಾಹ್ನವಿ, ಸ್ಪಂದನಾ, ಮಾಳು ನಿಪನಾಳ, ರಾಶಿಕಾ ಶೆಟ್ಟಿ, ಮಂಜು ಭಾಷಿಣಿ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಧನುಶ್ ಅವರು ನಾಮಿನೇಟ್ ಆಗಿದ್ದರು. ಇವರಲ್ಲಿ ಒಬ್ಬರು ಅಥವಾ ಇಬ್ಬರು ಎಲಿಮಿನೇಟ್ ಆಗುತ್ತಾರೆ ಎಂದು ಮೊದಲು ಹೇಳಲಾಗಿತ್ತು. ಒಬ್ಬೊಬ್ಬರನ್ನಾಗಿಯೇ ಕಿಚ್ಚ ಸುದೀಪ್ ಅವರು ಸೇವ್ ಮಾಡುತ್ತಾ ಬಂದರು. ಅಂತಿಮ ಹಂತದಲ್ಲಿ ಮಾಳು ನಿಪನಾಳ ಮತ್ತು ಸ್ಪಂದನಾ ಅವರು ಉಳಿದುಕೊಂಡರು. ಅವರೇ ಎಲಿಮಿನೇಟ್ ಆಗುವುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಕೊನೆಯಲ್ಲಿ ಸುದೀಪ್ ಅವರು ಟ್ವಿಸ್ಟ್ ನೀಡಿದರು. ಅಸಲಿಗೆ, ಮಾಳು ನಿಪನಾಳ ಹಾಗೂ ಸ್ಪಂದನಾ ಎಲಿಮಿನೇಟ್ ಆಗುತ್ತಿಲ್ಲ. ಬದಲಿಗೆ, ಮೊದಲ ಫಿನಾಲೆಯ ಫೈನಲಿಸ್ಟ್ ಆಗಿದ್ದಾರೆ ಎಂದು ಸುದೀಪ್ ತಿಳಿಸಿದರು. ಈ ವಾರ ವೋಟಿಂಗ್ ಆಗಿರುವುದು ನಿಜ. ನಾಮಿನೇಷನ್​​ನಗೆ ವೋಟಿಂಗ್ ನಡೆದಿದೆ ಎಂದು ಸ್ಪರ್ಧಿಗಳು ಭಾವಿಸಿದ್ದರು. ಆದರೆ ಅಸಲಿಗೆ ಆಗಿದ್ದೇ ಬೇರೆ. ಶೋನಲ್ಲಿ ಯಾರನ್ನು ಉಳಿಸಿಕೊಳ್ಳಬೇಕು ಎಂಬುದಕ್ಕೆ ಓಟಿಂಗ್ ನಡೆದಿತ್ತು. ಹೆಚ್ಚು ವೋಟ್ ಪಡೆದ ಮಾಳು ನಿಪನಾಳ ಮತ್ತು ಸ್ಪಂದನಾ ಅವರು ಫೈನಲಿಸ್ಟ್ ಆಗಿದ್ದಾರೆ.

Sulekha