23 ವರ್ಷಗಳ ನಂತರ ಶತಕದ ಖುಷಿಯಲ್ಲಿ ವೆಸ್ಟ್ ಇಂಡೀಸ್ – ಭಾರತದ ಲೆಕ್ಕಾಚಾರ ಕೈ ಕೊಡ್ತಾ?

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ದೆಹಲಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಯೋಜನೆ ಕೈ ಕೊಟ್ಟಂತೆ ಕಾಣುತ್ತಿದೆ. ಯಾಕೆಂದರೆ, ಫಾಲೋ ಆನ್ ಹೊತ್ತು ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ವೆಸ್ಟ್ ಇಂಡೀಸ್ ತಂಡ ಈ ಸರಣಿಯಲ್ಲಿ ಮೊದಲ ಬಾರಿಗೆ ಭಾರತಕ್ಕೆ ಪ್ರತಿರೋಧ ತೋರುವ ರೀತಿ ಬ್ಯಾಟ್ ಬೀಸುತ್ತಿದೆ. ಅದರಲ್ಲೂ ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಕಣಕ್ಕಿಳಿದ ಜಾನ್ ಕ್ಯಾಂಪ್ಬೆಲ್ 115 ರನ್ ಬಾರಿಸಿ ಮಿಂಚಿದ್ದಾರೆ.
ಇದನ್ನೂ ಓದಿ: IPL ಮಿನಿ ಹರಾಜಿಗೆ ಡೇಟ್ ಫಿಕ್ಸ್ – RCBಯಿಂದ ಯಾರಿಗೆ ಗೇಟ್ ಪಾಸ್?
ಬರೋಬ್ಬರಿ 23 ವರ್ಷಗಳ ಬಳಿಕ ವೆಸ್ಟ್ ಇಂಡೀಸ್ ತಂಡದ ಆರಂಭಿಕ ಬ್ಯಾಟರ್ರೊಬ್ಬರು ಭಾರತದಲ್ಲಿ ಟೆಸ್ಟ್ ಶತಕ ಸಿಡಿಸಿದ್ದಾರೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಕಣಕ್ಕಿಳಿದ ಜಾನ್ ಕ್ಯಾಂಪ್ಬೆಲ್ 115 ರನ್ ಬಾರಿಸಿ ಮಿಂಚಿದ್ದಾರೆ. ಇದರೊಂದಿಗೆ ವಿಂಡೀಸ್ ಪಡೆಯ ಶತಕದ ಬರ ನೀಗಿದೆ. ಅಂದರೆ ಕಳೆದ 23 ವರ್ಷಗಳಿಂದ ವೆಸ್ಟ್ ಇಂಡೀಸ್ ತಂಡದ ಯಾವುದೇ ಬ್ಯಾಟರ್ ಭಾರತದ ಪಿಚ್ನಲ್ಲಿ ಟೆಸ್ಟ್ ಶತಕ ಬಾರಿಸಿರಲಿಲ್ಲ. 2002 ರಲ್ಲಿ ನಡೆದ ಈಡನ್ ಗಾರ್ಡನ್ಸ್ ಟೆಸ್ಟ್ ಪಂದ್ಯದಲ್ಲಿ ವಾವೆಲ್ಸ್ ಹಿಂಡ್ಸ್ 100 ರನ್ಗಳಿಸಿದ್ದೇ ಕೊನೆ. ಇದಾದ ಬಳಿಕ ವಿಂಡೀಸ್ ತಂಡದ ಯಾವುದೇ ಒಪನರ್ ಬ್ಯಾಟರ್ ಭಾರತೀಯ ಪಿಚ್ನಲ್ಲಿ ಮೂರಂಕಿ ಮೊತ್ತ ಗಳಿಸಿರಲಿಲ್ಲ. ಇದೀಗ ಬರೋಬ್ಬರಿ 23 ವರ್ಷಗಳ ಬಳಿಕ ವೆಸ್ಟ್ ಇಂಡೀಸ್ ಆರಂಭಿಕ ದಾಂಡಿಗ ಜಾನ್ ಕ್ಯಾಂಪ್ಬೆಲ್ ಶತಕ ಸಿಡಿಸಿದ್ದಾರೆ.

ನೋಡಿರಿ

