ಗಿಲ್ಲಿಗೆ ಕಾವ್ಯ ಮೇಲೆ ಲವ್? – ಕಿಚ್ಚನ ಮುಂದೆಯೇ ಗುಟ್ಟು ರಿವೀಲ್ ಮಾಡಿದ ಗಿಲ್ಲಿನಟ!

ಬಿಗ್ ಬಾಸ್ ಕನ್ನಡ ಸೀಸನ್ 12 ಭಾರಿ ಕುತೂಹಲ ಮೂಡಿಸಿದೆ. ಒಂಟಿ, ಜಂಟಿಗಳ ಪೈಕಿ ಗಿಲ್ಲಿನಟ, ಕಾವ್ಯ ಸಖತ್ ಹೈಲೈಟ್ ಆಗಿದ್ದಾರೆ. ಈ ಜೋಡಿಯನ್ನ ವೀಕ್ಷಕರು ತುಂಬಾ ಇಷ್ಟಪಟ್ಟಿದ್ದಾರೆ. ಮೊನ್ನೆಯಷ್ಟೇ ಈ ಜೋಡಿ ಮೂರು ಮುತ್ತುಗಳ ಮೂಲಕ ವೀಕ್ಷಕರ ಗಮನ ಸೆಳೆದಿದ್ರು. ಇದೀಗ ಗಿಲ್ಲಿಗೆ ಕಾವ್ಯ ಮೇಲೆ ಪ್ರೀತಿ ಶುರುವಾಯ್ತಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಗಿಲ್ಲಿ ಗುಟ್ಟು ಕಿಚ್ಚನ ಮುಂದೆಯೇ ರಟ್ಟಾಗಿದೆ.
ಇದನ್ನೂ ಓದಿ: ಬಿಹಾರ ಚುನಾವಣೆಗೆ NDA ಮೈತ್ರಿಕೂಟದ ಸೀಟುಗಳ ಹಂಚಿಕೆ ಪ್ರಕಟ! – ಯಾವ ಪಕ್ಷಕ್ಕೆ ಎಷ್ಟು ಸೀಟ್?
ಗಿಲ್ಲಿ ಹಾಗೂ ಕಾವ್ಯಾ ಶೈವ ಜೋಡಿಯ ವೀಕ್ಷಕರ ಮನಗೆದ್ದಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಟ್ರೆಂಡ್ ಸೆಟ್ ಮಾಡಿದೆ. ಮೊನ್ನೆಯಷ್ಟೇ ಗಿಲ್ಲಿ ಕೊಟ್ಟ ಒಂದು ಮುತ್ತಿಗೆ ಕಾವ್ಯಾ ಮೂರು ಫ್ಲೈಯಿಂಗ್ ಕಿಸ್ ಕೊಟ್ಟಿದ್ರು. ಇಬ್ಬರ ಕ್ಯೂಟ್ ರಿಯಾಕ್ಷನ್ ಸಖತ್ ವೈರಲ್ ಆಗಿತ್ತು. ನಿನ್ನೆಯ ಎಪಿಸೋಡ್ನಲ್ಲೂ ಗಿಲ್ಲಿ ಹೃದಯದ ಗುಟ್ಟು ರಟ್ಟಾಗಿದೆ. ಕರೆಂಟ್ ಲವ್ವರ್ ಕಾವ್ಯ ಅನ್ನೋ ಕ್ಲೂ ಬಿಟ್ಟುಕೊಟ್ಟಿದ್ದಾರೆ.
SUPER SUNDAY WITH ಬಾದ್ಷಾ ಸುದೀಪ್ ಸಂಚಿಕೆಯಲ್ಲಿ ಜಂಟಿಯಾಗಿ ಪ್ರವೇಶ ಮಾಡಿರುವ ಸ್ಪರ್ಧಿಗಳು ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿದುಕೊಳ್ಳಲು ಗೇಮ್ ಆಡಿಸಿದರು. ಆಗ ಇಬ್ಬರನ್ನ ದೂರ ದೂರ ನಿಲ್ಲಿಸಿ ಪ್ರಶ್ನೆಗಳನ್ನು ಕಿಚ್ಚ ಕೇಳಿದರು. ಈ ವೇಳೆ ಸುದೀಪ್ ಕೇಳಿದ ಕೆಲವು ಪ್ರಶ್ನೆಗಳಿಗೆ ಇಬ್ಬರೂ ಒಂದೇ ರೀತಿಯ ಅನ್ಸರ್ ನೀಡಿದರು. ಆದರೆ ಕೊನೆಯಲ್ಲಿ ಗಿಲ್ಲಿಗೆ ಕರೆಂಟ್ ಗರ್ಲ್ ಫ್ರೆಂಡ್ ಯಾರು..? ಎಂದು ಸುದೀಪ್ ಪ್ರಶ್ನೆ ಮಾಡ್ತಾರೆ.ಅದಕ್ಕೆ ಕಾವ್ಯ, ‘ಯಾರೂ ಇಲ್ಲ ಎಂದು ಬರೆದು ತೋರಿಸುತ್ತಾರೆ. ಆದರೆ ಗಿಲ್ಲಿ, ಕಾವ್ಯ ಹೆಸರು ಬರೆದು ಕೊಂಚ ಸಮಯ ಯೋಚಿಸಿದ್ದಾರೆ. ನಂತರ ಅವರ ಹೆಸರನ್ನು ಅಳಿಸಿ, ಪ್ರೊಸೆಸ್ಸಿಂಗ್ ಎಂದು ಬರೆದಿದ್ದಾರೆ. ಅದು ಕಿಚ್ಚನ ಎದುರು ರಿವೀಲ್ ಆಗುತ್ತಿದ್ದಂತೆಯೇ ಕಾವ್ಯ, ಗಿಲ್ಲಿಯನ್ನು ದಿಟ್ಟಿಸಿ ನೋಡಿದ್ದಾರೆ. ಗಿಲ್ಲಿ ಕೊಟ್ಟ ಉತ್ತರ ಎಲ್ಲರಿಗೂ ಶಾಕ್ ಆಗಿದೆ. ಕಾವ್ಯ ಕೂಡ ಶಾಕ್ ಆಗಿರುವ ರೀತಿಯಲ್ಲಿ ಗುರಾಯಿಸಿದ್ದು, ವೀಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.
ಅನಿರೀಕ್ಷಿತ ಟ್ವಿಸ್ಟ್ .. ಈ ವಾರ ಎಲಿಮಿನೇಷನ್ ಇಲ್ಲ!
ಇನ್ನು ಪ್ರತಿ ಭಾನುವಾರ ಬಂದರೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಢವ ಢವ ಶುರುವಾಗುತ್ತಿದೆ. ನಾಮಿನೇಟ್ ಆದ ಸ್ಪರ್ಧಿಗಳ ಪೈಕಿ ಯಾರು ದೊಡ್ಮನೆಯಿಂದ ಹೊರಗೆ ಹೋಗುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಗುವ ದಿನ ಇದು. ಮೊದಲ ವಾರದ ಎಲಿಮಿನೇಷನ್ನಲ್ಲಿ ಬಾಡಿ ಬಿಲ್ಡರ್ ಕರಿಬಸಪ್ಪ ಮತ್ತು ಆರ್ಜೆ ಅಮಿತ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದರು. ಆದರೆ 2ನೇ ವಾರ ದೊಡ್ಡ ಟ್ವಿಸ್ಟ್ ಎದುರಾಯಿತು. ಯಾರೂ ಕೂಡ ಈ ವಾರ ಎಲಿಮಿನೇಟ್ ಆಗುವುದಿಲ್ಲ ಎಂಬುದನ್ನು ಸಂಚಿಕೆಯ ಕೊನೆಯಲ್ಲಿ ಕಿಚ್ಚ ಸುದೀಪ್ ತಿಳಿಸಿದರು. ಅಲ್ಲದೇ, ಮೊದಲ ಫಿನಾಲೆಯಲ್ಲಿ ಸ್ಪರ್ಧಿಸಲು ಮಾಳು ನಿಪನಾಳ ಮತ್ತು ಸ್ಪಂದನಾ ಅವರು ಅರ್ಹತೆ ಪಡೆದಿದ್ದಾರೆ.

ನೋಡಿರಿ

