ಬಿಹಾರ ಚುನಾವಣೆಗೆ NDA ಮೈತ್ರಿಕೂಟದ ಸೀಟುಗಳ ಹಂಚಿಕೆ ಪ್ರಕಟ! – ಯಾವ ಪಕ್ಷಕ್ಕೆ ಎಷ್ಟು ಸೀಟ್?

ಬಿಹಾರ ಚುನಾವಣೆಗೆ NDA ಮೈತ್ರಿಕೂಟದ ಸೀಟುಗಳ ಹಂಚಿಕೆ ಪ್ರಕಟ! – ಯಾವ ಪಕ್ಷಕ್ಕೆ ಎಷ್ಟು ಸೀಟ್?

ಬಿಹಾರ ವಿಧಾನಸಭಾ ಚುನಾವಣೆಗೆ ಕೌಂಟ್‌ಡೌನ್‌ ಶುರುವಾಗಿದೆ. ಮೊದಲ ಹಂತದ ಮತದಾನ ನವೆಂಬರ್ 6 ರಂದು ಮತ್ತು ಎರಡನೇ ಹಂತದ ಮತದಾನ ನವೆಂಬರ್ 11 ರಂದು ನಡೆಯಲಿದೆ. ಮತ ಎಣಿಕೆ ನವೆಂಬರ್ 14 ರಂದು ನಡೆಯಲಿದೆ. ಇದೀಗ ಎನ್‌ಡಿಎ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಘೋಷಣೆ ಮಾಡಲಾಗಿದೆ. ಬಿಜೆಪಿ ಹಾಗೂ ಜೆಡಿಯು ತಲಾ 101 ಕ್ಷೇತ್ರಗಳಲ್ಲಿ ಸಮಾನವಾಗಿ ಸ್ಪರ್ಧಿಸಲಿವೆ.

ಇದನ್ನೂ ಓದಿ: ನನಗೂ ಸಿಎಂ ಆಗುವ ಬಯಕೆಯಿದೆ! – ಗೃಹ ಸಚಿವ ಜಿ ಪರಮೇಶ್ವರ್ ಶಾಕಿಂಗ್‌ ಹೇಳಿಕೆ!

ಬಿಜೆಪಿ ಚುನಾವಣಾ ಉಸ್ತುವಾರಿ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು NDA ಸೀಟು ಹಂಚಿಕೆ ಘೋಷಣೆ ಮಾಡಿದ್ದಾರೆ. ಒಟ್ಟು 243 ಕ್ಷೇತ್ರಗಳ ಪೈಕಿ 202 ಕ್ಷೇತ್ರಗಳು ಪ್ರಮುಖ 2 ಪಕ್ಷಗಳ ಪಾಲಾಗಿದೆ. ಬಿಜೆಪಿ ಮತ್ತು ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಉಳಿದ ಕ್ಷೇತ್ರಗಳನ್ನ ಎಲ್‌ಜೆಪಿ , ಹೆಚ್‌ಎಎಂ, ಆರ್‌ಎಲ್ಎಂಗೆ ಹಂಚಿಕೆ ಮಾಡಲಾಗಿದೆ.

ಯಾವ ಪಕ್ಷಕ್ಕೆ ಎಷ್ಟು ಸೀಟು?

  • ಜೆಡಿಯು (JDU) – 101
  • ಭಾರತೀಯ ಜನತಾ ಪಕ್ಷ (BJP) – 101
  • ಎಲ್‌ಜೆಪಿ (ಆರ್‌ವಿ) – 29
  • ರಾಷ್ಟ್ರೀಯ ಲೋಕ ಮೋರ್ಚಾ (RLM) – 6
  • ಹೆಚ್​ಎಎಮ್​(ಎಸ್) – 6

ಇನ್ನು ವಿರೋಧ ಪಕ್ಷಗಳ ಮೈತ್ರಿಕೂಟ ಮಹಾಘಟಬಂದನ್​​ ಅಥವಾ ಇಂಡಿಯಾ ಬ್ಲಾಕ್ (ಆರ್‌ಜಿಡಿ, ಕಾಂಗ್ರೆಸ್ ಮತ್ತು ಇತರ ಕೆಲವು ಪಕ್ಷಗಳು) ಇನ್ನು ತಮ್ಮ ಸೀಟು ಹಂಚಿಕೆ ಬಗ್ಗೆ ಪ್ರಕಟಿಸಿಲ್ಲ. ಈ ಬೆನ್ನಲ್ಲೇ ಬಿಹಾರ ಬಿಜೆಪಿ ಮಹಾಘಟಬಂದನ್​ ಕಾಲೆಳೆದಿದೆ. ಎನ್​ಡಿಎಯದ್ದು ಏಕಮತ, ಆದರೆ ಮಹಾಘಟಬಂದನ್​ದು ಭಿನ್ನಮತ ಎಂದು ವ್ಯಂಗ್ಯವಾಡಿದೆ ಎಂದು ಬಿಹಾರ ಬಿಜೆಪಿ ಹೇಳಿದೆ.

Shwetha M