IPL ಮಿನಿ ಹರಾಜಿಗೆ ಡೇಟ್ ಫಿಕ್ಸ್ – RCBಯಿಂದ ಯಾರಿಗೆ ಗೇಟ್ ಪಾಸ್?
10 ಟೀಂ.. ರಿಲೀಸ್ ಲಿಸ್ಟ್ ಹೇಗಿದೆ?

IPL ಮಿನಿ ಹರಾಜಿಗೆ ಡೇಟ್ ಫಿಕ್ಸ್ – RCBಯಿಂದ ಯಾರಿಗೆ ಗೇಟ್ ಪಾಸ್?10 ಟೀಂ.. ರಿಲೀಸ್ ಲಿಸ್ಟ್ ಹೇಗಿದೆ?

ಸಾಲು ಸಾಲು ಟೂರ್ನಿ, ಸರಣಿಗಳಲ್ಲಿ ಟೀಂ ಇಂಡಿಯಾ ಕಂಪ್ಲೀಟ್ ಬ್ಯುಸಿಯಾಗಿದೆ. ವೈಟ್ ಬಾಲ್ ಮತ್ತು ರೆಡ್ ಬಾಲ್ ಫಾರ್ಮೆಟ್​ನಲ್ಲೂ ಸಾಲಿಡ್ ಫಾರ್ಮ್​ನಲ್ಲಿದೆ. ಇದ್ರ ನಡುವೆ 2026ರ ಐಪಿಎಲ್​ಗೂ ಕೂಡ ಬಿಸಿಸಿಐ ಭರ್ಜರಿಯಾಗೇ ಸಿದ್ಧತೆ ಮಾಡಿಕೊಳ್ತಿದೆ. ಇದೀಗ ಮಿನಿ ಹರಾಜಿಗೆ ಡೇಟ್ ಕೂಡ ಫಿಕ್ಸ್ ಆಗಿದ್ದು ಫ್ರಾಂಚೈಸಿಗಳಿಗೆ ಡೆಡ್​ಲೈನ್ ನೀಡಲಾಗಿದೆ.

2026ರ ಐಪಿಎಲ್​ಗೆ ಇನ್ನು ಐದು ತಿಂಗಳಷ್ಟೇ ಬಾಕಿ ಇದ್ದು ಆಲ್ರೆಡಿ ಸಿದ್ಧತೆಗಳು ಶುರುವಾಗಿದೆ. 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​​ಗೆ ಈ ವರ್ಷದ ಡಿಸೆಂಬರ್‌ನಲ್ಲಿ ಮಿನಿ ಹರಾಜು ನಡೆಯಲಿದೆ. ಡಿಸೆಂಬರ್ ಎರಡನೇ ಅಥವಾ ಮೂರನೇ ವಾರದಲ್ಲಿ ಹರಾಜು ನಡೀಬಹುದು. ಬಟ್ ಪರ್ಟಿಕ್ಯುಲರ್ ಡೇಟ್ ಇನ್ನೂ ಫೈನಲ್ ಆಗಿಲ್ಲ. ಮೂಲಗಳ ಪ್ರಕಾರ ಡಿಸೆಂಬರ್ 13 ಮತ್ತು 15 ರ ನಡುವೆ ಆಕ್ಷನ್ ನಡೆಯುವಂಥ ಚಾನ್ಸಸ್ ಇದೆ.ಹೀಗಾಗಿ ಫ್ರಾಂಚೈಸಿಗಳಲ್ಲಿ ಈಗ ಯಾರನ್ನ ಉಳಿಸಿಕೊಳ್ಳೋದು ಯಾರನ್ನ ರಿಲೀಸ್ ಮಾಡೋದು ಅನ್ನೋ ತಲೆಬಿಸಿ ಶುರುಬಾಗಿದೆ. ಆಟಗಾರರನ್ನು ಉಳಿಸಿಕೊಳ್ಳಲು ಹಾಗೂ ತಂಡದಿಂದ ಕೈಬಿಡಲು ನವೆಂಬರ್ 15ರ ಡೆಡ್​ಲೈನ್ ನೀಡಲಾಗಿದೆ. ಎಲ್ಲಾ ಫ್ರಾಂಚೈಸಿಗಳು ಈ ದಿನಾಂಕದೊಳಗೆ ತಾವು ತಂಡದಲ್ಲಿ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಬೇಕು. ಅಷ್ಟಕ್ಕೂ ಹತ್ತೂ ಫ್ರಾಂಚೈಸಿಗಳೂ ಒಂದಷ್ಟು ಆಟಗಾರರನ್ನ ರಿಲೀಸ್ ಮಾಡೋದು ಪಕ್ಕಾ.

ಯಾರ್ಯಾರಿಗೆ ಗೇಟ್ ಪಾಸ್?

ಚೆನ್ನೈ ಸೂಪರ್ ಕಿಂಗ್ಸ್ : ರವಿಚಂದ್ರನ್ ಅಶ್ವಿನ್ (ನಿವೃತ್ತಿ) , ಡೆವೊನ್ ಕಾನ್ವೇ, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ವಿಜಯ್ ಶಂಕರ್, ಸ್ಯಾಮ್ ಕರನ್.

 

ದೆಹಲಿ ಕ್ಯಾಪಿಟಲ್ಸ್  : ಫಾಫ್ ಡು ಪ್ಲೆಸಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ದುಷ್ಮಂತ ಚಮೀರಾ, ಮೋಹಿತ್ ಶರ್ಮಾ, ಕರುಣ್ ನಾಯರ್, ಸಮೀರ್ ರಿಜ್ವಿ, ಡೊನೊವನ್ ಫೆರೇರಾ.

 

ಗುಜರಾತ್ ಟೈಟಾನ್ಸ್ : ಕರೀಂ ಜನತ್, ರಾಹುಲ್ ತೆವಾಟಿಯಾ, ಜೆರಾಲ್ಡ್ ಕೋಟ್ಜಿ, ಜಯಂತ್ ಯಾದವ್, ಕುಲ್ವಂತ್ ಖೆಜ್ರೋಲಿಯಾ, ಮಾನವ್ ಸುತಾರ್

 

ಕೋಲ್ಕತ್ತಾ ನೈಟ್ ರೈಡರ್ಸ್ : ವೆಂಕಟೇಶ್ ಅಯ್ಯರ್, ಕ್ವಿಂಟನ್ ಡಿ ಕಾಕ್, ಮೊಯೀನ್ ಅಲಿ, ಸ್ಪೆನ್ಸರ್ ಜಾನ್ಸನ್, ಅನ್ರಿಚ್ ನಾರ್ಟ್ಜೆ, ರೋವ್ಮನ್ ಪೊವೆಲ್

 

ಲಕ್ನೋ ಸೂಪರ್ ಜೈಂಟ್ಸ್ : ಡೇವಿಡ್ ಮಿಲ್ಲರ್, ಶಮರ್ ಜೋಸೆಫ್, ಅವೇಶ್ ಖಾನ್, ಮಣಿಮಾರನ್ ಸಿದ್ಧಾರ್ಥ್, ಯುವರಾಜ್ ಚೌಧರಿ

 

ಮುಂಬೈ ಇಂಡಿಯನ್ಸ್ : ವಿಲ್ ಜ್ಯಾಕ್ಸ್, ರೀಸ್ ಟೋಪ್ಲಿ, ಮುಜೀಬ್ ಉರ್ ರೆಹಮಾನ್, ಕರ್ಣ್ ಶರ್ಮಾ, ರಾಬಿನ್ ಮಿಂಜ್

 

ಪಂಜಾಬ್ ಕಿಂಗ್ಸ್  : ಗ್ಲೆನ್ ಮ್ಯಾಕ್ಸ್‌ ವೆಲ್, ಮಾರ್ಕಸ್ ಸ್ಟೊಯಿನಿಸ್, ಅಜ್ಮತುಲ್ಲಾ ಒಮರ್ಜೈ, ಆರನ್ ಹಾರ್ಡಿ, ಕ್ಸೇವಿಯರ್ ಬಾರ್ಟ್ಲೆಟ್, ಪ್ರವೀಣ್ ದುಬೆ

ರಾಜಸ್ಥಾನ ರಾಯಲ್ಸ್: ತುಷಾರ್ ದೇಶಪಾಂಡೆ, ಶುಭಂ ದುಬೆ, ವನಿಂದು ಹಸರಂಗ, ಸಂಜು ಸ್ಯಾಮ್ಸನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು :  ಲಿಯಾಮ್ ಲಿವಿಂಗ್‌ಸ್ಟೋನ್, ರಸಿಖ್ ಸಲಾಂ, ಸ್ವಪ್ನಿಲ್ ಸಿಂಗ್

ಸನ್‌ರೈಸರ್ಸ್ ಹೈದರಾಬಾದ್ : ಮೊಹಮ್ಮದ್ ಶಮಿ, ಅಭಿನವ್ ಮನೋಹರ್, ಆಡಮ್ ಝಂಪಾ, ಹರ್ಷಲ್ ಪಟೇಲ್

ಇವ್ರಿಷ್ಟು ಆಟಗಾರರು ರಿಲೀಸ್ ಲಿಸ್ಟ್​ನಲ್ಲಿದ್ದಾರೆ. ಹಾಗೆಂದ ಮಾತ್ರಕ್ಕೆ ಇವ್ರನ್ನ ಬಿಟ್ಟೇ ಬಿಡ್ತಾರೆ ಅನ್ನೋದನ್ನ ಹೇಳೋಕಾಗಲ್ಲ. ಅಂದ್ರೆ ಡೇಂಜರ್ ಝೋನ್​ನಲ್ಲಿ ಇದ್ದಾರೆ. 2025ರ ಐಪಿಎಲ್​ನಲ್ಲಿ ಆರ್​ಸಿಬಿ ಚಾಂಪಿಯನ್ ಪಟ್ಟಕ್ಕೇರಿತ್ತು. ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಬ್ಯಾಲೆನ್ಸ್ ಡ್ ಆಗಿತ್ತು. ಸೋ ಇಲ್ಲಿ ಹೆಚ್ಚಿನ ಬದಲಾವಣೆಗಳೇನು ಇರೋದಿಲ್ಲ. ಬಟ್ ಸಿಎಸ್​ಕೆ, ಆರ್​ಆರ್ ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷೆ ಮಾಡ್ಬೋದು. ಅದೂ ಅಲ್ದೇ ಕೆಕೆಆರ್, ಸಿಎಸ್​ಕೆ ತಂಡಗಳು ಕ್ಯಾಪ್ಟನ್ ಬದಲಾವಣೆ ಪ್ಲ್ಯಾನ್​ನಲ್ಲಿವೆ. ಸೋ ಯಾರನ್ನ ಚೂಸ್ ಮಾಡ್ತಾರೆ ಅನ್ನೋದು ಕೂಡ ಇಂಪಾರ್ಟೆಂಟ್ ಆಗುತ್ತೆ. ಈ ಸಲ ಮಿನಿ ಹರಾಜು ಆಗಿರೋದ್ರಿಂದ ದೊಡ್ಡ ದೊಡ್ಡ ಆಟಗಾರರು ಇಲ್ಲದೇ ಇದ್ರೂ ಒಂದಷ್ಟು ಮೇಜರ್ ಚೇಂಜಸ್ ಆಗೋದಂತೂ ಪಕ್ಕಾ.

 

Kishor KV