ಜೈಸ್ವಾಲ್, ಗಿಲ್ ಬ್ಯಾಟಿಂಗ್ ಪವರ್.. ಜಡ್ಡು ಬೌಲಿಂಗ್ ಖದರ್ – 2ನೇ ದಿನವೂ ವಿಂಡೀಸ್ ಪಡೆ ಶೇಕ್!

ಜೈಸ್ವಾಲ್, ಗಿಲ್ ಬ್ಯಾಟಿಂಗ್ ಪವರ್.. ಜಡ್ಡು ಬೌಲಿಂಗ್ ಖದರ್ – 2ನೇ ದಿನವೂ ವಿಂಡೀಸ್ ಪಡೆ ಶೇಕ್!

ವಿಂಡೀಸ್ ವಿರುದ್ಧ ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಮಾಡಿದ್ದ ಭಾರತ ಕಂಪ್ಲೀಟ್ ಮೇಲುಗೈ ಸಾಧಿಸಿತು. ಭಾರತದ ಪರ ಪ್ರತಿಯೊಬ್ಬ ಬ್ಯಾಟರ್ ಕೂಡ ಅದ್ಭುತ ಇನ್ನಿಂಗ್ಸ್ ಆಡಿದ್ರು. ಅದ್ರಲ್ಲೂ ಯಶಸ್ವಿ ಜೈಸ್ವಾಲ್ ಅವ್ರ 175 ರನ್ಸ್, ಶುಭ್​ಮನ್ ಗಿಲ್ ಅವ್ರ 129 ರನ್​ಗಳು ಭಾರತವನ್ನ ಬೃಹತ್ ಮೊತ್ತದತ್ತ ಕೊಂಡೊಯ್ದಿತ್ತು. ಭಾರತದ ಪರ ಮೊದಲ ವಿಕೆಟ್​ಗೆ 58 ರನ್ ಬಂದಿದ್ದು ಕೆಎಲ್ ರಾಹುಲ್ 38 ರನ್​ಗಳಿಗೆ ಔಟಾಗಿದ್ರು. ಇನ್ನು 87 ರನ್​ಗಳಿಸಿ ಸಾಯಿ ಸುದರ್ಶನ್ ಕೂಡ ವಿಕೆಟ್ ಒಪ್ಪಿಸಿದರು. ಆದ್ರೆ ಯಶಸ್ವಿ ಜೈಸ್ವಾಲ್ ಕ್ರೀಚ್ ಕಚ್ಚಿ ನಿಂತಿದ್ರು. ಮೊದಲ ದಿನದಾಟಕ್ಕೆ 173 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ರು. ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ 2 ವಿಕೆಟ್ ಕಳೆದುಕೊಂಡು 318 ರನ್​ ಕಲೆಹಾಕಿತು. ಬಟ್ ಬ್ಯಾಡ್​ಲಕ್ ಎರಡನೇ ದಿನದಾಟದಲ್ಲಿ ಆರಂಭದಲ್ಲೇ 2 ರನ್ ಗಳಿಸಿ ರನ್​ಔಟ್ ಆದ್ರು. ಆ ಬಳಿಕ ಗಿಲ್ 129 ರನ್ ಗಳಿಸಿದ್ರೆ ನಿತೀಶ್ ಕುಮಾರ್ ರೆಡ್ಡಿ 43 ರನ್ ಬಾರಿಸಿದರೆ, ಧ್ರುವ್ ಜುರೆಲ್ 44 ರನ್​​ಗಳಿಸಿ ಔಟಾದರು. ಜುರೆಲ್​ ಔಟಾಗುತ್ತಿದ್ದಂತೆ ಟೀಮ್ ಇಂಡಿಯಾ ಡಿಕ್ಲೇರ್ ಘೋಷಿಸಿತು. ಭಾರತ ತಂಡವು ಮೊದಲ ಇನಿಂಗ್ಸ್​ನಲ್ಲಿ 5 ವಿಕೆಟ್ ಕಳೆದುಕೊಂಡು 518 ರನ್ ಕಲೆಹಾಕಿ ಡಿಕ್ಲೇನ್ ಅನೌನ್ಸ್ ಮಾಡ್ತು. ವಿಂಡೀಸ್ ಪರ ಜೋಮೆಲ್ ವಾರಿಕನ್ ಮೂರು ವಿಕೆಟ್ ತೆಗೆದ್ರೆ ಕ್ಯಾಪ್ಟನ್ ರೋಸ್ಟನ್ ಚೇಸ್ 1 ವಿಕೆಟ್ ಅಷ್ಟೇ ತೆಗೆದ್ರು. ಇನ್ನು ಬ್ಯಾಟಿಂಗ್​ ಶುರು ಮಾಡಿದ ವಿಂಡೀಸ್ ಭಾರತದ ರನ್ ರಾಶಿ ನೋಡಿಯೇ ಶೇಕ್ ಆದಂಗಿತ್ತು.

ಕೆರೆಬಿಯನ್ ಬ್ಯಾಟರ್ ಗಳ ಬೇಟೆಯಾಡಿದ ಜಡ್ಡು!

ಎರಡನೇ ದಿನದ ಕೊನೇ ಸೆಷನ್​ನಲ್ಲೂ ಭಾರತವೇ ಡಾಮಿನೇಟ್ ಮಾಡ್ತು. ಅದ್ರೆ ಫಸ್ಟ್ ಡೇ ಸೆಕೆಂಡ್ ಡೇ ಸೇರಿ ಐದು ಸೆಷನ್​ಗಳಲ್ಲಿ ಬ್ಯಾಟಿಂಗ್​ನಲ್ಲಿ ಬೆಂಡೆತ್ತಿದ್ದ ಭಾರತದ ಆಟಗಾರರು ಕೊನೇ ಸೆಷನ್​ನಲ್ಲಿ ಬೌಲಿಂಗ್​ನಲ್ಲಿ ಬೇಟೆಯಾಡಿದ್ರು. ಅದ್ರಲ್ಲೂ ಸರ್ ರವೀಂದ್ರ ಜಡೇಜಾ ಸ್ಪೆಲ್ ಅಂತೂ ಎಕ್ಸ್​ಟ್ರಾರ್ಡಿನರಿ. ವಿಂಡೀಸ್ ಪಡೆ 21 ರನ್ ಗಳಿಸಿದ್ದಾಗ ಜಡ್ಡು ಫಸ್ಟ್ ವಿಕೆಟ್ ಉರುಳಿಸಿದ್ರು. 10 ರನ್ ಗಳಿಸಿದ್ದ ಜಾನ್ ಕಾಂಪ್​ಬೆಲ್ ಜಡ್ಡು ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದ್ರು. ಌಂಡ್ ನೆಕ್ಸ್​ಟ್ 87 ರನ್ ಗಳಿಸಿದ್ದಾಗ ಎರಡನೇ ವಿಕೆಟ್ ಬಿತ್ತು. ಅದೂ ಕೂಡ ಜಡ್ಡು ಬೌಲಿಂಗ್​ನಲ್ಲೇ. 34 ರನ್ ಗಳಿಸಿ ಚಂದರ್​ಪೌಲ್ ಪೆವಿಲಿಯನ್ ಸೇರಿದ್ರು. ಇನ್ನು ಕ್ಯಾಪ್ಟನ್ ರೋಸ್ಟನ್ ಚೇಸ್​ಗೂ ಕೂಡ ಜಡ್ಡು ಪೆವಿಲಿಯನ್ ಹಾದಿ ತೋರಿಸಿದ್ರು. ಖಾತೆ ತೆರೆಯದೇ ಔಟ್ ಆದ್ರು. ಮತ್ತೊಂದೆಡೆ 41 ರನ್ ಗಳಿಸಿ ಕಾನ್ಫಿಡೆಂಟಾಗಿ ಕಾಣ್ತಿದ್ದ ಅಲಿಕ್ ಅಥನಾಜೆ ಕುಲ್ದೀಪ್ ಬೌಲಿಂಗ್​ನಲ್ಲಿ ಕ್ಯಾಚ್ ಕೊಟ್ರು. ಇಂಟ್ರೆಸ್ಟಿಂಗ್ ಅಂದ್ರೆ ಕ್ಯಾಚ್ ಹಿಡಿದಿದ್ದು ರವೀಂದ್ರ ಜಡೇಜಾ. ಸೋ ನಾಲ್ಕೂ ವಿಕೆಟ್​ಗಳಲ್ಲೂ ಜಡ್ಡು ಕಾಂಟ್ರಿಬ್ಯೂಷನ್ ಫೆಂಟಾಸ್ಟಿಕ್ ಆಗಿತ್ತು.

ಎರಡನೇ ದಿನದಾಟದಲ್ಲಿ ವೆಸ್ಟ್ ಇಂಡೀಸ್ ತಂಡ 4 ವಿಕೆಟ್ ಕಳ್ಕೊಂಡು 140 ರನ್ಸ್ ಕಲೆ ಹಾಕಿದೆ. ಸದ್ಯ ಭಾರತ 378 ರನ್​ಗಳ ಲೀಡ್​ನಲ್ಲಿದೆ. ಸದ್ಯಕ್ಕೆ ವಿಂಡೀಸ್ ಪಡೆ ಬ್ಯಾಟಿಂಗ್ ನೋಡ್ತಿದ್ರೆ 200 ಅಥವಾ 250 ರನ್ಸ್​ ವೇಳೆಗೆಲ್ಲಾ ಆಲೌಟ್ ಆಗೋ ಚಾನ್ಸಸ್ ಇದೆ. ಹಾಗೇನಾದ್ರೂ 300 ಒಳಗೆ ವಿಂಡೀಸ್ ತಂಡ ಆಲೌಟ್ ಆದ್ರೂ ಕೂಡ ಭಾರತ ಫಾಲೋ ಆನ್ ಹೇರಬಹುದು. ಸೋ ವಿಂಡೀಸ್ ಪಡೆ ಮತ್ತೆ ಬ್ಯಾಟಿಂಗ್ ಶುರು ಮಾಡ್ಬೇಕಾಗುತ್ತೆ. ಸದ್ಯಕ್ಕಂತೂ ಎರಡನೇ ಪಂದ್ಯದ ಎಲ್ಲಾ ಸೆಷನ್​ಗಳಲ್ಲೂ ಭಾರತವೇ ಕಂಪ್ಲೀಟ್ ಆಗಿ ಪ್ರಾಬಲ್ಯ ಮೆರೆದಿದೆ. ಭಾನುವಾರದ ಮೂರನೇ ದಿನದಾಟದಲ್ಲಿ ಮ್ಯಾಚ್​ನ ಒಂದು ಕ್ಲೈಮ್ಯಾಕ್ಸ್ ಪಿಕ್ಚರ್ ಗೊತ್ತಾಗುತ್ತೆ.

Kishor KV