ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಅಮೃತಧಾರೆ ಸುಧಾ – ಮೇಘಾ ಶೆಣೈ ಮನಸ್ಸು ಕದ್ದ ಹುಡುಗ ಯಾರು?

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಅಮೃತಧಾರೆ ಸುಧಾ – ಮೇಘಾ ಶೆಣೈ ಮನಸ್ಸು ಕದ್ದ ಹುಡುಗ ಯಾರು?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಈ ರೋಚಕ ತಿರುವು ಪಡೆದುಕೊಂಡಿದೆ. ಅಪ್ಪು ಅಜ್ಜ ಅಜ್ಜಿ ಜೊತೆ ಆಟ ಆಡ್ತಾ ಇರೋದನ್ನ ನೋಡಿ ಭೂಮಿಕಾ ಖುಷಿಪಟ್ರೆ, ಇತ್ತ ಗೌತಮ್‌ಗೆ ಕಳೆದು ಹೋಗಿದ್ದ ಮಗಳು ಸಿಕ್ಕಿದ್ದಾಳೆ. ಆದ್ರೆ ಆತನಿಗೆ ತನ್ನ ಜೊತೆ ಇರುವುದು ತನ್ನ ಸ್ಪಂತ ಮಗಳು ಅನ್ನೋದು ಗೊತ್ತಿಲ್ಲ. ಇದೀಗ ವೀಕ್ಷಕರು ಆದಷ್ಟು ಬೇಗ ಗೌತಮ್‌ ಫ್ಯಾಮಿಲಿ ಒಂದಾಗ್ಲಿ ಅಂತಾ ಬಯಸ್ತಾ ಇದ್ದಾರೆ. ಇವೆಲ್ಲದ್ರ ನಡುವೆ ಅಮೃತಧಾರೆ ಸೀರಿಯಲ್‌ ನಲ್ಲಿ ಗೌತಮ್ ದಿವಾನ್ ತಂಗಿ ಸುಧಾ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಮೇಘಾ ಶೆಣೈ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ:ಪ್ರಿಯತಮನ ಜೊತೆ ಮಗಳು ಪರಾರಿ – ಊರಿಗೆ ತಿಥಿ ಊಟ ಹಾಕಿಸಿದ ತಂದೆ

ಅಮೃತಧಾರೆ ಸೀರಿಯಲ್‌ನಲ್ಲಿ ಮೇಘಾ ಶೆಣೈ ಸುಧಾ ಪಾತ್ರದ ಮೂಲಕ ಮಿಂಚುತ್ತಿದ್ದಾರೆ. ಸುಧಾ ಸೃಜನ್‌ ಜೋಡಿಯನ್ನ ವೀಕ್ಷಕರು ಇಷ್ಟಪಟ್ಟಿದ್ದಾರೆ. ಇದೀಗ ಮೇಘಾ ರಿಯಲ್‌ ಲೈಫ್‌ನಲ್ಲಿ ಜೀವನ ಹೊಸ ಅಧ್ಯಾಯ ಶುರುಮಾಡಲು ಸಜ್ಜಾಗಿದ್ದಾರೆ. ಮೇಘಾ, ಆಗಸ್ಟ್ 21 ರಂದು ಭರತ್ ಸಿಂಗ್ ಜೊತೆ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ನಟಿ ಮೇಘಾ ಶೆಣೈ, ಪ್ರಿ ವೆಡ್ಡಿಂಗ್ ಫೋಟೊ ಶೂಟ್, ವಿಡಿಯೋ ಶೂಟ್ ಮಾಡಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಜೊತೆಗೆ, ಬಾಲ್ಯದ ಸ್ನೇಹಿತರಿಂದ ಹಿಡಿದು ಜೀವನ ಸಂಗಾತಿಗಳವರೆಗೆ – ನಮ್ಮ ಪ್ರಿ ವೆಡ್ಡಿಂಗ್ ಫೋಟೊ ಶೂಟ್, ನಾವು ಈ ರೀತಿ ಪೋಸ್ ನೀಡುವ ದಿನ ಬರುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ ಎಂದು ಮೇಘಾ ಶೆಣೈ ಬರೆದುಕೊಂಡಿದ್ದಾರೆ. ಆದ್ರೆ ಮೇಘಾ ಶೆಣೈ ಇದುವರೆಗೂ ತಾವು ಮದುವೆಯಾಗುವ ಹುಡುಗನ ಕುರಿತಾಗಲಿ, ಕೆಲಸ ಕುರಿತಾಗಲೀ ಹಾಗೂ ಮದುವೆ ಯಾವಾಗ ಎನ್ನುವ ಕುರಿತಾಗಲಿ ಯಾವುದೇ ಮಾಹಿತಿ ನೀಡಿಲ್ಲ. ಇದೀಗ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿದ್ದು, ಶೀಘ್ರದಲ್ಲೇ ಮದುವೆಯಾಗುವ ಸೂಚನೆ ನೀಡಿದ್ದಾರೆ.

ಮೇಘಾ ಶೆಣೈ ಮಂಗಳೂರಿನವರಾಗಿದ್ದು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಸುಂದರಿ ಧಾರಾವಾಹಿಯ ಮೂಲಕ ನಟನೆ ಜರ್ನಿ ಶುರು ಮಾಡಿದ್ರು. ಬಳಿಕ ‘ಬ್ರಾಹ್ಮಿನ್ಸ್ ಕೆಫೆ’, .ಜನುಮದ ಜೋಡಿ’ ಧಾರಾವಾಹಿಯಲ್ಲಿ ಅಭಿನಯಿಸಿದರು. ನಂತ್ರ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಕಾವೇರಿ’ ಧಾರಾವಾಹಿಯಲ್ಲಿ ವಿಲನ್ ಆಗಿ ಸದ್ದು ಮಾಡಿದರು.

ಇದಲ್ಲದೇ ‘ಮಹಾದೇವಿ’ ಧಾರಾವಾಹಿಯಲ್ಲಿ ಅಧಿಕಾರಿ ರಶ್ಮಿಯಾಗಿ, ‘ರಕ್ಷಾಬಂಧನ’ ಧಾರಾವಾಹಿಯಲ್ಲಿ ನಾಯಕನ ಪ್ರೇಯಸಿಯಾಗಿ, ‘ಆರತಿಗೊಬ್ಬ ಕೀರ್ತಿಗೊಬ್ಬ’ ಧಾರಾವಾಹಿಯಲ್ಲಿ ಕೀರ್ತಿ ಆಗಿ ಕಾಣಿಸಿಕೊಂಡಿದ್ದರು. ನಂತರ ಜೀವ ಹೂವಾಗಿದೆ ಧಾರಾವಾಹಿಯಲ್ಲಿ ನಟಿಸಿದ್ದರು. ಸದ್ಯ ಅಮೃತಧಾರೆಯಲ್ಲಿ ಸುಧಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.

Shwetha M