ರೈಲು ಸೀಟಿಗಾಗಿ ಫೈಟ್! – ಪ್ರಯಾಣಿಕರ ಮೇಲೆ ಪೆಪ್ಪರ್ ಸ್ಪ್ರೇ ಹೊಡೆದ ಯುವತಿ!

ಲೋಕಲ್ ಬಸ್, ರೈಲುಗಳಲ್ಲಿ ಯಾವಾಗಲೂ ತುಂಬಾ ರಶ್ ಇರುತ್ತೆ. ಈ ವೇಳೆ ಸೀಟ್ ಸಿಕ್ಕಿದ್ರೆ ಸಾಕು ಅಂತಾ ಅಂದುಕೊಳ್ಳುತ್ತಾರೆ. ಆದ್ರೆ ಕೆಲವೊಮ್ಮೆ ಕೂರಲು ಸೀಟು ಸಿಗುವುದಿಲ್ಲ. ಕೆಲವರು ವಯಸ್ಸಾದವರಿಗೆ ಸೀಟ್ ಬಿಟ್ಟುಕೊಟ್ರೆ, ಇನ್ನೂ ಕೆಲವರು ಸೀಟ್ ವಿಚಾರವಾಗಿ ಪ್ರಯಾಣಿಕರು ರಂಪ ರಾಮಾಯಣವನ್ನೇ ಮಾಡಿಬಿಡುತ್ತಾರೆ. ಆದ್ರೆ ಕೋಲ್ಕತ್ತಾದಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಲೋಕಲ್ ಟ್ರೈನ್ನಲ್ಲಿ ಓರ್ವ ಮಹಿಳೆ ಸೀಟಿಗಾಗಿ ಸಹ ಪ್ರಯಾಣಿಕರ ಮೇಲೆ ಪೆಪ್ಪರ್ ಸ್ಪ್ರೇ ಸಿಂಪಡಿಸಿದ್ದಾಳೆ.
ಇದನ್ನೂ ಓದಿ: ಪಾಕಿಸ್ತಾನ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಟಿಟಿಪಿ ಉಗ್ರ*ರ ದಾಳಿ – 7 ಪೊಲೀಸರು ಸಾ*ವು
ಸಾಮಾನ್ಯವಾಗಿ ಬಸ್, ರೈಲುಗಳಲ್ಲಿ ಸೀಟು ಸಿಕ್ಕಿಲ್ಲ ಅಂದ್ರೆ ಮುಂದಿನ ಸ್ಟಾಪ್ನಲ್ಲಾದ್ರೂ ಸೀಟ್ ಸಿಗುತ್ತಾ ಎಂದು ಕಾಯುತ್ತೇವೆ. ಯಾರಾದ್ರೂ ಎದ್ರೆ, ಬೇಗ ಹೋಗಿ ಕುಳಿತುಕೊಳ್ಳಲು ಪ್ರಯತ್ನಿಸ್ತೇವೆ. ಆದ್ರೆ ಇಲ್ಲೊಬ್ಬಳು ಮಹಿಳೆ ಕೋಲ್ಕತ್ತಾದ ಲೋಕಲ್ ಟ್ರೈನ್ನಲ್ಲಿ ಸೀಟಿಗಾಗಿ ಸಹ ಪ್ರಯಾಣಿಕರ ಮೇಲೆ ಪೆಪ್ಪರ್ ಸ್ಪ್ರೇ ಸಿಂಪಡಿಸಿದ್ದಾಳೆ. ಇದರಿಂದ ಕೋಪಗೊಂಡ ಇತರೆ ಪ್ರಯಾಣಿಕರು ಆಕೆಯನ್ನು ಬೆಂಡೆತ್ತಿದ್ದಾರೆ.
ಅಮೃತ ಝಿಲಿಕ್ amrita_jhilik ಎಂಬವರು ಈ ಕುರಿತ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ ಮತ್ತು “ಈ ಹಸಿರು ಕುರ್ತಿ ಧರಿಸಿದ ಮಹಿಳೆ ಸೀಲ್ಡಾ ನಿಲ್ದಾಣದಲ್ಲಿ ಟ್ರೈನ್ ಹತ್ತಿ ಸೀಟಿನಲ್ಲಿ ಕುಳಿತಿದ್ದ ಹುಡುಗಿಯೊಂದಿಗೆ ಜಗಳವಾಗಿ ಆಕೆಗೆ ಪೆಪ್ಪರ್ ಸ್ಪ್ರೇ ಸಿಂಪಡಿಸಲು ಯತ್ನಿಸಿದ್ದಾಳೆ. ಆಕೆ ಪೆಪ್ಪರ್ ಸ್ಪ್ರೇ ತೆಗೆಯುತ್ತಿದ್ದಂತೆ ಆಕೆಯನ್ನು ಮಹಿಳೆಯೊಬ್ಬರು ತಡೆಯಲು ಪ್ರಯತ್ನಿಸಿದಾಗ ಕೋಪಗೊಂಡ ಆಕೆ ಬೋಗಿಯ ತುಂಬೆಲ್ಲಾ ಸ್ಪ್ರೇ ಸಿಂಪಡಿಸಿದಳು. ಈಕೆಯ ಕೃತ್ಯಕ್ಕೆ ನಮಗೆಲ್ಲಾ ಕೆಮ್ಮು ಬಂದಿದ್ದು ಮಾತ್ರವಲ್ಲದೆ ಇಬ್ಬರು ಮಕ್ಕಳು ಅಸ್ವಸ್ಥರಾಗಿದ್ದಾರೆ. ಕೊನೆಗೆ ಆಕೆಯನ್ನು ಬೆಂಡೆತ್ತಿ ರೈಲ್ವೆ ಪೊಲೀಸ್ಗೆ ಒಪ್ಪಿಸಲಾಯಿತು. ಪೆಪ್ಪರ್ ಸ್ಪ್ರೇ ವೈಯಕ್ತಿಕ ಸುರಕ್ಷತೆಗಾಗಿ ಬಳಸಬೇಕು, ಆದರೆ ಈ ಕ್ರಿಮಿನಲ್ ಮನಸ್ಸಿನವಳು ಈ ರೀತಿ ತಪ್ಪು ಕಾರ್ಯ ಮಾಡಿದ್ದಾಳೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ನೋಡಿರಿ

