ದೊಡ್ಮನೆ ಡೋರ್ ಓಪನ್.. ಕಿಚ್ಚ ಸುದೀಪ್ ಹೇಳ್ತಿದ್ದಂತೆ ಕಾಕ್ರೋಚ್ ಸುಧಿ ಹೊರಕ್ಕೆ?

ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿ ಎರಡು ವಾರ ಆಗುತ್ತ ಬರುತ್ತಿದೆ. ಎರಡನೇ ವಾರ ಕೂಡ ಬಿಗ್ ಬಾಸ್ ಮನೆ ರಣರಂಗವಾಗಿತ್ತು. ಪ್ರತಿ ಎಪಿಸೋಡ್ನಲ್ಲಿ ಜಗಳಗಳೇ ನಡೆದಿತ್ತು. ಇಂದು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ನಡೆಯುತ್ತಿದೆ. ಈ ವಾರ ಸಾಕಷ್ಟು ಕ್ಯೂರಿಯಾಸಿಟಿ ಮೂಡಿಸಿದೆ. ಇದೀಗ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಯಶಸ್ವಿ ಜೈಸ್ವಾಲ್ RUN OUT ರಾಡಿ – ಗಿಲ್ ಬೇಕಂತಲೇ ಔಟ್ ಮಾಡ್ಸಿದ್ರಾ?
ಮೊದಲ ಫಿನಾಲೆ ಕಂಟೆಂಡರ್ ಕಾಕ್ರೋಚ್ ಸುಧಿಗೆ ಈ ವಾರ ಅಸುರಾಧಿಪತಿ ಎಂಬ ಪಾತ್ರ ಕೊಡಲಾಗಿತ್ತು. ಆದರೆ ತಮ್ಮ ಪಾತ್ರವನ್ನು ಅವರು ಸರಿಯಾಗಿ ನಿರ್ವಹಿಸಲಿಲ್ಲ. ಅಸುರನಿಗೆ ಏನು ಬೇಕಾದ್ರು ನಿಯಮ ಮಾಡಬಹುದು, ಯಾರನ್ನ ಬೇಕಾದ್ರು ಶಿಕ್ಷಿಸಬಹುದು, ಹೇಗೆ ಬೇಕಾದ್ರು ಬದುಕುವ ಅಧಿಕಾರ ಇತ್ತು. ಆದರೆ, ಇವರು ಅದನ್ನು ಸರಿಯಾಗಿ ಉಪಯೋಗಿಸಿಕೊಂಡಿಲ್ಲ. ಆ ಖಡಕ್ ಮಾತು- ಸ್ಪರ್ಧಿಗಳ ಕೈಯಿಂದ ಕೆಲಸ ಮಾಡಬೇಕಾಗಿದ್ದಿದ್ದನ್ನು ಮಾಡಿಸಲಿಲ್ಲ.ಇದೀಗ ವೀಕೆಂಡ್ನಲ್ಲಿ ಈ ಬಗ್ಗೆ ಸುದೀಪ್ ಮಾತನಾಡಿ ಕೋಪಗೊಂಡಿದ್ದಾರೆ.
ಕಾಕ್ರೋಚ್ ಅವರಿಗೆ ನೀಡಿದ್ದ ಅಸುರ ಟಾಸ್ಕ್ನಲ್ಲಿ ಅವರ ಪ್ರದರ್ಶನ ಹೇಗಿತ್ತು ಎಂದು ಸುದೀಪ್ ಇತರೆ ಸ್ಪರ್ಧಿಗಳ ಬಳಿ ಕೇಳಿದ್ದಾರೆ. ಇದಕ್ಕೆ ಜಾನ್ವಿ ಅವರು, ಅವರ ಕ್ರೌರ್ಯ, ಅಟ್ಟಹಾಸ ಕೇವಲ ಮೇಕಪ್ಗಷ್ಟೇ ಸೀಮಿತವಾಗಿತ್ತು ಎಂದು ಹೇಳಿದ್ದಾರೆ. ಅವರು ಅಸುರ ಅನ್ನುವುದಕ್ಕಿಂತ ಒಬ್ಬ ಜೋಕರ್ ತರ ಇದ್ರು ಎಂದು ಕಾವ್ಯ ಹೇಳಿದರು. ಇವರ ಮಾತು ಕೇಳಿ ಬೇಸರಗೊಂಡ ಸುಧಿ, ಅವರ ಕಾಲು ಒಂದು ಬಿದ್ದಿಲ್ಲ ಅಷ್ಟೆ ನಾನು.. ಹೇಳಿದ್ದನ್ನ ಒಂದೂ ಕೇಳಿಲ್ಲ.. ಇನ್ನೇಗೆ ಬದುಕಬೇಕು ನಾನು.. ಆಗಲ್ಲ ಅವುಗಳ ಹತ್ರ ಎಂದು ಹೇಳಿದ್ದಾರೆ. ಈ ಮಾತಿನಿಂದ ಕೆರಳಿದ ಕಿಚ್ಚ, ಶೋದು ಸೀರಿಯಸ್ನೆಸ್ ಅರ್ಥ ಆಗುತ್ತಿಲ್ಲ ಅಂದ್ರೆ.. ಕೆಲವು ಕಂಟ್ರೋಲ್ ಮಾಡೋಕೆ ಆಗ್ತಾ ಇಲ್ಲ ಅಂದ್ರೆ ಈಗಲೇ ಕಳಿಸಿಕೊಡ್ತೀನಿ ಹೋಗಿ.. ಬಾಗಿಲು ಓಪನ್ ಆಗಿದೆ ಎಂದು ಹೇಳಿದ್ದಾರೆ. ಸುದೀಪ್ ಮಾತು ಕೇಳಿ ಸುಧಿಗೆ ಭಯವಾಗಿದೆ. ಇಂದೇನು ಆಗುತ್ತೆ ಎಂಬುದು ಕುತೂಹಲ ಮೂಡಿಸಿದೆ.

ನೋಡಿರಿ

