ಪ್ರಿಯತಮನ ಜೊತೆ ಮಗಳು ಪರಾರಿ – ಊರಿಗೆ ತಿಥಿ ಊಟ ಹಾಕಿಸಿದ ತಂದೆ

ಈಗಿನ ಕಾಲದಲ್ಲಿ ಪ್ರೀತಿ, ಪ್ರೇಮ ಕಾಮನ್ ಆಗಿದೆ. ಪ್ರೀತಿಸಿದವರ ಜೊತೆ ಮದುವೆ ಮಾಡಿಸಲು ಒಪ್ಪಿಲ್ಲ ಎಂದು ಓಡಿಹೋಗುತ್ತಿರುವ ಘಟನೆಗಳು ಆಗಾಗ ಬೆಳಕಿಗೆ ಬರುತ್ತಿವೆ. ಮಕ್ಕಳು ಮಾಡೋ ತಪ್ಪಿಗೆ ಪೋಷಕರು ತಲೆ ತಗ್ಗಿಸುವಂತೆ ಆಗುತ್ತೆ. ಜನರ ಅವಮಾನದ ಮಾತಿಗೆ ಕೆಲವರು ನೊಂದು ಮೂಲೆ ಸೇರ್ತಾರೆ. ಇನ್ನು ಕೆಲವರು ಮಗ ಅಥವಾ ಮಗಳನ್ನೇ ದೂರ ಮಾಡ್ತಾರೆ. ಆದ್ರೆ ಚಿಕ್ಕೋಡಿಯಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಮಗಳು ಪ್ರಿಯತಮನ ಜೊತೆ ಓಡಿ ಹೋದಳು ಅಂತ ತಂದೆ ಮಗಳು ಸತ್ತಿದ್ದಾಳೆ ಎಂದು ಊರಿಗೆಲ್ಲಾ ತಿಥಿ ಊಟ ಹಾಕಿಸಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯ ಮೊಮ್ಮಗ ರಾಜಕೀಯ ಎಂಟ್ರಿ ಫಿಕ್ಸ್! – ರಾಹುಲ್ ಗಾಂಧಿ ಜೊತೆಗಿನ ಫೋಟೊ ಹಂಚಿಕೊಂಡ ಧವನ್ ರಾಕೇಶ್
ಈ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಾಳ ಗ್ರಾಮದಲ್ಲಿ ನಡೆದಿದೆ. ಶಿವಗೌಡ ಪಾಟೀಲ್ ಎಂಬವರಿಗೆ ನಾಲ್ಕು ಹೆಣ್ಣುಮಕ್ಕಳಿದ್ದರು. ಕೊನೆಯ ಮಗಳು ಸುಶ್ಮಿತಾ ಶಿವಗೌಡ ಪಾಟೀಲ, ಅದೇ ಗ್ರಾಮದ ವಿಠ್ಠಲ ಬಸ್ತವಾಡೆ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳಂತೆ. ವಿಠ್ಠಲ ಬಸ್ತವಾಡ ತಹಶೀಲ್ದಾರ್ ಕಚೇರಿಯಲ್ಲಿ ಗ್ರಾಮ ಸೇವಕನಾಗಿ ಕೆಲಸ ಮಾಡ್ತಿದ್ದ ಎನ್ನಲಾಗ್ತಿದೆ. ಇಬ್ಬರ ಪ್ರೀತಿಗೆ ಮನೆಯವರ ವಿರೋಧ ವ್ಯಕ್ತವಾದ ಹಿನ್ನೆಲೆ ಇಬ್ಬರು ಓಡಿ ಹೋಗಿದ್ದಾರಂತೆ. ಮಗಳ ಕಾಣೆಯಾದಾಗ ಶಿವಗೌಡ ಅವರು ಮೊದಲು ಮಗಳು ಕಾಣೆಯಾಗಿದ್ದಾಳೆ ಎಂದು ರಾಯಭಾಗ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಗಳು ಓಡಿಹೋಗಿದ್ದಾಳೆ ಎಂಬ ವಿಚಾರ ತಿಳಿಯುತ್ತಿದ್ದಂರೆ ತಂದೆ ಮನನೊಂದಿದ್ದಾರೆ.
ಬಳಿಕ ಮನೆಗೆ ಬಂದ ಶಿವಗೌಡ, ನನ್ನ ಮಗಳು ನಮ್ಮ ಪಾಲಿಗೆ ಸತ್ತಳೆಂದು ತಿಥಿ ಮಾಡಿದ ತಂದೆ ಇಡೀ ಊರಿನ ಜನರನ್ನು ಕರೆದು ಊಟ ಹಾಕಿಸಿದ್ದಾರೆ. ನಾಗರಾಳ ಗ್ರಾಮದಲ್ಲಿ ಹೆತ್ತ ಮಗಳಿಗೆ ಶ್ರಾದ್ಧ ಕಾರ್ಯ ಮಾಡಿ ಕರುಳ ಬಳ್ಳಿ ಸಂಬಂಧ ಕತ್ತರಿಸಿಕೊಂಡ ತಂದೆಯ ಕೆಲಸದ ಬಗ್ಗೆ ಪರ-ವಿರೋಧದ ಮಾತುಗಳು ಕೇಳಿ ಬರ್ತಿದೆ.

ನೋಡಿರಿ

