ವಿಚಾರಣಾಧೀನ ಖೈದಿಗಳಿಗೆ ವೋಟಿಂಗ್ ರೈಟ್ಸ್? – ಜೈಲಲ್ಲೇ ನಡೆಯುತ್ತಾ ಮತದಾನ?

ನಮ್ಮ ದೇಶದಲ್ಲಿ ಸಾಕಷ್ಟು ಜನ ವೋಟ್ ಹಾಕಲ್ಲ.. ಅದ್ದಕ್ಕೆ ನಾನಾ ಕಾರಣಗಳಿವೆ.. ಬೇರೆಯಲ್ಲೋ ಕೆಲಸ ಮಾಡ್ತಾ ಇರ್ತಾರೆ.. ರಜೆ ಸಿಕ್ಕಿರಲ್ಲ.. ವೋಟ್ ಯಾರ್ ಹಾಕ್ತಾರೆ ಅನ್ನೋ ಅಸಡ್ಡೆ ಇರಬಹುದು.. ಆದ್ರೆ ಮತ್ತೊಂದಷ್ಟು ಜನಕ್ಕೆ ವೋಟ್ ಹಾಕೋಕೆ ಇಷ್ಟ ಇದ್ರೂ ಅವಕಾಶ ಇರಲ್ಲ.. ಅವರೇ ಜೈಲಿನಲ್ಲಿರೋ ಕೈದಿಗಳು.. ಅದರಲ್ಲೂ ವಿಚಾರಣಾಧೀನ ಕೈದಿಗಳಿಗೆ ಈ ಅವಕಾಶ ಕೈ ತಪ್ಪಿ ಹೋಗುತ್ತೆ. ಸದ್ಯಕ್ಕೆ ಚರ್ಚೆ ಆಗ್ತಾ ಇರೋ ವಿಷ್ಯ ಅಂದ್ರೆ ಇದೇ. ಅಂದಹಾಗೇ ಇದೇ ಶುಕ್ರವಾರ ಸುಪ್ರೀಂಕೋರ್ಟ್ನಲ್ಲಿ ಒಂದು ಅರ್ಜಿಯ ವಿಚಾರಣೆ ನಡೆದಿದೆ. ಭಾರತದಲ್ಲಿರೋ ವಿಚಾರಣಾಧೀನ ಕೈದಿಗಳಿಗೆ ವೋಟ್ ಹಾಕೋಕೆ ಹಕ್ಕನ್ನ ನೀಡಬೇಕು ಅನ್ನೋದು. ಹೌದು ಭಾರತದ ಜೈಲಿನಲ್ಲಿ ಸುಮಾರು ಐದೂವರೆ ಲಕ್ಷ ಜನ ಕೈದಿಗಳಿದ್ದಾರೆ. ಇದ್ರಲ್ಲಿ ನಾಲ್ಕೂವರೇ ಲಕ್ಷ ಕೈದಿಗಳು ವಿಚಾರಣಾಧೀನ ಕೈದಿಗಳು.. ಇದು 2023ರ ವರದಿ ಪ್ರಕಾರ.. ಬಟ್ ಈಗ ಐದು ರಿಂದ 10 ಸಾವಿರ ಹೆಚ್ಚು ಕಮ್ಮಿಯಾಗಿರಬಹುದು.. ನೋಡಿ ನೂರಲ್ಲಿ 70ರಷ್ಟು ಕೈದಿಗಳು ವಿಚಾರಣಾಧೀನ ಕೈದಿಗಳು.. ಇವರು ಆರೋಪ ಮಾಡಿರೋದು ಇನ್ನೂ ಸಾಭಿತು ಆಗಿಲ್ಲ. ಆದ್ರೂ ಇವರ ಕೇಸ್ ವಿಚಾರಣೆಯಲ್ಲಿರೋದ್ರಿಂದ ಇವರನ್ನ ಜೈಲಿಗೆ ಹಾಕಲಾಗಿದೆ. ಶಿಕ್ಷೆ ಅನುಭವಿಸಬೇಕಾಗಿದೆ. ಒಂದು ವೇಳೆ ಇವರು ಆರೋಪಿಗಳು ಅಲ್ಲ ಅಂತ ಸಾಬೀತಾದ್ರೆ ಇವರು ಹೊರಗೆ ಬರಬಹುದು.. ಈಗ ಇವರಿಗೆ ವೋಟ್ ಹಾಕೋಕೆ ಅವಕಾಶ ನೀಡಬೇಕು ಅಂತ ಸುಪ್ರೀಂಗೆ ಅರ್ಜಿ ಸಲ್ಲಿಸಲಾಗಿದೆ. ಅಂದಹಾಗೇ ಸುಮಾರು 4.5 ಲಕ್ಷ ವಿಚಾರಣಾಧೀನ ಕೈದಿಗಳಿಗೆ ಮತದಾನದ ಹಕ್ಕನ್ನು ನೀಡಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠ ವಾದಗಳನ್ನು ಆಲಿಸಿತು. ವಾದ ಆಲಿಸಿದದ ಸುಪ್ರೀಂ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಸೂಚಿಸಿದೆ.
ಇದನ್ನೂ ಓದಿ: ಪ. ಬಂಗಾಳದಲ್ಲಿ ಕಾಮು*ಕರ ಅಟ್ಟಹಾಸ – ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಮೇಲೆ ರೇ*ಪ್
ಜೈಲಲ್ಲೇ ನಡೆಯುತ್ತಾ ಮತದಾನ?
ಮತ್ತೊಂದ್ಕಡೆ ಮತದಾನದ ಹಕ್ಕು ಸಂವಿಧಾನಬದ್ಧ ಹಕ್ಕು ಎಂದು ಹೇಳಲಾಗಿದೆ. ಹೀಗಿರುವಾಗ ಜೈಲಿನಲ್ಲಿರೋ ವಿಚಾರಣಾಧೀನ ಕೈದಿಗೆ ಯಾಕೆ ವೋಟ್ ಹಾಕೋಕೆ ಅವಕಾಶ ಇಲ್ಲ ಅನ್ನೋದು ಚರ್ಚೆ ಆಗ್ತಾ ಇದೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಪೊಲೀಸ್ ವಶದಲ್ಲಿರುವ ಅಥವಾ ಕ್ರಿಮಿನಲ್ ಆರೋಪದ ಮೇಲೆ ಜೈಲು ಪಾಲಾಗಿರುವ ಹಲವು ನಾಯಕರು ನ್ಯಾಯಾಲಯದಿಂದ ಆರೋಪ ಸಾಬೀತಾಗುವವರೆಗೆ ಚುನಾವಣೆಗೆ ಸ್ಪರ್ಧಿಸೋಕೆ ಅವಕಾಶ ಇದೆ. ಶಿಕ್ಷೆಗೆ ಒಳಗಾದ ವ್ಯಕ್ತಿಯು ಚುನಾವಣೆಯಲ್ಲಿ ಸ್ಪರ್ಧಿಸಿ ಲಕ್ಷಾಂತರ ಮತದಾರರನ್ನು ಪ್ರತಿನಿಧಿಸಬಹುದಾದ್ರೆ, ಇನ್ನೂ ಅಪರಾಧಿ ಎಂದು ಸಾಬೀತಾಗದ ಸಾಮಾನ್ಯ ನಾಗರಿಕನಿಗೆ ಮತ ಚಲಾಯಿಸುವ ಮತ್ತು ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಹಕ್ಕು ಯಾಕಿಲ್ಲ ಅನ್ನೋ ಪ್ರಶ್ನೆ ಕೂಡ ಎಳುತ್ತಿದೆ. ಸುಪ್ರೀಂಗೆ ಸಲ್ಲಿಸಿರೋ ಅರ್ಜಿಯಲ್ಲೂ ಕೂಡ ಇದ್ದನ್ನೇ ಪ್ರಶ್ನೆ ಮಾಡಲಾಗಿದೆ.. ಹೀಗಾಗಿ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ತಮ್ಮ ಅಭಿಪ್ರಾಯವನ್ನು ತಿಳಿಸಬೇಕೆಂದು ಸುಪ್ರೀಂ ಕೋರ್ಟ್ ಕೇಳಿಕೊಂಡಿದೆ.
ಇನ್ನು ಜೈಲಿನಲ್ಲಿ ವಿವಿಧ ಭಾಗದ ವಿವಿಧ ರಾಜ್ಯದ ಕೈದಿಗಳು ಇರ್ತಾರೆ.. ಲೋಕಸಭಾ ಎಲೆಕ್ಷನ್ ಆದ್ರೆ ಒಟ್ಟಿಗೆ ಆಗುತ್ತೆ ಆಗುತ್ತೆ ಆದ್ರೆ ವಿಧಾನಸಭಾ ಎಲೆಕ್ಷನ್ಗಳು ಬೇರೆ ಬೇರೆ ರಾಜ್ಯದಲ್ಲಿ ಬೇರೆಬೇರೆ ಟೈಂನಲ್ಲಿ ಇರುತ್ತೆ.. ಹೀಗಾಗಿ ಜೈಲಿನ ಕೈದಿಗಳ ಎಲೆಕ್ಷನ್ ಟೈಂನಲ್ಲಿ ಅವರಿಗೆ ಎಲ್ಲಿ ವೋಟ್ ಇರುತ್ತೆ ಅಲ್ಲಿ ಕರ್ಕೋಂಡ್ ಹೋಗೋಕೆ ಆಗಲ್ಲ. ಯಾಕಂದ್ರೆ ಅಷ್ಟೋ ಪೊಲೀಸ್ ಪೋರ್ಸ್ ಬೇಕಾಗುತ್ತೆ.. ಹೀಗಾಗಿ ಜೈಲಿನಲ್ಲಿರೋ ಕೈದಿಗಳಿಗೆ ಅಂಚೆ ಮತದಾನದ ಅವಕಾಶ ನೀಡಬಹುದು. ಯಾವ ಕ್ಷೇತ್ರದ ಕೈದಿ ಅಂತ ಗುರುತಿಸಿ ಆ ಕೈದಿ ಆ ಕ್ಷೇತ್ರದ ಅಭ್ಯರ್ಧಿಗೆ ಮತ ಹಾಕೋಕೆ ಅವಕಾಶ ನೀಡಬಹುದು. ಬಟ್ ಇದ್ರಲ್ಲಿ ಯಾವುದೇ ಗೋಲ್ ಮಾಲ್ ಆಗದಂತೆ ಚುನಾವಣಾ ಆಯೋಗ ನೋಡಿಕೊಳ್ಳಬೇಕು. ಈ ನಿರ್ಧಾರವು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಬಹುದು. ವಿಚಾರಣಾಧೀನ ಕೈದಿಗಳ ಹಕ್ಕುಗಳ ಬಗ್ಗೆ ಇದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಈ ಪ್ರಕರಣದ ಮುಂದಿನ ವಿಚಾರಣೆಯಲ್ಲಿ ಯಾವ ತಿರುವು ಪಡೆದುಕೊಳ್ಳುತ್ತೆ ಅನ್ನೋದ್ದನ್ನ ಕಾದು ನೋಡಬೇಕಿದೆ.

ನೋಡಿರಿ

