ಮುಂಬೈ ತಂಡದಿಂದ ಸೂರ್ಯಕುಮಾರ್‌ಗೆ ಗೇಟ್‌ಪಾಸ್ – ರಣಜಿಗೂ ಲಾಯಕ್ ಇಲ್ವಾ ಸೂರ್ಯ?

ಮುಂಬೈ ತಂಡದಿಂದ ಸೂರ್ಯಕುಮಾರ್‌ಗೆ ಗೇಟ್‌ಪಾಸ್ – ರಣಜಿಗೂ ಲಾಯಕ್ ಇಲ್ವಾ ಸೂರ್ಯ?

ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್‌ನಿಂದ ಕಂಗೆಟ್ಟು ಹೋಗಿದ್ದಾರೆ. ಇದೀಗ ಇದೇ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಸೂರ್ಯಕುಮಾರ್ ಅವರನ್ನು ಮುಂಬೈ ತಂಡದಿಂದ ಗೇಟ್​ಪಾಸ್ ಕೊಡಲಾಗಿದೆ.

ಇದನ್ನೂ ಓದಿ:ವಿಂಡೀಸ್ ಬೆಂಡೆತ್ತಿದ ಜೈಸ್ವಾಲ್ – ಮೊದಲ ದಿನವೇ ಕೆರಿಬಿಯನ್ಸ್ ಗಲಿಬಿಲಿ!

ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದು, ಮುಂಬೈ ರಣಜಿ ತಂಡದಿಂದ ಕೈಬಿಡಲಾಗಿದೆ. ಸೂರ್ಯಕುಮಾರ್ ಅವರ ಬ್ಯಾಟ್ ಬಹಳ ಸಮಯದಿಂದ ಮೌನವಾಗಿದೆ. ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ 2025 ರ ಏಷ್ಯಾಕಪ್ ಗೆದ್ದಿದ್ದರೂ, ಸೂರ್ಯಕುಮಾರ್ ಯಾದವ್ ಗಮನಾರ್ಹ ಕೊಡುಗೆ ನೀಡುವಲ್ಲಿ ವಿಫಲರಾಗಿದ್ದಾರೆ. ಪರಿಣಾಮವಾಗಿ, ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಅವರ ಫಾರ್ಮ್ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ಇದೆಲ್ಲದರ ನಡುವೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಹೊಸ ರಣಜಿ ಟ್ರೋಫಿ ಸೀಸನ್ ಆರಂಭದ ಮೊದಲ ಪಂದ್ಯಕ್ಕೆ ಅವರನ್ನು ತಂಡದಿಂದ ಕೈಬಿಟ್ಟಿದೆ.

2025-26ರ ರಣಜಿ ಟ್ರೋಫಿ ಸೀಸನ್ ಅಕ್ಟೋಬರ್ 15 ರಂದು ಆರಂಭವಾಗಲಿದೆ. 42 ಬಾರಿಯ ರಣಜಿ ಟ್ರೋಫಿ ಚಾಂಪಿಯನ್ ಮುಂಬೈ ತಂಡವು ಜಮ್ಮು ಮತ್ತು ಕಾಶ್ಮೀರ ವಿರುದ್ಧ ಗುಂಪು ಹಂತದಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ, ಇದಕ್ಕಾಗಿ ಎಂಸಿಎ ಆಯ್ಕೆ ಸಮಿತಿಯು ಅಕ್ಟೋಬರ್ 10 ರ ಶುಕ್ರವಾರ 16 ಸದಸ್ಯರ ತಂಡವನ್ನು ಘೋಷಿಸಿತು. ಸೂರ್ಯಕುಮಾರ್ ಯಾದವ್ ಅವರನ್ನು ಈ ತಂಡದಲ್ಲಿ ಆಯ್ಕೆ ಮಾಡಲಾಗಿಲ್ಲ. ಸೂರ್ಯ ಅಕ್ಟೋಬರ್ 20 ರ ನಂತರ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಆದ್ದರಿಂದ, ಅವರಿಗೆ ವಿಶ್ರಾಂತಿ ನೀಡುವ ಕಾರಣಕ್ಕೆ ಈ ರೀತಿ ತಂಡದಿಂದ ಕೈ ಬಿಡಲಾಗಿದೆ ಎಂದು ಹೇಳಲಾಗಿದೆ. ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಟಿ20 ತಂಡಕ್ಕೆ ಆಯ್ಕೆಯಾಗಿರುವ ಶಿವಂ ದುಬೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

Sulekha