ವಿಂಡೀಸ್ ಬೆಂಡೆತ್ತಿದ ಜೈಸ್ವಾಲ್ – ಮೊದಲ ದಿನವೇ ಕೆರಿಬಿಯನ್ಸ್ ಗಲಿಬಿಲಿ!

ವಿಂಡೀಸ್ ಬೆಂಡೆತ್ತಿದ ಜೈಸ್ವಾಲ್ – ಮೊದಲ ದಿನವೇ ಕೆರಿಬಿಯನ್ಸ್ ಗಲಿಬಿಲಿ!

ಅರುಣ್ ಜೇಟ್ಲಿ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯ ಇಂದಿನಿಂದ ಶುರುವಾಗಿದ್ದು ಟಾಸ್ ಗೆದ್ದ ಭಾರತದ ನಾಯಕ ಶುಭ್​ಮನ್ ಗಿಲ್ ಫಸ್ಟ್ ಬ್ಯಾಟಿಂಗ್​ನ ಆಯ್ಕೆ ಮಾಡಿಕೊಂಡ್ರು. ಇಂಟ್ರೆಸ್ಟಿಂಗ್ ಅಂದ್ರೆ ಟೆಸ್ಟ್ ತಂಡದ ಕ್ಯಾಪ್ಟನ್ ಆದ ಮೇಲೆ ಗಿಲ್​ಗೆ ಇದು ಟಾಸ್​ನಲ್ಲಿ ಮೊದಲ ಗೆಲುವು. ಇಂಗ್ಲೆಂಡ್ ಸಿರೀಸ್​ನಲ್ಲಿ ಐದಕ್ಕೆ ಐದೂ ಮ್ಯಾಚ್​ಗಳಲ್ಲೂ ಟಾಸ್ ಸೋತಿದ್ರು. ಹಾಗೇ ವಿಂಡೀಸ್ ವಿರುದ್ಧದ ಫಸ್ಟ್ ಮ್ಯಾಚಲ್ಲೂ ಟಾಸ್ ಸೋತಿದ್ರು. ಇದೀಗ ನಾಯಕನಾಗಿ 7ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಚೂಸ್ ಮಾಡಿಕೊಂಡ್ರು. ಇನ್ನು ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11ನಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಅಂದ್ರೆ ಫಸ್ಟ್ ಮ್ಯಾಚಲ್ಲಿ ಇದ್ದವ್ರೇ ಇಲ್ಲೂ ಕೂಡ ಕಣಕ್ಕಿಳಿದಿದ್ದಾರೆ.

ಇದನ್ನೂ ಓದಿ : ವೀರೇಂದ್ರ ಪಪ್ಪಿ ಲಾಕರ್‌ ರಹಸ್ಯ! – ಶಾಸಕನ ಚಿನ್ನದ ಖಜಾನೆ ಕಂಡು ಬೆಚ್ಚಿಬಿದ್ದ ಅಧಿಕಾರಿಗಳು!

ಭಾರತದ ಪರ ಯಶಸ್ವಿ ಜೈಸ್ವಾಲ್ ಅದ್ಭುತ ಪ್ರದರ್ಶನ!

ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಇನ್ನಿಂಗ್ಸ್ ಓಪನ್ ಮಾಡಿದ್ರು. ಇಬ್ಬರ ಪಾಟ್ನರ್​ಶಿಪ್​ನಲ್ಲಿ 58 ರನ್ ಕಲೆ ಹಾಕಿದ್ರು. 54 ಎಸೆತಗಳಲ್ಲಿ 5 ಫೋರ್, 1 ಸಿಕ್ಸರ್​ನೊಂದಿಗೆ 38 ರನ್ ಗಳಿಸಿ ಸಾಲಿಡ್ ಫಾರ್ಮ್​ನಲ್ಲಿ ಕಾಣ್ತಿದ್ದ ರಾಹುಲ್ ಜೋಮೆಲ್ ವಾರಿಕನ್ ಬೌಲಿಂಗ್​ನಲ್ಲಿ ಸ್ಟಂಪ್ ಔಟ್​ ಆದ್ರು. ಫ್ರಾಕ್ಷನ್ಸ್ ಆಫ್ ಸೆಕೆಂಡ್​ನಲ್ಲೇ ವಿಕೆಟ್ ಉರುಳಿತ್ತು. ಆ ನಂತ್ರ ಜೊತೆಯಾದ ಸಾಯಿ ಸುದರ್ಶನ್ ಮತ್ತು ಜೈಸ್ವಾಲ್ ಜೋಡಿ ಭಾರತಕ್ಕೆ ಬಿಗ್ ಸ್ಕೋರ್ ಕಲೆ ಹಾಕಿದ್ರು. 193 ರನ್​ಗಳ ಜೊತೆಯಾಟವಾಡಿದ್ರು. ಒಂದ್ಕಡೆ ಜೈಸ್ವಾಲ್ ಸೆಂಚುರಿ ಕಂಪ್ಲೀಟ್ ಮಾಡಿಕೊಂಡ್ರೆ ಮತ್ತೊಂದ್ಕಡೆ ಸಾಯಿ ಸುದರ್ಶನ್ ಕೂಡ ಶತಕದತ್ತ ಸಾಗಿದ್ರು. ಬಟ್ ಬ್ಯಾಡ್​ಲಕ್ 87 ರನ್ ಗಳಿಸಿದ್ದ ಜೈಸ್ವಾಲ್ ಜೋಮೆಲ್ ವಾರಿಕನ್ ಬೌಲಿಂಗ್​ನಲ್ಲೇ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ರು. 13 ರನ್​ಗಳಿಂದ ಶತಕ ವಂಚಿತರಾದ್ರು. ಬಟ್ ಜೈಸ್ವಾಲ್ ಮಾತ್ರ ಕೆರೆಬಿಯನ್ ಬೌಲರ್​ಗಳನ್ನ ಅಕ್ಷರಶಃ ಬೆಂಡೆತ್ತಿದ್ರು.

ಟೆಸ್ಟ್ ಕ್ರಿಕೆಟ್ ನಲ್ಲಿ 7ನೇ ಶತಕ ಸಿಡಿಸಿದ ಜೈಸ್ವಾಲ್!

ಟೀಂ ಇಂಡಿಯಾದ ಟೆಸ್ಟ್ ಕ್ರಿಕೆಟ್​​ನಲ್ಲಿ ಓಪನಿಂಗ್​ನಲ್ಲೇ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಡ್ತಿರೋ ಜೈಸ್ವಾಲ್ ಮೊದಲ ದಿನದಾಟದಲ್ಲಿ ವಿಂಡೀಸ್ ಬೌಲರ್​ಗಳ ಬೆವರಿಳಿಸಿದ್ರು. ಬೌಂಡರಿ ಮೂಲಕವೇ ಖಾತೆ ತೆರೆದ ಎಡಗೈ ಬ್ಯಾಟರ್ ಜೈಸ್ವಾಲ್, 145 ಎಸೆತಗಳಲ್ಲಿ ಶತಕ ಕಂಪ್ಲೀಟ್ ಮಾಡಿದ್ರು. ಇದು ಅವ್ರ ಟೆಸ್ಟ್‌ ವೃತ್ತಿಜೀವನದ ಏಳನೇ ಶತಕವಾಗಿದೆ. ಅದೂ ಅಲ್ದೇ ಏಳು ಬೇರೆ ಬೇರೆ ಸ್ಟೇಡಿಯಂಗಳಲ್ಲಿ ಏಳು ಟೆಸ್ಟ್ ಶತಕ ಸಿಡಿಸಿದ್ದು ವಿಶೇಷವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಅತಿಹೆಚ್ಚು ಟೆಸ್ಟ್ ಶತಕ ಸಿಡಿಸಿದ ಆರಂಭಿಕ ಬ್ಯಾಟರ್‌ಗಳ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ ಎರಡನೇ ಸ್ಥಾನಕ್ಕೇರಿದ್ದಾರೆ. ಜೈಸ್ವಾಲ್, ಲಂಕಾದ ದಿಮುತ್ ಕರುಣರತ್ನೆ ಹಾಗೂ ಉಸ್ಮಾನ್ ಖವಾಜಾ ಹಿಂದಿಕ್ಕಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು 9 ಟೆಸ್ಟ್ ಶತಕ ಸಿಡಿಸಿದ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 23 ವರ್ಷದ ಜೈಸ್ವಾಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3000 ರನ್ ಗಳನ್ನೂ ಕಂಪ್ಲೀಟ್ ಮಾಡಿದ್ದಾರೆ. 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದ ಜೈಸ್ವಾಲ್ ಅಲ್ಲಿಂದ ಈಚೆಗೆ ರೆಡ್ ಬಾಲ್ ಫಾರ್ಮೆಟ್​ನಲ್ಲಿ ಬೆಸ್ಟ್ ಬ್ಯಾಟರ್ ಆಗಿದ್ದಾರೆ. 2022ರ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಯಾವುದೇ ಯುವ ಆಟಗಾರ ಜೈಸ್ವಾಲ್ ಅವರಿಗಿಂತ ಹೆಚ್ಚು ಶತಕ ಗಳಿಸಿಲ್ಲ.

5ನೇ ಬಾರಿ 150+ ರನ್ಸ್ ಕಲೆ ಹಾಕಿದ ಜೈಸ್ವಾಲ್!

ಯಶಸ್ವಿ ಜೈಸ್ವಾಲ್ ಅವ್ರ ಮೇನ್ ಸ್ಟ್ರೆಂಥ್ ಏನಂದ್ರೆ ಸೆಂಚುರಿ ಬಂತು ಅಂತಾ ಆ ನಂತ್ರ ಕೇರ್​ಲೆಸ್ ಮಾಡಲ್ಲ. ಮತ್ತಷ್ಟು ಬಿಗ್ ಸ್ಕೋರ್​ನತ್ತ ಇನ್ನಿಂಗ್ಸ್ ಕಂಟಿನ್ಯೂ ಮಾಡ್ತಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅವ್ರ ಕರಿಯರ್​ನ ರನ್ಸ್. ಟೆಸ್ಟ್ ನಲ್ಲಿ 7 ಶತಕ ಬಾರಿಸಿರೋ ಜೈಸ್ವಾಲ್ 5 ಸಲ 150+ ರನ್ಸ್ ಸ್ಕೋರ್ ಮಾಡಿದ್ದಾರೆ. 2023ರಲ್ಲಿ ವಿಂಡೀಸ್ ವಿರುದ್ಧದ ಡೆಬ್ಯೂ ಮ್ಯಾಚಲ್ಲೇ 171 ರನ್ಸ್ ಹೊಡೆದಿದ್ರು. ಆಮೇಲೆ ಇಂಗ್ಲೆಂಡ್ ವಿರುದ್ಧ 2024ರ ಜನವರಿಯಲ್ಲಿ 209ರನ್ಸ್, ಌಂಡ್ ಇಂಗ್ಲೆಂಡ್ ವಿರುದ್ಧವೇ 2024ರ ಫೆಬ್ರವರಿಯಲ್ಲಿ ಅಜೇಯ 214 ರನ್ಸ್, ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ 2024ರ ನವೆಂಬರ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ 161ರನ್ಸ್, ಇದೀಗ ವಿಂಡೀಸ್ ವಿರುದ್ಧ ಎರಡನೇ ಪಂದ್ಯದಲ್ಲಿ ಮೊದಲ ದಿನದಾಟದಲ್ಲಿ 173 ರನ್ ಗಳಿಸಿ ನಾಟೌಟ್ ಆಗಿ ಉಳಿದಿದ್ದಾರೆ. ಅಂದ್ರೆ ಜೈಸ್ವಾಲ್ ಒಂದ್ಸಲ ಸೆಟ್ ಆದ್ರೆ ಹೇಗೆ ಇಡೀ ಪಂದ್ಯವನ್ನ ಆವರಿಸಿಕೊಳ್ತಾರೆ ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್. ಫಸ್ಟ್ ಡೇ ಫಸ್ಟ್ ಬಾಲ್ ಫೇಸ್ ಮಾಡಿದ್ದ ಜೈಸ್ವಾಲ್ ದಿನದಾಟದ ಅಂತ್ಯದಲ್ಲಿ ಕೊನೇ ಬಾಲ್​ವರೆಗೂ ಕ್ರೀಸ್ ಕಚ್ಚಿ ನಿಂತು ಬ್ಯಾಟ್ ಬೀಸಿದ್ದು ಅವ್ರ ಸ್ಟ್ರೇಂಥ್ ಏನು ಅನ್ನೋದನ್ನ ತೋರಿಸುತ್ತೆ. ಸದ್ಯ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿರೋ ಜೈಸ್ವಾಲ್ ಟೆಸ್ಟ್ ಕ್ರಿಕೆಟ್​ನಲ್ಲಿ ಮೂರನೇ ಡಬಲ್ ಸೆಂಚುರಿ ಸಿಡಿಸೋ ನಿರೀಕ್ಷೆಯಲ್ಲಿದ್ದಾರೆ.

ಸದ್ಯ ಭಾರತ ಮೊದಲ ದಿನದಾಟದಲ್ಲಿ ಎರಡು ವಿಕೆಟ್ ನಷ್ಟಕ್ಕೆ 318 ರನ್​ಗಳನ್ನ ಕಲೆ ಹಾಕಿದೆ. 173 ರನ್​ಗಳೊಂದಿಗೆ ಜೈಸ್ವಾಲ್ ಹಾಗೇ 20 ರನ್​ಗಳೊಂದಿಗೆ ಯಶಸ್ವಿ ಜೈಸ್ವಾಲ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಎರಡನೇ ದಿನ ಬ್ಯಾಟಿಂಗ್ ಕಂಟಿನ್ಯೂ ಮಾಡ್ತಾರೆ. ಎರಡು ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಟೀಮ್ ಇಂಡಿಯಾ ಕೇವಲ ಎರಡೂವರೆ ದಿನಗಳಲ್ಲೇ ಸುಲಭವಾಗಿ ಗೆದ್ದುಕೊಂಡಿತು. ವೆಸ್ಟ್ ಇಂಡೀಸ್‌ನ ಬ್ಯಾಟ್ಸ್‌ಮನ್‌ಗಳಾಗಲಿ ಅಥವಾ ಬೌಲರ್‌ಗಳಾಗಲಿ, ಯಾರೂ ಕೂಡ ಫೈಟ್ ಕೊಟ್ಟಿರಲೇ ಇಲ್ಲ. ಇದೀಗ ಎರಡನೇ ಮ್ಯಾಚ್​ನ ಫಸ್ಟ್ ಡೇ ಸ್ಕೋರ್ ನೋಡಿದ್ರೆ ಭಾರತ ಇಲ್ಲೂ ಕೂಡ ಒನ್​ಸೈಡೆಡ್ ಆಗೇ ಮ್ಯಾಚ್ ಗೆಲ್ಲೋ ಎಲ್ಲಾ ಲಕ್ಷಣಗಳೂ ಇವೆ. ಆದ್ರೆ ನಾಳೆ ಇಡೀ ದಿನ ಬ್ಯಾಟಿಂಗ್ ಕಂಟಿನ್ಯೂ ಮಾಡ್ತಾರಾ ಅಥವಾ 400+ ಅಥವಾ 500 ಹತ್ರ ಹೋಗಿ ಡಿಕ್ಲೇರ್ ಘೋಷಣೆ ಮಾಡ್ತಾರಾ ಅಥವಾ ಆಲ್​ಔಟ್ ಆಗೋವರೆಗೂ ಬ್ಯಾಟ್ ಬೀಸ್ತಾರಾ ಅನ್ನೋದೇ ಈಗಿರೋ ಪ್ರಶ್ನೆ.

Shantha Kumari