ಸ್ಯಾಂಡಲ್‌ವುಡ್‌ ಹಿರಿಯ ನಟ ಉಮೇಶ್ ಸ್ಥಿತಿ ಗಂಭೀರ! – ಹಾಸ್ಯ ಕಲಾವಿದನಿಗೆ ಏನಾಯ್ತು?

ಸ್ಯಾಂಡಲ್‌ವುಡ್‌ ಹಿರಿಯ ನಟ ಉಮೇಶ್ ಸ್ಥಿತಿ ಗಂಭೀರ! – ಹಾಸ್ಯ ಕಲಾವಿದನಿಗೆ ಏನಾಯ್ತು?

ಸ್ಯಾಂಡಲ್‌ವುಡ್‌ನ ಹಿರಿಯ ಹಾಸ್ಯ ನಟ ಎಂ.ಎಸ್‌ ಉಮೇಶ್‌ (70) ಅವರು ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: 8 ದಿನದಲ್ಲಿ 509 ಕೋಟಿ ಕಲೆಕ್ಷನ್ ಮಾಡಿದ ಕಾಂತಾರ 1 – KGF, ಕಾಂತಾರ ದಾಖಲೆ ಉಡೀಸ್

ಹಿರಿಯ ನಟ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಶುಕ್ರವಾರ ಮನೆಯಲ್ಲಿ ಏಕಾಏಕಿ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಇದ್ರಿಂದಾಗಿ ಅವರ ಕಾಲು ಮುರಿದಿದೆ. ಕೂಡಲೇ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಂ.ಎಸ್‌ ಉಮೇಶ್‌ ಅವರು 1945ರ ಏಪ್ರಿಲ್‌ 24ರಂದು ಮೈಸೂರಿನಲ್ಲಿ ಜನಿಸಿದ ಅವರು, ಬಾಲ್ಯದಿಂದಲೇ ಅಭಿನಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ 4 ವರ್ಷ ವಯಸ್ಸಿನಲ್ಲೇ ಕಿರಣ್‌ ಹಿರಣ್ಣಯ್ಯರ ನಾಟಕ ಕಂಪನಿಯಲ್ಲಿ ತೊಡಗಿ, ನಂತರ ಗುಬ್ಬಿ ವೀರಣ್ಣರ ಕಂಪನಿಯಲ್ಲಿ ವಿವಿಧ ಪಾತ್ರಗಳನ್ನ ಅಲಂಕರಿಸಿದರು. 1960ರಲ್ಲಿ ಬಿಆರ್‌ ಪಂಥುಲು ನಿರ್ದೇಶನದ ʻಮಕ್ಕಳ ರಾಜ್ಯʼ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ಬಾಲನಟನಾಗಿ ಗಮನ ಸೆಳೆದರು. 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ, ವಿಶೇಷವಾಗಿ ಹಾಸ್ಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ತಮ್ಮ ಪಾತ್ರಕ್ಕಾಗಿ ಹಲವು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

Shwetha M