ಟ್ರಂಪ್ ಕನಸು ಭಗ್ನ – ಕೊರಿನಾ ಮಚಾಡೊಗೆ ಒಲಿದ ನೊಬೆಲ್‌ ಪ್ರಶಸ್ತಿ

ಟ್ರಂಪ್ ಕನಸು ಭಗ್ನ – ಕೊರಿನಾ ಮಚಾಡೊಗೆ ಒಲಿದ ನೊಬೆಲ್‌ ಪ್ರಶಸ್ತಿ

2025ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟವಾಗಿದೆ. ವೆನಿಜುವೆಲಾದ ಮಹಿಳಾ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾಡೊ ಅವರಿಗೆ 2025 ರ ನೊಬೆಲ್ ಪ್ರಶಸ್ತಿ ಲಭಿಸಿದೆ. ಈ ಬಾರಿ 338 ಮಂದಿ ನಾಮನಿರ್ದೇಶನಗೊಂಡಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಈ ಬಾರಿಯ ನೊಬೆಲ್‌ ಪ್ರಶಸ್ತಿ ರೇಸ್‌ನಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು. ಭಾರತದಿಂದ ಮದರ್ ತೆರೇಸಾ ಮತ್ತು ಕೈಲಾಸ್ ಸತ್ಯಾರ್ಥಿ ಪ್ರಶಸ್ತಿ ಪಡೆದಿದ್ದಾರೆ. ಪ್ರಶಸ್ತಿ ಮೊತ್ತ 10.38 ಕೋಟಿ ರೂ. ಆಗಿದೆ. ಪ್ರಶಸ್ತಿಯನ್ನು ವ್ಯಕ್ತಿಗಳು ಅಥವಾ ಸಂಸ್ಥೆಗಳು ಹಂಚಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ಮಾತು ಬಿಟ್ಟ ನಾಗ ಚೈತನ್ಯ ಮತ್ತು ಶೋಭಿತಾ – ದಂಪತಿ ಮಧ್ಯೆ ಬಂದಿದ್ಯಾಕೆ ಸಾಯಿ ಪಲ್ಲವಿ..!

ಬಹುನಿರೀಕ್ಷಿತ 2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟವಾಗಿದೆ. ವೆನೆಜುವೆಲಾದ ಜನರಿಗೆ ಪ್ರಜಾಪ್ರಭುತ್ವದ ಹಕ್ಕುಗಳನ್ನು ಉತ್ತೇಜಿಸುವ ಮತ್ತು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ನ್ಯಾಯಯುತ ಮತ್ತು ಶಾಂತಿಯುತ ಪರಿವರ್ತನೆಯನ್ನು ಸಾಧಿಸುವ ಅವರ ಹೋರಾಟಕ್ಕಾಗಿ ಮಾರಿಯಾ ಕೊರಿನಾ ಮಚಾಡೊ ಅವರಿಗೆ 2025 ರ ನೊಬೆಲ್ ಸಮಿತಿಯು ಪ್ರಶಸ್ತಿ ನೀಡಲಾಗಿದೆ. ಈ ಬಾರಿ ಒಟ್ಟು 338 ವ್ಯಕ್ತಿಗಳು ಮತ್ತು ಸಂಸ್ಥೆಗಳು 2025ರ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.

ಮರಿಯಾ ಕೊರಿನಾ ಮಚಾಡೊ ಪ್ಯಾರಿಸ್ಕಾಃ ವೆನೆಜುವೆಲಾದ ರಾಜಕಾರಣಿ ಮತ್ತು ಕೈಗಾರಿಕಾ ಎಂಜಿನಿಯರ್, ಅವರು ವೆನೆಜುವೆಲಾದ ಪ್ರಮುಖ ವಿರೋಧ ಪಕ್ಷದ ವ್ಯಕ್ತಿಯಾಗಿದ್ದಾರೆ. ಅವರು 2011 ರಿಂದ 2014 ರವರೆಗೆ ರಾಷ್ಟ್ರೀಯ ವಿಧಾನಸಭೆಯ ಚುನಾಯಿತ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಈ ಘೋಷಣೆಯೊಂದಿಗೆ, ಕಳೆದ ಕೆಲವು ದಿನಗಳಿಂದ ನೊಬೆಲ್ ಪ್ರಶಸ್ತಿ ಸ್ಪರ್ಧೆಯಲ್ಲಿ ತನ್ನ ಪರ ಹಕ್ಕು ಚಲಾಯಿಸುತ್ತಿದ್ದಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಕಾಣುತ್ತಿದ್ದ ನೊಬೆಲ್ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿದೆ.

Kishor KV