ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ದ್ವಿತೀಯ ಟೆಸ್ಟ್ ಪಂದ್ಯ – ಕನ್ನಡಿಗ ಕೆ.ಎಲ್ ರಾಹುಲ್ OUT

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ದ್ವಿತೀಯ ಟೆಸ್ಟ್ ಪಂದ್ಯ ಶುಕ್ರವಾರ ಬೆಳಗ್ಗೆ ಆರಂಭವಾಗಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಕ್ಯಾಪ್ಟನ್ ಶುಭ್ಮನ್ ಗಿಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಅಬ್ಬರಿಸಿದ ಕೆ.ಎಲ್ ರಾಹುಲ್ ಔಟಾಗಿದ್ದಾರೆ.
ಇದನ್ನೂ ಓದಿ:ನಾಯಕನಾಗಿ ಮೊದಲ ಟಾಸ್ ಗೆದ್ದ ಗಿಲ್ – WI ವಿರುದ್ಧ ಬ್ಯಾಟಿಂಗ್ ಆಯ್ದಕೊಂಡ IND
ವಿಂಡೀಸ್ ವಿರುದ್ಧದ ಟೆಸ್ಟ್ ಮ್ಯಾಚ್ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅರ್ಧಶತಕವನ್ನು ತಪ್ಪಿಸಿಕೊಂಡಿದ್ದಾರೆ. 38 ರನ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ಮರಳಿದರು.
ಕೆ.ಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿದು ವಿಂಡೀಸ್ ಬೌಲರ್ಗಳನ್ನು ಬೆಂಡೆತ್ತಲು ಆರಂಭಿಸಿದ್ದರು. ಇಬ್ಬರೂ ಕೂಡಾ ಭರ್ಜರಿ ಫಾರ್ಮ್ನಲ್ಲಿದ್ದರು. ಆಗ ವೆಸ್ಟ್ ಇಂಡೀಸ್ ನಾಯಕ ರೋಸ್ಟನ್ ಚೇಸ್ ಬುದ್ಧಿವಂತಿಕೆ ಯೂಸ್ ಮಾಡಿದರು. ಮೊದಲ ಸ್ಪಿನ್ ಬದಲಾವಣೆಗಾಗಿ ಜೋಮೆಲ್ ವಾರಿಕನ್ ಅವರನ್ನು ಕರೆತಂದರು, ಮತ್ತು ವಾರಿಕನ್ ತನ್ನ ಮೂರನೇ ಎಸೆತದಲ್ಲೇ ಚೆಂಡನ್ನು ಹೊಡೆದು ಕೆಎಲ್ ರಾಹುಲ್ ಅವರ ದೊಡ್ಡ ವಿಕೆಟ್ ಪಡೆದರು. ಇನ್ನೊಂದು ತುದಿಯಲ್ಲಿ ಯಶಸ್ವಿ ಜೈಸ್ವಾಲ್ ಅಷ್ಟೇ ನಿರಾಶೆಗೊಂಡಂತೆ ಕಾಣುತ್ತಿದ್ದರೆ, ರಾಹುಲ್ ಕ್ರೀಸ್ನಲ್ಲಿಯೇ ಇದ್ದು, ಏನಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಕೊನೆಗೂ ಕೆ.ಎಲ್ ಔಟಾಗುವ ಮೂಲಕ ನಿರಾಶೆ ಮೂಡಿಸಿದರು.

ನೋಡಿರಿ

