ನಾಯಕನಾಗಿ ಮೊದಲ ಟಾಸ್ ಗೆದ್ದ ಗಿಲ್ – WI ವಿರುದ್ಧ ಬ್ಯಾಟಿಂಗ್ ಆಯ್ದಕೊಂಡ IND

ಸರಣಿ ಕ್ಲೀನ್ಸ್ವೀಪ್ ಗುರಿ ಹೊಂದಿರುವ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ ಟಾಸ್ ಗೆದ್ದುಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇದು ನಾಯಕನಾಗಿ ಗಿಲ್ ಗೆದ್ದ ಮೊದಲ ಟಾಸ್ ಆಗಿದೆ. ಭಾರತ ತಂಡವು ಯಾವುದೇ ಬದಲಾವಣೆ ಇಲ್ಲದೇ ಕಣಕ್ಕಿಳಿಯಿತು. ವಿಂಡೀಸ್ ತನ್ನ ಆಡುವ ಬಳಗದಲ್ಲಿ ಎರಡು ಬದಲಾವಣೆ ಮಾಡಿದೆ.
ಇದನ್ನೂ ಓದಿ: ಶುಕ್ರವಾರ ಬೆಳಗ್ಗೆಯಿಂದಲೇ ಹಾಸನಾಂಬೆಯ ದರ್ಶನ – ಸಾರ್ವಜನಿಕರ ದರ್ಶನಕ್ಕೆ ಸಕಲ ವ್ಯವಸ್ಥೆ
ಇಂಗ್ಲೆಂಡ್ ಪ್ರವಾಸದಲ್ಲಿ ಅವರು ಎರಡು ಶತಕ ಮತ್ತು ಎರಡು ಅರ್ಧಶತಕ ದಾಖಲಿಸಿದ್ದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ತಮ್ಮ ಲಯಕ್ಕೆ ಮರಳಬೇಕಿದೆ. ಅಹಮದಾಬಾದ್ ಟೆಸ್ಟ್ನಲ್ಲಿಯೂ 36 ರನ್ ಮಾತ್ರ ಗಳಿಸಿದ್ದರು. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡುವ ತಂಡದಲ್ಲಿಯೂ ಸ್ಥಾನ ಪಡೆದಿರುವ ಯಶಸ್ವಿ ಲಯಕ್ಕೆ ಮರಳಬೇಕಿದೆ.
ಭಾರತದ ನೆಲದಲ್ಲಿ ವಿಂಡೀಸ್ 1994ರಲ್ಲಿ ಕೊನೆಯದಾಗಿ ಗೆದ್ದಿದ್ದು. ಅಲ್ಲಿಂದ ಇಲ್ಲಿಯವರೆಗೂ ಭಾರತದ ನೆಲದಲ್ಲಿ ಕೆರಿಬಿಯನ್ ಪಡೆ ಜಯದ ಮುಖವನ್ನೇ ನೋಡಿಲ್ಲ. 2002ರಲ್ಲಿ ಜಮೈಕಾದ ಸಬೀನಾ ಪಾರ್ಕ್ನಲ್ಲಿ ವಿಂಡೀಸ್ ಟೆಸ್ಟ್ ಜಯಿಸಿತ್ತು. ಅದರ ನಂತರ 26 ಟೆಸ್ಟ್ಗಳಲ್ಲಿ ಭಾರತ 16 ಜಯಿಸಿದೆ. ಉಳಿದವು ಡ್ರಾ ಆಗಿವೆ.
ಭಾರತ ಪ್ಲೇಯಿಂಗ್ 11 ಆಟಗಾರರು
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಧ್ರುವ ಜುರೆಲ್ (ವಿ.ಕೀ.), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11 ಆಟಗಾರರು
ಜಾನ್ ಕ್ಯಾಂಪ್ಬೆಲ್, ಟಗೆನರೈನ್ ಚಂದ್ರಪಾಲ್, ಅಲಿಕ್ ಅಥನಾಜೆ, ಶೈ ಹೋಪ್, ರೋಸ್ಟನ್ ಚೇಸ್ (ನಾಯಕ), ಟೆವಿನ್ ಇಮ್ಲಾಚ್ (ವಿಕೆಟ್ ಕೀಪರ್), ಜಸ್ಟಿನ್ ಗ್ರೀವ್ಸ್, ಜೋಮೆಲ್ ವಾರಿಕನ್, ಖಾರಿ ಪಿಯರೆ, ಆಂಡರ್ಸನ್ ಫಿಲಿಪ್, ಜೇಡನ್ ಸೀಲ್ಸ್.

ನೋಡಿರಿ

