RUN OUT ಮಾಡದೇ ರಂಪಾಟ – ಕಿರಿಕ್ PAK ವಿಶ್ವಕಪ್ ನಿಂದ ಔಟ್
ಪಾಕ್ ಟೀಂ ಸರ್ಜರಿ.. 12 ಜನ ಎಂಟ್ರಿ!

RUN OUT ಮಾಡದೇ ರಂಪಾಟ – ಕಿರಿಕ್ PAK ವಿಶ್ವಕಪ್ ನಿಂದ ಔಟ್ಪಾಕ್ ಟೀಂ ಸರ್ಜರಿ.. 12 ಜನ ಎಂಟ್ರಿ!

ಹಿಂದೆಲ್ಲಾ ಪಾಕಿಸ್ತಾನ ಕ್ರಿಕೆಟ್ ಟೀಂ ಅಂದ್ರೆ ವೆರಿ ಸ್ಟ್ರಾಂಗ್ ಅನ್ನಿಸ್ತಿತ್ತು. ಯಾಕಂದ್ರೆ ಆ ಟೈಮಲ್ಲಿ ಅವ್ರ ಪರ್ಫಾಮೆನ್ಸ್ ಹಾಗೇ ಇರ್ತಿತ್ತು. ಬಟ್ ಈಗ ಇವ್ರದ್ದೂ ಒಂದು ಟೀಮಾ ಅನ್ನೋ ಮಟ್ಟಿಗೆ ಫ್ಲ್ಯಾಪ್ ಶೋ ಕೊಡ್ತಿದ್ದಾರೆ. ಮೆನ್ಸ್ ಟೀಮ್​ನವ್ರು ಉತ್ತರನ ಪೌರುಷ ಒಲೆ ಮುಂದೆ ಅನ್ನೋ ಹಾಗೇ ಕ್ರಿಕೆಟ್ ಶಿಶುಗಳ ಎದುರಲ್ಲಷ್ಟೇ ಅವ್ರ ಪವರ್. ಇನ್ನು ಗರ್ಲ್ಸ್ ಟೀಮ್​ನವ್ರದ್ದೂ ಅದೇ ಕಥೆ. ಬಟ್ ಎರಡೂ ತಂಡಗಳಲ್ಲಿರೋ ಸೇಮ್ ಥಿಂಗ್ ಏನಂದ್ರೆ ಆನ್ ಫೀಲ್ಡ್ ಕಿರಿಕ್. ಏಷ್ಯಾಕಪ್​ನಲ್ಲಿ ಬಾಯ್ಸ್ ಟೀಂ ಏನೆಲ್ಲಾ ದೌಲತ್ತು ತೋರಿಸಿದ್ರು ಅನ್ನೋದು ನಿಮ್ಗೆಲ್ಲಾ ಗೊತ್ತೇ ಇದೆ. ಈಗ ಐಸಿಸಿ ವುಮೆನ್ಸ್ ವಿಶ್ವಕಪ್​ನಲ್ಲೂ ಗರ್ಲ್ಸ್ ಟೀಂ ಹೀಗೆಯೇ ಸಾಲು ಸಾಲು ಅವಾಂತರಗಳನ್ನ ಮಾಡ್ಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧದ ಮ್ಯಾಚಲ್ಲೂ ಮೊದ್ಲೇ ಬಿಲ್ಡಪ್ ತಗೊಂಡು ಆಮೇಲೆ ಇಂಗು ತಿಂದ ಮಂಗನಂತಾಗಿದ್ದಾರೆ.

ಇದನ್ನೂ ಓದಿ : ಕೆಎಲ್ ರಾಹುಲ್‌ಗೆ ಕ್ಯಾಪ್ಟನ್ ಯೋಗ ಸಿಕ್ಕಿಲ್ಲ ಯಾಕೆ? – ಕನ್ನಡಿಗನ ದುರಾದೃಷ್ಟನಾ.. ಅಜಾತಶತ್ರುವಾಗಿದ್ದೇ ತಪ್ಪಾಯ್ತಾ?

ಸತತ ಮೂರನೇ ಸೋಲು.. ಸೆಮಿಫೈನಲ್ಸ್ ನಿಂದ ಹೊರಬಿದ್ದ ಪಾಕ್!

2025ರ ಐಸಿಸಿ ವುಮೆನ್ಸ್ ವಿಶ್ವಕಪ್​ ಟೂರ್ನಿಯ 9ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ವು. ಶ್ರೀಲಂಕಾದ ಆರ್​. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ಹೀನಾಯವಾಗಿ ಸೋಲು ಕಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಬ್ಯಾಕ್ ಟು ಬ್ಯಾಕ್ ವಿಕೆಟ್​ಗಳನ್ನ ಕಳ್ಕೊಂಡಿತ್ತು. 76 ರನ್​ಗಳಿಗೆ 7 ವಿಕೆಟ್. ಸೋ ಆಸೀಸ್ ಟೀಮ್​ನವ್ರು 100 ಕೂಡ ಕಂಪ್ಲೀಟ್ ಮಾಡ್ದಂಗೆ ಆಲೌಟ್ ಆಗ್ತಾರೇನೋ ಅನ್ಕೊಂಡು ಪಾಕಿಸ್ತಾನಿ ಗರ್ಲ್ಸ್ ಆಲ್ರೆಡಿ ಸೆಲೆಬ್ರೇಷನ್ ಮೋಡ್​ನಲ್ಲಿದ್ರು. ಬಟ್ ಆಸೀಸ್ ಪರ ಬೆಥ್ ಮೂನಿ ಕ್ರೀಸ್ ಕಚ್ಚಿ ನಿಂತು ಪಾಕಿಸ್ತಾನಿಯರ ಬೆವರಿಳಿಸಿ ಸೆಂಚುರಿ ಬಾರಿಸಿದ್ರು. 115 ರನ್​ಗಳಿಗೆ 8 ವಿಕೆಟ್ ಕಳ್ಕೊಂಡವ್ರು 50 ಓವರ್​ ಮುಕ್ತಾಯದ ವೇಳೆಗೆ 9 ವಿಕೆಟ್ ನಷ್ಟಕ್ಕೆ 221 ರನ್​ಗಳನ್ನ ಕಲೆ ಹಾಕಿದ್ರು. 222 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಪಾಕಿಸ್ತಾನಿ ಆಟಗಾರ್ತಿಯರು 114 ರನ್​​ಗಳಿಗೆ ಆಲೌಟ್ ಆದ್ರು. ಈ ಮೂಲಕ ಟೂರ್ನಿಯಲ್ಲಿ ಸತತ ಮೂರನೇ ಮ್ಯಾಚ್​ನೂ ಸೋತು ಸೆಮಿಫೈನಲ್ ರೇಸ್​​ಗೆ ಗುಡ್ ಬೈ ಹೇಳಿದ್ರು.

ರನ್ ಔಟ್ ಮಾಡದೇ ಅಂಪೈರ್ ಜೊತೆ ಫಾತಿಮಾ ಕಿರಿಕ್!

ಇನ್ನು ಪಾಕಿಸ್ತಾನಿಯರು ಆಟಕ್ಕಿಂತ ಜಾಸ್ತಿ ಹುಚ್ಚಾಟ ಮಾಡೋದ್ರಲ್ಲಿ ಫೇಮಸ್ ಅನ್ನೋದು ನಿಮ್ಗೂ ಗೊತ್ತು. ಆಸ್ಟ್ರೇಲಿಯಾ ವಿರುದ್ಧದ ಮ್ಯಾಚಲ್ಲೂ ಅದೇ ಆಯ್ತು. ಆಸ್ಟ್ರೇಲಿಯಾ ತಂಡ 78 ರನ್​ಗಳಿಗೆ 7 ವಿಕೆಟ್ ಕಳ್ಕೊಂಡಿದ್ದಾಗ 8ನೇ ವಿಕೆಟ್ ಪಡೆಯೋಕೆ ಪಾಕಿಸ್ತಾನಕ್ಕೆ ಒಂದೊಳ್ಳೆ ಚಾನ್ಸ್ ಕ್ರಿಯೇಟ್ ಆಗಿತ್ತು. 28ನೇ ಓವರ್​ನ ಐದನೇ ಎಸೆತದಲ್ಲಿ , ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಬೆತ್ ಮೂನಿ ಡೀಪ್ ಮಿಡ್‌ವಿಕೆಟ್ ಕಡೆಗೆ ಶಾಟ್ ಹೊಡೆದು 2 ರನ್​ಗಾಗಿ ಓಡಿದ್ರು. ಈ ವೇಳೆ ನಾನ್​ ಸ್ಟ್ರೈಕ್​ನಲ್ಲಿದ್ದ ಕಿಮ್ ಗಾರ್ತ್ ಅವರನ್ನು ರನೌಟ್ ಮಾಡೋ ಅವಕಾಶವಿತ್ತು. ಎರಡನೇ ರನ್ ಓಡುವಾಗ ಫೀಲ್ಡರ್ ಚೆಂಡನ್ನು ಫಾತಿಮಾ ಸನಾ ಅವರ ಕೈಗೆ ಎಸೆದರು. ವಿಕೆಟ್ ಮುಂದೆ ಇದ್ದ ಫಾತಿಮಾ ಬಾಲ್ ಹಿಡಿದು ಸ್ಟಂಪ್‌ಗಳಿಗೆ ಹೊಡ್ಯೋಕೆ ಟ್ರೈ ಮಾಡಿದ್ರು. ಬಟ್ ಚೆಂಡನ್ನು ಸ್ಟಂಪ್‌ಗೆ ತಾಗಿಸಲೇ ಇಲ್ಲ. ಅಷ್ಟ್ರಲ್ಲಿ ಗಾರ್ತ್ ಕ್ರೀಸ್‌ಗೆ ಬಂದಾಗಿತ್ತು. ಹೀಗಿದ್ರೂ ಫಾತಿಮಾ ಔಟ್​ಗಾಗಿ ಅಂಪೈರ್​ರತ್ತ ನೋಡಿದ್ರು. ಆದ್ರೆ ಅಂಪೈರ್ ನಾಟೌಟ್ ಎಂದರು. ಈ ವೇಳೆ ಪಾಕಿಸ್ತಾನಿ ಆಟಗಾರ್ತಿಯರು ಮತ್ತು ಅಂಪೈರ್ ನಡುವೆ ಕೆಲಕಾಲ ವಾಗ್ವಾದ ನಡೀತು.

ಭಾರತದ ವಿರುದ್ಧದ ಪಂದ್ಯದಲ್ಲೂ ಕ್ಯಾತೆ ತೆಗೆದಿದ್ದ ಪಾಕಿಗಳು!

ಇನ್ನು ಕಳೆದ ಭಾನುವಾರ ಭಾರತ ಮತ್ತು ಪಾಕ್ ವುಮೆನ್ಸ್ ಟೀಂ ಫೈಟ್ ವೇಳೆಯೂ ಪಾಕಿಸ್ತಾನಿಯರು ಕಿರಿಕ್ ತೆಗೆದಿದ್ರು. 4ನೇ ಓವರ್​ನ ಕೊನೇ ಎಸೆತದಲ್ಲಿ ಪಾಕ್ ಆರಂಭಿಕ ಆಟಗಾರ್ತಿ ಮುನೀಬಾ ಅಲಿಯವ್ರ ಪ್ಯಾಡ್ ಸವರಿ ಬಾಲ್ ಪಾಸ್ ಆಗಿತ್ತು. ಈ ವೇಳೆ ಟೀಮ್ ಇಂಡಿಯಾ ಆಟಗಾರ್ತಿಯರು ಎಲ್​ಬಿಡಬ್ಲ್ಯೂಗೆ ಮನವಿ ಮಾಡಿದ್ದರು. ಆದರೆ ಅಂಪೈರ್ ಔಟ್ ನೀಡಿರಲಿಲ್ಲ. ಈ ವೇಳೆ ದೀಪ್ತಿ ಶರ್ಮಾ ಚೆಂಡನ್ನು ಸ್ಟಂಪ್ಸ್​ಗೆ ಎಸೆದಿದ್ರು.  ಚೆಂಡು ವಿಕೆಟ್​ಗೆ ತಗುಲಿದಾಗ ಮುನೀಬಾ ಕ್ರೀಸ್​ನಿಂದ ಹೊರಗಿದ್ದರು. ಅಲ್ಲದೆ ಕ್ರೀಸ್​ನಲ್ಲಿಟ್ಟ ಬ್ಯಾಟ್ ಗಾಳಿಯಲ್ಲಿತ್ತು. ಕೊನೆಗೆ ಮೂರನೇ ಅಂಪೈರ್ ಔಟ್ ಎಂದರು. ಆದ್ರೆ ಇದು ನಾಟ್ ಫೇರ್ ಅಂತಾ ಪಾಕ್ ನಾಯಕಿ ಅಂಪೈರ್ ಜೊತೆ ವಾಗ್ವಾದ ನಡೆಸಿದ್ರು. ಅಷ್ಟೇ ಅಲ್ದೇ ಪಾಕ್ ಸ್ಪಿನ್ನರ್ ನಶ್ರಾ ಸಂಧು ಟೀಂ ಇಂಡಿಯಾ ಕ್ಯಾಪ್ಟನ್ ಹರ್ಮನ್ ಪ್ರೀತ್ ಕೌರ್ ಮೇಲೆ ಕೆಂಗಣ್ಣು ಬೀರಿದ್ಲು. ಸಂಧು ಬೌಲಿಂಗ್​ನಲ್ಲಿ ಹರ್ಮನ್ ಡಿಫೆನ್ಸಿವ್ ಆಗಿ ಆಡಿದ್ದು ಆ ಬಾಲ್ ಸಂಧು ಕಡೆಯೇ ಬಂದಿತ್ತು. ಈ ಟೈಮಲ್ಲಿ ಚೆಂಡನ್ನು ಸಿಟ್ಟಿನಿಂದ ಹರ್ಮನ್ ಪ್ರೀತ್ ಕೌರ್ ಕಡೆ ಎಸೆಯುವಂತೆ ಆ್ಯಕ್ಷನ್ ಮಾಡಿದರು. ಅಲ್ಲದೆ ದೊಡ್ಡದಾಗಿ ಕಣ್ಣು ಬಿಡ್ಡುತಾ ಹರ್ಮನ್ ಪ್ರೀತ್ ಕೌರ್ ರನ್ನು ಗುರಾಯಿಸಿದ್ರು. ಬಟ್ ಕ್ಲೈಮ್ಯಾಕ್ಸ್​ನಲ್ಲಿ ಌಸ್ ಯೂಶ್ಯುಯಲ್ ಮ್ಯಾಚ್ ಗೆಲ್ಲೋಕೆ ಆಗ್ದೇ ಶೇಪ್ ಔಟ್ ಆಗಿ ಗ್ರೌಂಡ್​ನಿಂದ ಹೊರ ಹೋಗಬೇಕಾಯ್ತು. ಇದು ಗರ್ಲ್ಸ್ ಕಥೆಯಾದ್ರೆ ಅತ್ತ ಬಾಯ್ಸ್ ಟೀಮ್​ನಲ್ಲಿ ಮೇಜರ್ ಸರ್ಜರಿಯೇ ಆಗ್ತಿದೆ.

ಭಾರತದ ಎದುರು ಹೀನಾಯ ಸೋಲು.. ಪಾಕ್ ತಂಡಕ್ಕೆ ಮೇಜರ್ ಸರ್ಜರಿ!

ಏಷ್ಯಾಕಪ್​ನಲ್ಲಿ ಭಾರತದ ಎದುರು ಮೂರಕ್ಕೆ ಮೂರೂ ಮ್ಯಾಚ್​ಗಳನ್ನ ಸೋತಿರೋ ಪಾಕಿಸ್ತಾನದ ಮೆನ್ಸ್ ಟೀಮ್​ನಲ್ಲಿ ಮೇಜರ್ ಸರ್ಜರಿಗಳಾಗ್ತಿವೆ. ಅಕ್ಟೋಬರ್ 12ರಿಂದ ಸೌತ್ ಆಫ್ರಿಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಸರಣಿಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ 12 ಅನುಭವಿಗಳನ್ನು ತಂಡಕ್ಕೆ ಸೇರಿಸಿಕೊಂಡಿದೆ. ಹೊಸ ಕೋಚಿಂಗ್ ಸಿಬ್ಬಂದಿಯನ್ನು ಘೋಷಿಸಿದೆ. ವಿಶೇಷವಾಗಿ 2025-27ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಉತ್ತಮ ರೀತಿಯಲು ಪ್ರಾರಂಭಿಸಲು ತಯಾರಿ ನಡೆಸುತ್ತಿರುವ ಪಾಕ್ ಮಂಡಳಿ, ಮಾಜಿ ಆಲ್‌ರೌಂಡರ್ ಅಜರ್ ಮಹಮೂದ್ ಅವರನ್ನು ರೆಡ್ -ಬಾಲ್ ತಂಡದ ಮುಖ್ಯ ಕೋಚ್ ಆಗಿ ನೇಮಿಸಿದೆ. ಹೀಗೆ 12 ಮಂದಿಗೂ ಹೊಸ ಹೊಸ ಜವಾಬ್ದಾರಿ ನೀಡಿ ಹಳಿ ತಪ್ಪಿರುವ ತಂಡವನ್ನ ಮತ್ತೆ ಟ್ರ್ಯಾಕ್​ಗೆ ತರೋಕೆ ಏನೇನೋ ಕಸರತ್ತು ನಡೆಸ್ತಿದೆ. ಆದ್ರೆ ಅಲ್ಲಿನ ಆಟಗಾರರು ಆಟದ ಮೇಲೆ ಫೋಕಸ್ ಮಾಡೋದು ಬಿಟ್ಟು ಸ್ಲೆಡ್ಜಿಂಗ್​ನಲ್ಲೇ ಕಳ್ದೊಗಿದ್ದಾರೆ. ಮೊದ್ಲು ಅದನ್ನ ಸರಿ ಮಾಡ್ಬೇಕು.

Shantha Kumari