ದೈವಾರಾಧಕರು Vs ಕಾಂತಾರ -ದೈವಕ್ಕೆ ಅಪಚಾರ ಮಾಡಿದ್ಯಾರು?
ದೈವಕ್ಷೇತ್ರದಲ್ಲೇ ಶಿಕ್ಷೆ ಆಗುತ್ತಾ?

ದೈವಾರಾಧಕರು Vs ಕಾಂತಾರ -ದೈವಕ್ಕೆ ಅಪಚಾರ ಮಾಡಿದ್ಯಾರು?ದೈವಕ್ಷೇತ್ರದಲ್ಲೇ ಶಿಕ್ಷೆ ಆಗುತ್ತಾ?

ಕಾಂತಾರ ಚಾಪ್ಪರ್ 1 ಬಾಕ್ಸ್ ಆಫೀಸ್‌ನಲ್ಲಿ ಧೊಳೆಬ್ಬಿಸುತ್ತಿದೆ. ಪ್ರೇಕ್ಷಕರ ಮನಗೆದ್ದು ಭರ್ಜರಿ ಕಲೆಕ್ಷನ್ ಮಾಡ್ತಿದೆ. ಈ ಸಿನಿಮಾ ಮಾಡೋಕೆ ರಿಷಭ್ ಶೆಟ್ಟಿ ಎಷ್ಟು ಕಷ್ಟ ಪಟ್ಟಿದ್ದಾರೆ.. ಎಷ್ಟು ಭಕ್ತಿಯಿಂದ ಮಾಡಿದ್ದಾರೆ ಅನ್ನೋದು ಸಿನಿಮಾ ನೋಡಿದ್ರೆ ಗೊತ್ತಾಗುತ್ತೆ.. ಬಟ್ ಕೆಲ ಹುಚ್ಚು ಪ್ರೇಕ್ಷಕರು ಲೈಕ್ ಕಮೆಂಟ್ಸ್‌ಗಾಗಿ ಥಿಯೇಟರ್‌ನಲ್ಲಿ ಬ್ಯಾಡದ ಕೆಲಸಗಳನ್ನ ಮಾಡ್ತಿದ್ದಾರೆ. ವೈರಲ್ ಆಗ್ಬೇಕು, ನನಗೆ ಲೈಕ್ ಕಮೆಂಟ್ಸ್ ಬರ್ಬೇಕು ಅಂತ ಕಾಂತಾರ ಸಿನಿಮಾ ನೋಡ್ತಾ ದೈವ ಬಂದ ಹಾಗೇ ನಟನೆ ಮಾಡ್ತಿದ್ದಾರೆ. ಅದ್ರಂತೆ ಕೂಗುತ್ತಿದ್ದಾರೆ. ದೇವರ ವಿಷ್ಯದಲ್ಲಿ ಹುಚ್ಚಾಟ ನಡೆಸಿತ್ತಿದ್ದಾರೆ.. ಇದು ಕಾಂತಾರ ಮೊದಲ ಸಿನಿಮಾ ಬಂದಾಗಲು ಹೀಗೆ ಆಗಿತ್ತು. ರಿಷಭ್ ಈ ತರ ಬೇಡಿ ದೈವಗಳಿಗೆ ಅವಮಾನ ಮಾಡಬೇಡಿ ಅಂತ ಹೇಳಿದ್ರು.ಬಟ್ ಕಾಂತಾರ ಚಾಪ್ಪರ್‌1ನಲ್ಲೂ ಕೂಡ ಕೆಲ ಪ್ರೇಕ್ಷಕರು ಅದ್ದನ್ನೇ ರಿಪೀಟ್ ಮಾಡಿದ್ದು.. ಕಾಂತಾರ ಸಿನಿಮಾದ ಮೇಲೆ ಕರಾವಳಿ ದೈವ ನರ್ತಕರು ದೈವಾರಾಧಕರು ತಿರುಗಿ ಬಿದ್ದಿದ್ದಾರೆ.. ಇದುದೈವದ ಮುಂದೆ ತೀರ್ಮಾನ ಆಗಲಿ ಅಂತ ದೈವಾರಾಧಕರು ದೇವರ ಮೊರೆ ಹೊಗೋಕೆ ನಿರ್ಧರ ಮಾಡಿದ್ದಾರೆ.

ಇದನ್ನೂ ಓದಿ: ಬಿಸಿಸಿಐ ಅಧ್ಯಕ್ಷನ ಜೊತೆ ವೀರೇಂದ್ರ ಸೆಹ್ವಾಗ್ ಪತ್ನಿಗೆ ಆಫೇರ್? – ಗೆಳೆಯ ವೀರುಗೆ ಮಿಥುನ್ ನಂಬಿಕೆ ದ್ರೋಹ?

ಕಾಂತಾರದಲ್ಲಿ ದೈವಗಳ ದರ್ಶನ ನೋಡಿ ಸಾಕಷ್ಟು ಪ್ರೇಕ್ಷಕರು ಮನ ಸೋತಿದ್ದಾರೆ. ದೈವಗಳ ಶಕ್ತಿ ಏನು ಅನ್ನೋದು ಇಡೀ ಪ್ರಪಂಚಕ್ಕೆ ಗೊತ್ತಾಗಿದೆ.. ಹಾಗಂತ ಕಾಂತಾರ ಬರೋ ಮುಂಚೆ ದೈವಗಳ ಶಕ್ತಿ ಕಮ್ಮಿ ಇತ್ತು ಅಂತ ಅಲ್ಲ. ಕರಾವಳಿಯಲ್ಲಿ ದೈವಗಳು ತನ್ನದೇ ಆದ ಶಕ್ತಿಯನ್ನ ಹೊಂದಿವೆ.. ಸಾವಿರಾರು ವರ್ಷಗಳಿಂದ ದೈವದ ಸೇವೆಮಾಡಿಕೊಂಡು ಇಲ್ಲಿನ ಜನ ಇದ್ದಾರೆ. ಕಾಂತಾರದ ಮೂಲಕ ಕರ್ನಾಟಕದ ಕರಾವಳಿ ದೈವದ ಶಕ್ತಿ ಏನು ಅನ್ನೋದು ಇಡೀ ವಿಶ್ವಕ್ಕೆ ಗೊತ್ತಾಗಿದೆ ಅಷ್ಟೇ. ಆದ್ರೆ ಈ ಕಾಂತಾರ ಕಾಂಟ್ರವರ್ಸಿಗೆ ಕಾರಣವಾಗಿದೆ.  ಸಿನಿಮಾ 400 ಕೋಟಿಗೂ ಹೆಚ್ಚು ಗಳಿಕೆ ಕಂಡು ಮುನ್ನುಗ್ಗುತ್ತಿದೆ. ಆದ್ರೆ ಕೆಲ ಪ್ರೇಕ್ಷಕರ ಹುಚ್ಚಾಟದಿಂದ ಸಿನಿಮಾದ ಮೇಲೆ ದೈವರಾಧಕರು ಸಿಟ್ಟಾಗಿದ್ದಾರೆ.

ಆರಂಭದಿಂದಲೂ ಸಾಕಷ್ಟು ಸಂಕಷ್ಟಗಳನ್ನ ಹೆದುರಿಸಿರೋ ರಿಷಬ್ ರ ಸಿನಿಮಾಕ್ಕೆ ದೈವದ ಅಭಯ ಸಿಕ್ಕಿತ್ತು. ಸಿನಿಮಾಕ್ಕೆ ನನ್ನ ಅಭಯವಿದೆ ಅಂತ ನುಡಿದಿದ್ದ ದೈವ ಅದೇ ರೀತಿ ಸಂಕಷ್ಟಗಳಿಂದ ಪಾರು ಮಾಡಿ ಅಂದುಕೊಂಡ ಸಮಯಕ್ಕೆ ಥಿಯೆಟರ್ ಗೆ ಬರುವಂತೆ ಮಾಡಿತ್ತು.  ಆದರೆ ಸಿನಿಮಾ ರಿಲೀಸ್ ಆದ ಮೇಲೆ ಕೆಲವರಿಂದ ರಿಷಭ್‌ಗೆ  ಸಂಕಟ ಎದುರಾಗಿದೆ. ಕೆಲವರು ಸಿನಿಮಾ ನೋಡಿ ದೈವ ಬಂದಂತೆ ಹುಚ್ಚಾಟ ನಡೆಸುತ್ತಿದ್ದಾರೆ.

ಕಾಂತಾರ 1ನಲ್ಲಿ ದೈವದ ಆಚರಣೆ ಜಾಸ್ತಿನೇ ಇದೆ. ಇದ್ದಕ್ಕೂ ಮುಂಚೆ ಮುಂಚೆ ಕಾಂತಾರ ಬಂದಾಗಲು ರಿಷಬ್ ರ ಕ್ಲೈಮಾಕ್ಸ್ ನಟನೆಯ ಆ ಸೀನ್ ಜೊತೆಗೆ ಆ ಧ್ವನಿಯನ್ನ ಸಾಕಷ್ಟು ಮಂದಿ ಸೋಷಿಯಲ್ ಮಿಡಿಯಾದಲ್ಲಿ ಕಾಪಿ ಮಾಡಿದ್ದರು. ಆಗಲೂ ಕೂಡ ಆ ರೀತಿ ಧ್ವನಿಯನ್ನ ಅನುಕರಣೆ ಮಾಡಬೇಡಿ ಅನ್ನೋ ಸಂದೇಶವನ್ನ ಕೊಡಲಾಗಿತ್ತು. ಆದ್ರೀಗ ಮತ್ತೊಮ್ಮೆ ಕಾಂತಾರ 1 ರಲ್ಲಿ ದೈವ ನರ್ತಕರ ವೇಷ ಧರಿಸಿ ಥಿಯೆಟರ್ ಗೆ ಬರೋದು ಮಾತ್ರಲ್ಲ ಸಿನಿಮಾನೋಡ್ತಾ ದೈವ ಮೈಮೇಲೆ ಬಂದಂಗಾಡೋದು  ದೈವ ನರ್ತಕರು ಮತ್ತು ದೈವಾರಾಧಕರ ಕೆಂಗಣ್ಣಿಗೆ ಕಾರಣವಾಗಿದೆ. ನೋಡಿ ಸಿನಿಮಾ ನೋಡೋಕು ಯಾರ ಮೇಲೂ ಕೂಡ ದೈವ ಬರಲ್ಲ.. ಅದ್ದಕ್ಕೆ ತನ್ನದೇ ಆದ ಆಚರಣೆ ಇದೆ, ಭಕ್ತಿ ಇದೆ, ಶಕ್ತಿ ಇದೆ.. ರಿಷಭ್ ಕೂಡ ಈ ಸಿನಿಮಾ ಮಾಡೋಕೆ ಮುಂಚೆ ದೈವಗಳಿಗೆ ಹಾಗೂ ಆಚರಣೆಗಳಿಗೆ ಯಾವುದೇ ತೊಂದ್ರೆ ಆಗದಂತೆ.. ತಮ್ಮಿಂದ ಕಳಂಕ ಬರದಂತೆ ಸಿನಿಮಾ ಮಾಡಿದ್ದಾರೆ. ದೈವದ ಆಶೀರ್ವಾದ ಇದ್ದಿದ್ದಕ್ಕೆ ಇವತ್ತು ಕಾಂತಾರ ಸಕ್ಸಸ್ ಆಗಿದೆ. ಒಂದು ವೇಳೆ ರಿಷಭ್ ತಪ್ಪು ಮಾಡಿದ್ರೆ, ಇವತ್ತು ಕಾಂತಾರ ಈ ಮಟ್ಟಿಗೆ ಹಿಟ್ ಆಗ್ತಾ ಇರಲಿಲ್ಲ.. ಹೀಗಿರುವಾದ ಥಿಯೇಟರ್‌ನಲ್ಲಿ ದೈವದ ವೇಷ ಹಾಕೋದು, ದೈವ ಬದಂತೆ ಮಾಡೋದು ಎಷ್ಟು ಸರಿ.. ಕರಾವಳಿಯಲ್ಲಿ ದೈವ ನರ್ತಕರ ಮೇಲೆ ದೈವ ಬರಬೇಕಾದ್ರೆ, ಅಲ್ಲಿರೋ ದೈವದ ಆಶೀರ್ವಾದ ಬೇಕಾಗುತ್ತೆ. ದೈವಗಳನ್ನ ಪ್ರತಿಷ್ಠಾಪನೆ ಮಾಡಿರೋ ಕಲ್ಲಿನಿಂದ ಸಿಂಗಾರದ ಹೂವುನ್ನ ಕೊಟ್ಟು ನಂತ್ರ ದೈವ ಅವರ ಮೇಲೆ ಬರುತ್ತೆ. ಹೀಗಿರುವಾಗ ನನದೆ ಸಿನಿಮಾ ನೋಡ್ತಾ ದೈವ ಬಂತು ಅಂತ ಹುಚ್ಚು ಹುಚ್ಚಾಗಿ ಕುಣಿಯೋದು ಎಷ್ಟು ಸರಿ.. ನೀವು ಮಾಡೋ ಹುಚ್ಚ ತನ ದಿಂದ ರಿಷಭ್ ಮೇಲೆ ಎಫೆಕ್ಟ್ ಬೀಳುವಂತೆ ಮಾಡಿದೆ.

ಸಿನಿಮಾ ರಿಲೀಸ್ ಆದಾಗ ಯಾರು ಕೂಡ ಕಾಂತಾರ ಬಗ್ಗೆ ಏನೂ ಮಾತನಾಡಿಲ್ಲ. ಆದ್ರೆ ಪ್ರೇಕ್ಷಕರ ಹುಚ್ಚಾಟದ ನಂತ್ರ ಕಾಂತಾರ ಸಿನಿಮಾ ಮೇಲೆ ದೈವ ನರ್ತಕರು ಮತ್ತು ದೈವಾರಾಧಕರು ತಿರುಗಿ ಬಿದ್ದಿದ್ದಾರೆ. ‘ಕಾಂತಾರ’ ಸಿನಿಮಾನಲ್ಲಿ ದೈವಾರಾಧನೆಯನ್ನು ಬಳಕೆ ಮಾಡಿರುವುದಕ್ಕೆ ಹಾಗೂ ಸಿನಿಮಾನಲ್ಲಿ ಪಂಜುರ್ಲಿ, ಗುಳಿಗ ಮತ್ತುಪಿಲಿ ದೈವಗಳ ಬಳಕೆ ಮಾಡಿರುವುದಕ್ಕೆ, ದೈವದ ಆವೇಶ ಮತ್ತು ದೈವ ನರ್ತನದ ಬಳಕೆಯ ಬಗ್ಗೆ ದೈವಾರಾಧಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ದೈವಾರಾಧಕರು ಸಿನಿಮಾದ ವಿರುದ್ಧ ದೈವಕ್ಷೇತ್ರದಲ್ಲಿ ದೂರು ನೀಡೋಕೆ ಮುಂದಾಗಿದ್ದಾರೆ. ದೈವದ ಅಪಹಾಸ್ಯ, ಅನುಕರಣೆ ಮಾಡುವವರ ವಿರುದ್ಧ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಿದ್ದಾರೆ.

ಮಂಗಳೂರಿನ ಹೊರವಲಯದ ಬಜಪೆ, ಪೆರಾರ, ಬ್ರಹ್ಮ ಬಲವಂಡಿ, ಪಿಲ್ಚಂಡಿ ದೈವಸ್ಥಾನಗಳಲ್ಲಿ ದೈವ ನರ್ತಕರು, ದೈವಾರಾಧಕರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ ಆಗಿದೆ. ದೈವದ ಎದುರು ಸಿನಿಮಾ ಬಗ್ಗೆ ದೂರು ಸಲ್ಲಿಸಲಾಗುತ್ತಿದೆ. ಹಾಗೂ ದೈವದ ಅನುಕರಣೆ, ಅಪಹಾಸ್ಯ, ವ್ಯಂಗ್ಯ ಮಾಡುವವರ ವಿರುದ್ಧವೂ ದೂರು ಸಲ್ಲಿಕೆ ಆಗಲಿದೆ. ದೈವದ ಬಳಿ ದೂರು ನೀಡುವುದು ಕರಾವಳಿ, ಮಲೆನಾಡು ಭಾಗದಲ್ಲಿ ನಡೆದುಕೊಂಡು ಬಂದಿರುವ ನಂಬಿಕೆಯಾಗಿದೆ.

ಕಾಂತಾರ ಸಿನಿಮಾ ನೋಡಿ ದೈವದ ಅನುಕರಣೆ ಮಾಡೋದು ತಪ್ಪು ಅಂತ ಹೇಳ್ತಾರೆ. ಆದ್ರೆ  ಸಿನಿಮಾನಲ್ಲಿ ರಿಷಬ್ ಶೆಟ್ಟಿ ದೈವದ ಅನುಕರಣೆ ಮಾಡಿದ್ದು ತಪ್ಪು ಅನ್ಸಿಲ್ವಾ ಅಂತ  ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ ಸಿನಿಮಾಗಳು ಹುಟ್ಟಿದ್ದು ಈಗ ಆದರೆ ಸೂರ್ಯ-ಚಂದ್ರರ ಹುಟ್ಟಿನಿಂದಲೂ ನಮ್ಮ ಹಿರಿಯರು ದೈವದ ಆರಾಧನೆ ಮಾಡುತ್ತಲೇ ಬರುತ್ತಿದ್ದಾರೆ. ಸಿನಿಮಾಗಳಿಂದ ದೈವದ ಆರಾಧನೆಗೆ ಮಹತ್ವ ಸಿಕ್ಕಿತೆಂಬುದು ಸುಳ್ಳು’ ಎಂದು ಕೆಲವರು ದೈವಾರಾಧನೆಯ ಮಹತ್ವವವನ್ನು ಹೇಳಿದ್ದಾರೆ. ಅಷ್ಟೇ ಅಲ್ಲ ಕಾಂತಾರ  ಸಿನಿಮಾ ದೈವದ ಹೆಸರಲ್ಲಿ ಕೋಟಿ-ಕೋಟಿ ಹಣ ಗಳಿಸಿತು, ಆದರೆ ಕೋಟ್ಯಂತರ ಭಕ್ತರ ಭಕ್ತಿ ಮಾರಾಟವಾಯ್ತು ಅಂತ ಕೂಡ ಆಕ್ರೋಶ ಹೊರ ಹಾಕುತ್ತಿದ್ದಾರೆ.  ರಿಷಬ್ ಶೆಟ್ಟಿ, ಹೊಂಬಾಳೆ ಫಿಲಮ್ಸ್, ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆದಾಗಿನಿಂದಲೂ, ದೈವದ ಅನುಕರಣೆ ಮಾಡಬೇಡಿ ಎಂದು ಮನವಿ ಮಾಡುತ್ತಲೇ ಇದೆ. ಆದರೆ ಸಿನಿಮಾ ನೋಡಲು ಹೋದವರು ತಮಾಷೆಗಾಗಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗೋಕೆ, ವೀವ್ಸ್ ಲೈಕ್ಸ್ ಆಗಿ  ದೈವದ ಅನುಕರಣೆ ಮಾಡುತ್ತಲೇ ಇದ್ದಾರೆ.  ನೀವು ಮಾಡೋ ತಪ್ಪಿನಿಂದ ಇಡೀ ಕಾಂತಾರ ತಂಡಕ್ಕೆ ಕೆಟ್ಟ ಹೆಸರು.. ದೈವರ ಹೆಸರಲ್ಲಿ ಯಾರೂ ಕೂಡ ಆಟ ಆಡಬೇಡಿ.

Kishor KV